Vegetable Price in Chennai : ನಗರದಲ್ಲಿ ಕೈ ಸುಡುತ್ತಿದೆ ಟೊಮೆಟೋ ಬೆಲೆ

By Kannadaprabha NewsFirst Published Nov 25, 2021, 11:47 AM IST
Highlights
  • ದಕ್ಷಿಣ ಭಾರತದಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ
  •  ಚೆನ್ನೈನಲ್ಲಿ ಪ್ರತಿ ಕೆಜಿ ಟೊಮೊಟೋ ದರವನ್ನು 150 ರು.ಗೆ ಮುಟ್ಟಿಸಿದೆ

ಚೆನ್ನೈ (ನ.25): ದಕ್ಷಿಣ ಭಾರತದಲ್ಲಿ (South India) ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ (Heavy Rain ), ಚೆನ್ನೈನಲ್ಲಿ (Chennai) ಪ್ರತಿ ಕೆಜಿ ಟೊಮೊಟೋ (Tomato) ದರವನ್ನು 150 ರು.ಗೆ ಮುಟ್ಟಿಸಿದೆ. ಕರ್ನಾಟಕದಿಂದ (Karnataka) ಟೊಮೆಟೋ ಆಗಮನ ಸ್ಥಗಿತವಾಗಿರುವುದು, ಕೃಷ್ಣಗಿರಿಯಲ್ಲಿ ಮಳೆಯಿಂದಾಗಿ ಬೆಳೆ ನಷ್ಟವಾದ (Crop Loss) ಕಾರಣ, ಬೇಡಿಕೆಗೆ ಅಗತ್ಯ ಪ್ರಮಾಣದ ಪೂರೈಕೆ (supply) ಆಗುತ್ತಿಲ್ಲ. ಹೀಗಾಗಿ ಇಲ್ಲಿನ ಸಗಟು ಮಾರುಕಟ್ಟೆಯಲ್ಲಿ (Market) ಪ್ರತಿ ಕೆಜಿ ಟೊಮೆಟೊ ಬೆಲೆ 120 ರು.ತಲುಪಿದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ದರ 150 ರು. ಮುಟ್ಟಿದೆ.

ಮಳೆ ಆರಂಭಕ್ಕಿಂತ ಮೊದಲು ಪ್ರತೀ ಕೆಜಿ ಟೊಮ್ಯಾಟೊಗೆ 20 ರು. ನಂತೆ ಮಾರಾಟ (Sale) ಮಾಡಲಾಗುತಿತ್ತು. ಏಕಾಏಕಿ ಆರಂಭವಾದ ಮಳೆ ತರಕಾರಿ ಬೆಲೆಗಳನ್ನು (Vegetable Price) ಗಗನಕ್ಕೆ ಏರುವಂತೆ ಮಾಡಿತ್ತು. ಇದರಿಂದ ಗ್ರಾಹಕರಿಗೆ (customers) ಬಿಸಿ ತಟ್ಟಿದೆ.  ಕರ್ನಾಟಕ ಹಾಗು ಆಂಧ್ರ ಪ್ರದೇಶದಿಂದ (Andhra pradesh) ಸರಬರಾಜಾಗುತ್ತಿದ್ದ ಟೊಮೊಟೊ ಪೂರೈಕೆ ನಿಂತ ಕಾರಣ ಚೆನ್ನೈ (Chennai) ನಗರದಲ್ಲಿ ಏಕಾಏಕಿ ಬೆಲೆ ಏರಿಕೆಗೆ ಕಾರಣ ಆಯ್ತು.  ಭಾರೀ ಮಳೆಯಿಂದ ರೈತರು (farmers) ಬೆಳೆದ ಬೆಳೆ ಸಂಪೂರ್ಣವಾಗಿ ನೆಲ ಕಚ್ಚಿದ್ದು ಶೇ.80 ರಷ್ಟು ಬೆಳೆ ಹಾಳಾಗಿದೆ ಎನ್ನಲಾಗಿದೆ. ಇದರಿಂದ ತರಕಾರಿಗಳ ಬೆಲೆ ದಿನೇ ದಿನೇ ಗಗನಕ್ಕೆ ಏರುತ್ತಿದೆ. 

ಇನ್ನು ಟೊಮೆಟೊ ಜೊತೆ ಈರುಳ್ಳಿ (Onian) ಹಾಗು ಅಲೂಗಡ್ಡೆ (Potato) ಬೆಲೆಯಲ್ಲಿಯೂ ಏರಿಕೆಯಾಗುತ್ತಿದೆ. 60 ರು.ಗಿಂತಲೂ ಹೆಚ್ಚು ಬೆಲೆಯಲ್ಲಿ ಪ್ರತೀ ಕೆಜಿಗೆ ಮಾರಾಟ ಮಾಡಲಾಗುತ್ತಿದೆ. ಇನ್ನು ಬೆಂಡೆ ಕಾಯಿ. ಸೌತೆಕಾಯಿ, ಮೆಣಸು, ಬಿಟ್ರೋಟ್, ಮೂಲಂಗಿ ಎಲ್ಲಾ ತರಕಾರಿಗಳ ಬೆಲೆಯೂ ಗಗನ ಮುಖಿಯಾಗಿಯೇ ಸಾಗುತ್ತಿದೆ.

ರಾಜ್ಯದಲ್ಲಿಯೂ ಏರಿಕೆ :   ನಿರಂತರ ಮಳೆಯಿಂದ (Heavy Rain) ನಗರದ ಮಾರುಕಟ್ಟೆಗಳಿಗೆ (Market) ತರಕಾರಿಗಳು ಸಮರ್ಪಕ ಪೂರೈಕೆ ಆಗದ ಹಿನ್ನೆಲೆಯಲ್ಲಿ ಟೊಮೆಟೋ (Tomato), ಕ್ಯಾಪ್ಸಿಕಂ (Capsicum) ಸೇರಿದಂತೆ ಎಲ್ಲ ತರಕಾರಿಗಳ (Vegetable) ಸಗಟು ಮತ್ತು ಚಿಲ್ಲರೆ ಬೆಲೆ (Price) ದುಪ್ಪಟ್ಟಾಗಿದೆ.  ಹಲವು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಸೊಪ್ಪು, ತರಕಾರಿ ಉತ್ಪನ್ನ ರೈತರ ಜಮೀನಿನಲ್ಲೇ  ಹಾಳಾಗಿದೆ. ಇದರಿಂದ ಬೆಂಗಳೂರು ಮಾರುಕಟ್ಟೆಗೆ (Bengaluru Market) ಹೊಸಕೋಟೆ, ಕೋಲಾರ (Kolar), ಚಿಕ್ಕಬಳ್ಳಾಪುರ, ಗೌರಿಬಿದನೂರು, ರಾಮನಗರ, ತುಮಕೂರು (Tumakuru), ಶಿರಾ ಸೇರಿದಂತೆ ಮತ್ತಿತರ ಪ್ರದೇಶಗಳಿಂದ ಹೆಚ್ಚಿನ ಪ್ರಮಾಣದ ತರಕಾರಿ ಪೂರೈಕೆ ಆಗಿಲ್ಲ. ಅಲ್ಪ ಪ್ರಮಾಣದ ತರಕಾರಿ ಮಾತ್ರ ಬರುತ್ತಿದೆ.

ಹೀಗಾಗಿ ಟೊಮೆಟೋ  ಮತ್ತು ಕ್ಯಾಪ್ಸಿಕಂ ಬೆಲೆ  100 ರು. ಗಡಿ ದಾಟಿದೆ. ಕಳೆದೆರಡು ದಿನಕ್ಕೆ ಹೋಲಿಸಿದರೆ ಸೋಮವಾರ ಟೊಮೆಟೋ ಸಗಟು ದರದಲ್ಲಿ ಸುಮಾರು  10 ರು. ಕಡಿಮೆ ಆಗಿದ್ದರೂ ಸಹ ಚಿಲ್ಲರೆ ಬೆಲೆ ಮಾತ್ರ ಇಳಿದಿಲ್ಲ. ಮಳೆ ಹೀಗೆ ಮುಂದುವರಿದರೆ ದರ (Price ) ಇನ್ನಷ್ಟುಏರಿಕೆಯಾಗುವ ಸಂಭವವಿದೆ. ಒಂದು ವೇಳೆ ಮಳೆ ಕಡಿಮೆಯಾದರೂ ಸೊಪ್ಪುಗಳ ಹೊರತಾಗಿ ತರಕಾರಿಗಳ ದರಗಳು ಕೂಡಲೇ ಇಳಿಕೆ ಆಗದು ಎನ್ನುತ್ತಾರೆ ಎಂದು ದಾಸನಪುರ ಕೆಂಪೇಗೌಡ ಮಾರುಕಟ್ಟೆಯ (kempegowda market) ತರಕಾರಿ ವರ್ತಕರ ಸಂಘದ ಅಧ್ಯಕ್ಷ ಗೋವಿಂದಪ್ಪ.

ಸಗಟು ದರ ಸಹ ಅಧಿಕ

ಸಾಮಾನ್ಯವಾಗಿ ತರಕಾರಿಗಳ ಸಗಟು ದರ  15-30 ರು. ಆಸುಪಾಸಿನಲ್ಲಿರುತ್ತದೆ. ಮಳೆಯಿಂದಾಗಿ (heav rain) ಸದ್ಯ ಸಗಟು ದರ ದುಪ್ಪಟ್ಟಾಗಿದ್ದು, ಕೆಲವು ತರಕಾರಿಗಳ ದರ ಮೂರು ಪಟ್ಟು ಹೆಚ್ಚಾಗಿದೆ. ಸೋಮವಾರ ಕೇಜಿ ಟೊಮೆಟೋ ಸಗಟು ದರ  80-90 ರು. , ಕ್ಯಾಪ್ಸಿಕಂ ಕೇಜಿಗೆ  80-100 ರು.ಕ್ಕೆ ಚಿಲ್ಲರೆ ವ್ಯಾಪಾರಿಗಳು ಖರೀದಿಸಿದ್ದಾರೆ. ಕೇಜಿ ಬದನೆ (Brinjal)   70 ರು., ಆಲೂಗಡ್ಡೆ  25-30, ಈರುಳ್ಳಿ  35-40 ರು. ಇದ್ದರೆ, ಬೀನ್ಸ್‌ 30-40, ಕ್ಯಾರೆಟ್‌ 50-60 ಆಗಿದೆ. ಹಸಿ ಮೆಣಸಿನಕಾಯಿ (Chilly) ಕೇಜಿಗೆ 35-40 ರು., ದಪ್ಪ ಮೆಣಸಿನಕಾಯಿ  50 ರು. ಏರಿಕೆ ಆಗಿದೆ.

ಮೂಲಂಗಿ 40 ರು., ಬಿಟ್‌ರೂಟ್‌ ಮತ್ತು ಹಾಗಲಕಾಯಿ ತಲಾ  50 ರು., ಹಿರೇಕಾಯಿ  60 ರು. ಇತ್ತು. ಉಳಿದಂತೆ ಕಟ್ಟು ಕೊತ್ತಂಬರಿಗೆ  25 ರು. , ಪಾಲಕ್‌ 15-20 ರು. ಮತ್ತು ಪುದೀನ  10-15ಕ್ಕೆ  ರು. ಮಾರಾಟವಾಯಿತು.

ಚಿಲ್ಲರೆ ದರ (ಕೆಜಿಗೆ)ಪಟ್ಟಿ

ತರಕಾರಿ ಚಿಲ್ಲರೆ ಹಾಪ್‌ಕಾಮ್ಸ್‌

ಟೊಮೆಟೋ 111-120 100

ಕ್ಯಾಪ್ಸಿಕಂ 80-120 130

ಈರುಳ್ಳಿ 40-55 48

ಬದನೆ 70-80 75

ಆಲೂಗಡ್ಡೆ 35-45 42

ಸೌತೆ 20-25 22

ಹಸಿಮೆಣಸಿನಕಾಯಿ 50-60 64

ದಪ್ಪಮೆಣಸಿನಕಾಯಿ 60-70 67

ಬಿಟ್‌ರೂಟ್‌ 55-65 54

ಹಿರೇಕಾಯಿ 65-75 -

ಮೂಲಂಗಿ 45-60 62

ಕಟ್ಟುಕೊತ್ತಂಬರಿ 20-25 67(ಕೇಜಿ)

ಪುದಿನ 10-15 56(ಕೇಜಿ)

ಕರಿಬೇವು 10 67(ಕೇಜಿ)

click me!