5 ವರ್ಷದಲ್ಲಿ ದೇಶದ ಎನ್‌ಜಿಒಗಳಿಗೆ 89000 ಕೋಟಿ ವಿದೇಶಿ ದೇಣಿಗೆ

By Kannadaprabha NewsFirst Published Mar 19, 2023, 7:45 AM IST
Highlights

ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿರುವ ಸರ್ಕಾರೇತರ ಸಂಸ್ಥೆಗಳಿಗೆ (ಎನ್‌ಜಿಒ) ವಿದೇಶಗಳಿಂದ ಸುಮಾರು 89000 ಕೋಟಿ ರು. ದೇಣಿಗೆ ಹರಿದುಬಂದಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಅದರಲ್ಲೂ ಕಳೆದ ವರ್ಷ ದೆಹಲಿಯನ್ನು ಹೊರತುಪಡಿಸಿದರೆ ಕರ್ನಾಟಕಕ್ಕೇ ಅತಿಹೆಚ್ಚು ವಿದೇಶಿ ದೇಣಿಗೆ ಬಂದಿದೆ.

ನವದೆಹಲಿ: ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿರುವ ಸರ್ಕಾರೇತರ ಸಂಸ್ಥೆಗಳಿಗೆ (ಎನ್‌ಜಿಒ) ವಿದೇಶಗಳಿಂದ ಸುಮಾರು 89000 ಕೋಟಿ ರು. ದೇಣಿಗೆ ಹರಿದುಬಂದಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಅದರಲ್ಲೂ ಕಳೆದ ವರ್ಷ ದೆಹಲಿಯನ್ನು ಹೊರತುಪಡಿಸಿದರೆ ಕರ್ನಾಟಕಕ್ಕೇ ಅತಿಹೆಚ್ಚು ವಿದೇಶಿ ದೇಣಿಗೆ ಬಂದಿದೆ.

2017ರಿಂದ 2022ರ ನಡುವೆ ದೇಶದಲ್ಲಿರುವ ಎನ್‌ಜಿಒಗಳಿಗೆ (NGO) ಒಟ್ಟು 88,882 ಕೋಟಿ ರು. ವಿದೇಶಿ ದೇಣಿಗೆ ಬಂದಿದೆ. ಈ ಸಮಯದಲ್ಲಿ ಎನ್‌ಜಿಒಗಳು ವಿದೇಶಿ ದೇಣಿಗೆ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಸರ್ಕಾರ ಎನ್‌ಜಿಗಳ ಮೇಲೆ ದಾಳಿಗಳನ್ನು ನಡೆಸಿತ್ತು. ಆಗ ಪತ್ತೆಯಾದ ಅಕ್ರಮಗಳನ್ವಯ ಹಲವಾರು ಎನ್‌ಜಿಒಗಳ ಪರವಾನಗಿ ರದ್ದುಪಡಿಸಿತ್ತು. ಆದರೂ ಈ ಅವಧಿಯಲ್ಲಿ ವರ್ಷದಿಂದ ವರ್ಷಕ್ಕೆ ದೇಶದ ಎನ್‌ಜಿಒಗಳಿಗೆ ಬಂದ ವಿದೇಶಿ ದೇಣಿಗೆಯ ಪ್ರಮಾಣ ಏರಿಕೆಯಾಗುತ್ತಲೇ ಸಾಗಿದೆ.

ತಂದೆ ಹೆಸರಿನಲ್ಲಿ NGO ಆರಂಭಿಸಿದ ಕಿರುತೆರೆ ನಟಿ ಶ್ವೇತಾ ಪ್ರಸಾದ್

‘2020ರಲ್ಲಿ 16,306 ಕೋಟಿ ರು., 2021ರಲ್ಲಿ 17,059 ಕೋಟಿ ರು. ಹಾಗೂ 2022ರಲ್ಲಿ 22,085 ಕೋಟಿ ರು. ವಿದೇಶಿ ದೇಣಿಗೆ ಬಂದಿದೆ. 2017ರಿಂದ 2021ರ ನಡುವೆ 6677 ಎನ್‌ಜಿಒಗಳ ಲೈಸೆನ್ಸ್‌ (NGO License) ರದ್ದುಪಡಿಸಲಾಗಿದೆ. ಸದ್ಯ ದೇಶದಲ್ಲಿ ವಿದೇಶಿ ದೇಣಿಗೆ ಸ್ವೀಕರಿಸಲು ಅರ್ಹತೆಯಿರುವ 16,383 ಎನ್‌ಜಿಒಗಳಿವೆ’ ಎಂದು ರಾಜ್ಯಸಭೆಗೆ ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ. ದೆಹಲಿಯಲ್ಲಿರುವ ಎನ್‌ಜಿಒಗಳು ಅತಿಹೆಚ್ಚು ವಿದೇಶಿ ದೇಣಿಗೆಗಳನ್ನು ಸ್ವೀಕರಿಸುತ್ತಿವೆ. 2022ರಲ್ಲಿ ತಮಿಳುನಾಡನ್ನು (Tamilnadu) ಹಿಂದಿಕ್ಕಿ ಕರ್ನಾಟಕದ ಎನ್‌ಜಿಒಗಳು ದೇಶದಲ್ಲೇ ಎರಡನೇ ಅತಿಹೆಚ್ಚು ವಿದೇಶಿ ದೇಣಿಗೆಗಳನ್ನು ಸ್ವೀಕರಿಸಿವೆ. ತಮಿಳುನಾಡು 3ನೇ ಸ್ಥಾನದಲ್ಲಿ ಹಾಗೂ ಮಹಾರಾಷ್ಟ್ರ 4ನೇ ಸ್ಥಾನದಲ್ಲಿದೆ.


ಮಣಿಶಂಕರ್ ಅಯ್ಯರ್‌ ಪುತ್ರಿ ಎನ್‌ಜಿಒದ ವಿದೇಶಿ ದೇಣಿಗೆ ಲೈಸೆನ್ಸ್‌ ಅಮಾನತು

 

click me!