ಕಾರ್ಮಿಕರ ಮೇಲೆ ದಾಳಿ: ಸುಳ್ಳು ಸುದ್ದಿ ಹಬ್ಬಿಸಿದ್ದ ಬಿಹಾರಿ ಯುಟ್ಯೂಬರ್‌ ಸೆರೆ

Published : Mar 19, 2023, 09:25 AM IST
 ಕಾರ್ಮಿಕರ ಮೇಲೆ ದಾಳಿ: ಸುಳ್ಳು ಸುದ್ದಿ ಹಬ್ಬಿಸಿದ್ದ ಬಿಹಾರಿ ಯುಟ್ಯೂಬರ್‌ ಸೆರೆ

ಸಾರಾಂಶ

ಬಿಹಾರದ ವಲಸೆ ಕಾರ್ಮಿಕರ ಮೇಲೆ ತಮಿಳುನಾಡಿನಲ್ಲಿ ಹಲ್ಲೆ ನಡೆಸಲಾಗುತ್ತಿದೆ ಎಂಬ ಸುಳ್ಳು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ವಲಸೆ ಕಾರ್ಮಿಕರಲ್ಲಿ ಭಾರೀ ಅತಂಕ ಸೃಷ್ಟಿಸಿದ್ದ ಮನೀಶ್‌ ಕಶ್ಯಪ್‌ ಎಂಬ ಯುಟ್ಯೂಬರ್‌ನನ್ನು ಬಿಹಾರ ಪೊಲೀಸರು ಶನಿವಾರ ಬಂಧಿಸಿದ್ದಾರೆ.

ಪಟನಾ: ಬಿಹಾರದ ವಲಸೆ ಕಾರ್ಮಿಕರ ಮೇಲೆ ತಮಿಳುನಾಡಿನಲ್ಲಿ ಹಲ್ಲೆ ನಡೆಸಲಾಗುತ್ತಿದೆ ಎಂಬ ಸುಳ್ಳು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು, ವಲಸೆ ಕಾರ್ಮಿಕರಲ್ಲಿ ಭಾರೀ ಅತಂಕ ಸೃಷ್ಟಿಸಿದ್ದ ಮನೀಶ್‌ ಕಶ್ಯಪ್‌ ಎಂಬ ಯುಟ್ಯೂಬರ್‌ನನ್ನು ಬಿಹಾರ ಪೊಲೀಸರು ಶನಿವಾರ ಬಂಧಿಸಿದ್ದಾರೆ. ನಾಪತ್ತೆಯಾಗಿದ್ದ ಮನೀಶ್‌ನ ಮನೆ ಜಪ್ತಿಗೆ ಪೊಲೀಸರು ಮುಂದಾದ ಬೆನ್ನಲ್ಲೇ ಆತ ಪಶ್ಚಿಮ ಚಂಪಾರಣ ಜಿಲ್ಲೆಯ ಬೆಟ್ಟಯ್ಯಾ ಎಂಬಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಬಳಿಕ ಆತನನ್ನು ಬಂಧಿಸಲಾಗಿದೆ. ಮಾ.6ರಂದು ಕಶ್ಯಪ್‌ (Manish Kashyap)ಮೇಲೆ ಬಿಹಾರ ಪೊಲೀಸರು ಎಫ್‌ಐಆರ್‌ (FIR) ದಾಖಲಿಸಿಕೊಂಡಿದ್ದರೆ. ತಮಿಳುನಾಡು ಪೊಲೀಸರು ಸಹ 13 ಪ್ರಕರಣ ದಾಖಲಿಸಿದ್ದಾರೆ.

ತಮಿಳುನಾಡಿನ ವಿವಿಧ ಕಡೆ ಉತ್ತರ ಭಾರತದ ವಲಸಿಗ ಕಾರ್ಮಿಕರ (Labourer)ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಬಿಂಬಿಸುವ ವಿಡಿಯೋವೊಂದನ್ನು ಮನೀಶ್‌ ಜಾಲತಾಣದಲ್ಲಿ ಹಾಕಿದ್ದ. ಇದರಿಂದ ಆತಂಕಕ್ಕೆ ಒಳಗಾದ ಸಾವಿರಾರು ಬಿಹಾರ ವಲಸಿಗ ಕಾರ್ಮಿಕರು ಏಕಾಏಕಿ ತವರಿನತ್ತ ಮುಖ ಮಾಡಿದ್ದರು. ಈ ವಿಷಯ ಬಿಹಾರದಲ್ಲಿ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿತ್ತು.ಮತ್ತೊಂದೆಡೆ ಬಿಹಾರ ಸರ್ಕಾರ ಹಿರಿಯ ಐಎಎಸ್‌ ಅಧಿಕಾರಿಗಳ (IAS Officer) ಸತ್ಯಶೋಧನಾ ತಂಡ ಕಳುಹಿಸಿ ಪರಿಸ್ಥಿತಿ ಪರಿಶೀಲಿಸುವ ಕೆಲಸ ಮಾಡಿತ್ತು. ಇನ್ನೊಂದೆಡೆ ಸ್ವತಃ ತಮಿಳುನಾಡು(tamilnadu) ಮುಖ್ಯಮಂತ್ರಿ ಸ್ಟಾಲಿನ್‌ (Stalin) ಅವರೇ ವಲಸೆ ಕಾರ್ಮಿಕರನ್ನು ಭೇಟಿಯಾಗಿ ರಾಜ್ಯ ಸುರಕ್ಷಿತವಾಗಿದೆ ಎಂದು ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದ್ದರು.

ವಲಸೆ ಕಾರ್ಮಿಕರ ಮೇಲೆ ಹಲ್ಲೆ: ನಕಲಿ ವಿಡಿಯೋ ಬಿಟ್ಟ ಬಿಹಾರಿ ಸೆರೆ 

ಇದಕ್ಕೂ ಮೊದಲು ಇತ್ತೀಚೆಗೆ ತಮಿಳುನಾಡಿನಲ್ಲಿ ಬಿಹಾರದ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂದು ಸುಳ್ಳು ವಿಡಿಯೋ ಹರಿಬಿಟ್ಟ 32 ವರ್ಷದ ವ್ಯಕ್ತಿಯನ್ನು ಜಾರ್ಖಂಡಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ತಿರುಪುರ ಸೈಬರ್ ಅಪರಾಧ ದಳದ ವಿಶೇಷ ತಂಡ  ಆರೋಪಿಯನ್ನು ಬಂಧಿಸಿದೆ.  ಬಂಧಿತ 32 ವರ್ಷದ ವ್ಯಕ್ತಿ ಬಿಹಾರ ಮೂಲದವನಾಗಿದ್ದು ಪ್ರಸ್ತುತ ಜಾರ್ಖಂಡಿನ (Jharkhand) ಲಾತೇಹಾರದಲ್ಲಿ ಕೆಲಸ ಮಾಡುತ್ತಿದ್ದ. ಈತ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮಿಳುನಾಡಿನ ತಿರುಪುರ್‌ನಲ್ಲಿ (Tirupur) ವಲಸೆ ಕಾರ್ಮಿಕರ ಮೇಲೆ ಹಲ್ಲೆಯಾಗಿದೆ ಎಂಬಂತೆ ಫೇಕ್ ವಿಡಿಯೋವನ್ನು ಹರಿಬಿಟ್ಟು ಕಾರ್ಮಿಕರಲ್ಲಿ ಭಯ ಮೂಡಿಸಿದ್ದ. 

ಪ್ರಶಾಂತ್ ಕುಮಾರ್ (Prashanth kumar) ಬಂಧಿತ ಆರೋಪಿ.  ಮಾರ್ಚ್‌ 11 ರಂದು ಈತನನ್ನು ಬಂಧಿಸಿ ಲಾತೇಹಾರ್‌ನ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.  ನಂತರ ಟ್ರಾನ್ಸಿಟ್ ವಾರೆಂಟ್ ಪಡೆದು ತಮಿಳುನಾಡಿನ (Tamilnadu) ತಿರುಪುರ್‌ನ ಮೂರನೇ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಿದ್ದರು. ನ್ಯಾಯಾಲಯ ಈತನನ್ನು ನ್ಯಾಯಾಂಗ ವಶಕ್ಕೆ ನೀಡಿದೆ. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಬಿಹಾರ ಸಮಿತಿ ತಮಿಳುನಾಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇದು ಸುಳ್ಳು ವಿಡಿಯೋ ಎಂದು ಖಾತ್ರಿಪಡಿಸಿದ್ದರು. ಅನಂತರ ಇದರ ತನಿಖೆ ನಡೆಸಿದ ತಿರುಪೂರು ಸೈಬರ್‌ ಪೊಲೀಸರು (Cyber Police), ಈತನನ್ನು ಜಾರ್ಖಂಡಿನಲ್ಲಿ ಬಂಧಿಸಿ ತಿರುಪುರದ 3ನೇ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಈತನಿಗೆ ನ್ಯಾಯಾಂಗ ಬಂಧನದಲ್ಲಿಡುವಂತೆ ಆದೇಶಿಸಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಪೊಲೀಸರು 11 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದರು.

ತಮಿಳ್ನಾಡಲ್ಲಿ ಬಿಹಾರಿಗಳ ಕೊಲೆ ವದಂತಿ: ಉ.ಪ್ರ. ಬಿಜೆಪಿ ಮುಖಂಡ, ಇಬ್ಬರು ಪತ್ರಕರ್ತರ ವಿರುದ್ಧ ಕೇಸ್‌

ಉ.ಪ್ರ. ಬಿಜೆಪಿ ಮುಖಂಡ, ಇಬ್ಬರು ಪತ್ರಕರ್ತರ ವಿರುದ್ಧ ಕೇಸ್‌

ಕೆಲ ದಿನಗಳಿಂದ ತಮಿಳುನಾಡಿನಲ್ಲಿ ಬಿಹಾರಿ ವಲಸಿಗ ಕಾರ್ಮಿಕರನ್ನು ಹತ್ಯೆಗೈಯಲಾಗುತ್ತಿದೆ’ ಎಂದು ಉತ್ತರ ಭಾರತದ ರಾಜ್ಯಗಳಲ್ಲಿ ತೀವ್ರ ವದಂತಿ ಹರಡಿತ್ತು. ಈ ಕುರಿತು ಸುಳ್ಳು ಟ್ವೀಟ್‌ ಮಾಡಿದ ಉತ್ತರ ಪ್ರದೇಶದ ಬಿಜೆಪಿ ನಾಯಕನ ವಿರುದ್ಧ ಹಾಗೂ ಇಬ್ಬರು ಪತ್ರಕರ್ತರ ವಿರುದ್ಧ ತಮಿಳುನಾಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?