ಅಪ್ಪ-ಅಮ್ಮ ಮೊಬೈಲ್‌ ಕೊಡ್ತಿಲ್ಲ ಅನ್ನೋ ಕಾರಣಕ್ಕೆ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಮಕ್ಕಳು!

By Santosh Naik  |  First Published Aug 1, 2024, 4:35 PM IST

ಅಪ್ಪ-ಅಮ್ಮ ಮೊಬೈಲ್‌ ನೋಡೋಕೆ ಸಾಕಷ್ಟು ಟೈಮ್‌ ಕೊಡ್ತಾ ಇಲ್ಲ ಅನ್ನೋ ಕಾರಣಕ್ಕೆ ಮಕ್ಕಳಿಬ್ಬರು ಪೋಷಕರ ವಿರುದ್ಧವೇ ಎಫ್‌ಐಆರ್‌ ದಾಖಲು ಮಾಡಿದ್ದಾರೆ. ಇನ್ನು ಪೋಷಕರು ಈ ನಿರ್ಧಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.


ಇಂದೋರ್‌ (ಆ.1): ದೇಶದ ಯುವ ಪೀಳಿಗೆ ಅತ್ಯಂತ ಸೆನ್ಸಿಟಿವ್‌ ಅನ್ನೋದಕ್ಕೆ ಇಲ್ಲೊಂದು ಅತ್ಯುತ್ತಮ ಉದಾಹರಣೆ ಇದೆ. ಅಪ್ಪ-ಅಮ್ಮ ಮೊಬೈಲ್‌ ನೋಡೋಕೆ ಬಿಡ್ತಿಲ್ಲ ಅನ್ನೋ ಕಾರಣಕ್ಕೆ ಇಬ್ಬರು ಮಕ್ಕಳು ತಂದೆ-ತಾಯಿಯನ್ನು ಕೋರ್ಟ್‌ ಮೆಟ್ಟಿಲೇರಿಸಿದ್ದಾರೆ. ನಾವು ಮೊಬೈಲ್‌ ನೋಡೋ ಸಮಯವನ್ನು ತಂದೆ-ತಾಯಿ ಕಡಿಮೆ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಮಕ್ಕಳಿಬ್ಬರೂ ಪೋಷಕರ ವಿರುದ್ಧವೇ ಎಫ್‌ಐಆರ್ ದಾಖಲು ಮಾಡಿದ್ದಾರೆ. ಮೊಬೈಲ್ ಫೋನ್ ಮತ್ತು ಟಿವಿಯ ಅತಿಯಾದ ಬಳಕೆಯ ಬಗ್ಗೆ ಪೋಷಕರ ನಿರಂತರ ಗದರಿಕೆಯಿಂದ ಬೇಸರಗೊಂಡ 21 ವರ್ಷದ ಯುವತಿ 8 ವರ್ಷದ ಸಹೋದರನೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ತಮ್ಮ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ವಿಷಯ ಇಂದೋರ್ ನಗರದ ಚಂದನ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಆರೋಪಗಳು 7 ವರ್ಷಗಳ ಜೈಲು ಶಿಕ್ಷೆಗೆ ಕಾರಣವಾಗಬಹುದು ಎನ್ನಲಾಗಿದೆ.

ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಪೊಲೀಸರು ಅಂತಹ ಸೆಕ್ಷನ್‌ಗಳನ್ನು ಸಹ ವಿಧಿಸಿದ್ದಾರೆ, ಇದು 7 ವರ್ಷಗಳವರೆಗೆ ಶಿಕ್ಷೆಗೆ ಕಾರಣವಾಗಬಹುದು. ಪೋಷಕರ ವಿರುದ್ಧವೂ ಚಲನ್‌ ದಾಖಲಿಸಲಾಗಿದೆ. ನಂತರ ಪೋಷಕರು ಇದನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಬಳಿಕ ಜಿಲ್ಲಾ ನ್ಯಾಯಾಲಯದಲ್ಲಿ ಪೋಷಕರ ವಿರುದ್ಧ ಆರಂಭವಾದ ವಿಚಾರಣೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ವಕೀಲ ಧರ್ಮೇಂದ್ರ ಚೌಧರಿ ಅವರ ಪ್ರಕಾರ, ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, 2021 ರ ಅಕ್ಟೋಬರ್ 25 ರಂದು ಮಕ್ಕಳು ಪೊಲೀಸ್ ಠಾಣೆಗೆ ತಲುಪಿ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಮನೆಯಲ್ಲಿ ಅತಿಯಾಗಿ ಮೊಬೈಲ್‌ ಹಾಗೂ ಟಿವಿ ನೋಡುತ್ತಿದ್ದ ಕಾರಣಕ್ಕೆ ನಮಗೆ ಗದಿರಿಸುವುದು ಹಾಗೂ ಹೊಡೆಯುವುದನ್ನು ಮಾಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಫೋನ್‌ಗಳು ಮತ್ತು ಟಿವಿ ನೋಡುವುದೇ ಪೋಷಕರಿಗೆ ಇಷ್ಟವಿರಲಿಲ್ಲ ಅದಕ್ಕಾಗಿ ಅವರು ನಮಗೆ ಗದರಿಸುತ್ತಿದ್ದರು ಎಂದು ಬಾಲನ್ಯಾಯ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Latest Videos

undefined

20 ದಿನದಲ್ಲಿ ಮರಳಿಸುವೆ ನನ್ನ ಹುಡುಕಬೇಡಿ, ಮನೆ ದೋಚಿ ಮಾಲೀಕನಿಗೆ ವ್ಯಾಟ್ಸಾಪ್ ಸಂದೇಶ!

‘ಮಕ್ಕಳನ್ನೇ ಬೈಯುವುದು ಸಾಮಾನ್ಯವಲ್ಲವೇ’: ಎಫ್‌ಐಆರ್ ದಾಖಲಾದ ನಂತರ ಇಬ್ಬರೂ ಮಕ್ಕಳು ತಮ್ಮ ಚಿಕ್ಕಮ್ಮನೊಂದಿಗೆ ವಾಸಿಸುತ್ತಿದ್ದಾರೆ. ಎಫ್‌ಐಆರ್ ದಾಖಲಿಸುವ ಮುನ್ನ ಪೋಷಕರು ನ್ಯಾಯಾಲಯದಲ್ಲಿ ಹಲವು ಬಾರಿ ಹೇಳಿದ್ದು, ಮಕ್ಕಳು ಮೊಬೈಲ್, ಟಿವಿ ಚಟದಿಂದ ಪ್ರತಿ ಪೋಷಕರೂ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳನ್ನು ಬೈಯುವುದು ತುಂಬಾ ಸಾಮಾನ್ಯ ಸಂಗತಿ ಎಂದಿದ್ದಾರೆ.

ಬ್ಲೂಫಿಲಂ ನೋಡಿ, ಪಕ್ಕದಲ್ಲೇ ಮಲಗಿದ್ದ 9 ವರ್ಷದ ತಂಗಿ ಬಾಯಿ ಮುಚ್ಚಿ 13ರ ಅಣ್ಣನಿಂದ ರೇಪ್; ಮಗನಿಗೆ ತಾಯಿ ಸಾಥ್!

click me!