
ನವದೆಹಲಿ: ಕಳೆದ ವರ್ಷ ಆಪರೇಷನ್ ಸಿಂದೂರದ ಸಮಯದಲ್ಲಿ ಪಾಕಿಸ್ತಾನದ ಪ್ರಮುಖ ಅಣ್ವಸ್ತ್ರ ಕೇಂದ್ರವಾದ ಕಿರಾನಾ ಬೆಟ್ಟದ ಮೇಲೆ ಭಾರತ ದಾಳಿ ನಡೆಸಿತ್ತು ಎಂಬ ವದಂತಿಗೆ ಭಾರತ ತೆರೆ ಎಳೆದಿದೆ. ಉದ್ದೇಶಪೂರ್ವಕವಾಗಿ ಕಿರಾನಾ ಹಿಲ್ಸ್ ಮೇಲೆ ಭಾರತ ದಾಳಿ ನಡೆಸಿರಲಿಲ್ಲ, ಬದಲಾಗಿ ನಾವು ಹಾರಿಬಿಟ್ಟ ಡ್ರೋನ್‌ನ ಇಂಧನ ಖಾಲಿಯಾಗಿ ಅದರ ಮೇಲೆ ಅಪ್ಪಳಿಸಿತು ಎಂದು ಮಾಜಿ ಸಿಡಿಎಸ್ ಜ. ಅನಿಲ್ ಚೌಹಾಣ್ ತಿಳಿಸಿದ್ದಾರೆ.
ದೆಹಲಿಯ ವಿವೇಕಾನಂದ ಅಂತಾರಾಷ್ಟ್ರೀಯ ಫೌಂಡೇಶನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಭಾರತವು ಕಿರಾನಾ ಹಿಲ್ಸ್ ಅನ್ನು ಗುರಿಯಾಗಿಸಿಕೊಂಡಿರಲಿಲ್ಲ ಎಂದು ವಾಯುಪಡೆಯ ಮಾಜಿ ಏರ್ ಮಾರ್ಷಲ್ ಎ.ಕೆ. ಭಾರತಿ ಅವರು ನೀಡಿದ್ದ ಹೇಳಿಕೆ ಸಂಪೂರ್ಣ ಸತ್ಯ.
ಭಾರತೀಯ ಪಡೆಗಳು ಸರ್ಗೋಧಾ ಮತ್ತು ಅದರಿಂದ ಸುಮಾರು 10 ಕಿ.ಮೀ. ದೂರದಲ್ಲಿರುವ ಕಿರಾನಾ ಹಿಲ್ಸ್ ಪ್ರದೇಶದಲ್ಲಿ ಶತ್ರುಗಳ ರೇಡಾರ್‌ಗಳನ್ನು ಧ್ವಂಸಗೊಳಿಸಲು ಹಲವು ಲಾಯಿಟರಿಂಗ್ ಅಮ್ಯುನಿಷನ್ ಡ್ರೋನ್‌ಗಳನ್ನು ಕಾರ್ಯಾಚರಣೆಗೆ ಇಳಿಸಿದ್ದವು. ಸುಮಾರು 2 ಗಂಟೆ ಕಾಲ ಆಕಾಶದಲ್ಲೇ ಸುತ್ತಾಡಿ ಗುರಿಯನ್ನು ಹುಡುಕುವ ಸಾಮರ್ಥ್ಯ ಹೊಂದಿರುವ ಈ ಡ್ರೋನ್‌ಗಳಿಗೆ ನಿರ್ದಿಷ್ಟ ರೇಡಾರ್ ಗುರಿ ಸಿಗದಿದ್ದಾಗ ಹಾಗೂ ಇಂಧನ ಮುಗಿಯುವ ಹಂತ ತಲುಪಿದಾಗ, ಅವು ಸುರಕ್ಷಿತವಾಗಿ ಯಾವುದಾದರೂ ಒಂದು ಪ್ರದೇಶಕ್ಕೆ ಅಪ್ಪಳಿಸುವಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಅದರಂತೆ ಇಂಧನ ಖಾಲಿಯಾದ ಭಾರತದ ಡ್ರೋನ್ ಕಿರಾನಾ ಬೆಟ್ಟಗಳ ಸಾಲಿನಲ್ಲಿ ಬಿದ್ದಿತ್ತು’ ಎಂದರು.
ಇದನ್ನೂ ಓದಿ: ಭಾರತದ ಯುವಕರಿಗಾಗಿ ಬಂದರು 150 ಪಾಕ್ ಯುವತಿಯರು: ಲೈನ್ನಲ್ಲಿ ಇದ್ದಾರೆ ಇನ್ನೂ 300 ಮಂದಿ- ಏನಿದು ವಿಷ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ