Delhi Pollution: ವಿಶ್ವಕ್ಕೆ ನಾವು ಎಂಥ ಸಂದೇಶ ನೀಡುತ್ತಿದ್ದೇವೆ? ಸರ್ಕಾರಗಳಿಗೆ ಮತ್ತೆ ಸುಪ್ರೀಂ ಚಾಟಿ!

By Suvarna NewsFirst Published Nov 25, 2021, 4:30 AM IST
Highlights

* ಹೀಗಾಗುತ್ತೆ ಎಂಬ ಅಂದಾಜು ಮೊದಲೇ ಏಕೆ ಮಾಡುತ್ತಿಲ್ಲ?

* ದಿಲ್ಲಿ ಮಾಲಿನ್ಯ: ಸರ್ಕಾರಗಳಿಗೆ ಮತ್ತೆ ಸುಪ್ರೀಂ ಚಾಟಿ

* ಕೊನೆಯವರೆಗೆ ಕಾದು ಕ್ರಮ ಜರುಗಿಸುವಿಕೆ ಏಕೆ?

* ವಿಶ್ವಕ್ಕೆ ನಾವು ಎಂಥ ಸಂದೇಶ ನೀಡುತ್ತಿದ್ದೇವೆ ಗೊತ್ತೆ?

* 3 ದಿನ ಕ್ರಮ ಮುಂದುವರಿಸಿ, ಆಮೇಲೆ ನಿರ್ಬಂಧ ಸಡಿಲದ ಮಾತು

ನವದೆಹಲಿ(ನ.25): ದಿಲ್ಲಿ ಹಾಗೂ ಸುತ್ತಮುತ್ತಲಿನ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಕೆಲ ದಿನಗಳ ಮಟ್ಟಿಗೆ ಮುಂದುವರಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್‌ ಸೂಚಿಸಿದೆ ಹಾಗೂ ಇಂಥದ್ದು ಆಗದಂತೆ ಮೊದಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದೆ. ‘ಇದು ರಾಷ್ಟ್ರ ರಾಜಧಾನಿ. ಇಲ್ಲೇ ಹೀಗಾಯಿತು ಎಂದರೆ ನಾವು ವಿಶ್ವಕ್ಕೆ ಎಂಥ ಸಂದೇಶ ನೀಡುತ್ತಿದ್ದೇವೆ ನೋಡಿ’ ಎಂದೂ ಕೋರ್ಟ್‌ ಚಾಟಿ ಬೀಸಿದೆ.

ವಾಯುಮಾಲಿನ್ಯ ಕುರಿತು ಬುಧವಾರ ವಿಚಾರಣೆ ಮುಂದುವರಿಸಿದ ನ್ಯಾ| ಎನ್‌.ವಿ. ರಮಣ ಅವರ ನ್ಯಾಯಪೀಠ, ‘ಯಾವಾಗ ಹವಾಮಾನ ಹದಗೆಡುತ್ತದೋ ಆಗ ಕ್ರಮ ಕೈಗೊಳ್ಳುತ್ತೇವೆ. ಆದರೆ ಹೀಗಾಗಬಹುದು ಎಂದು ವೈಜ್ಞಾನಿಕ ಅಧ್ಯಯನ ನಡೆಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಯಾಕೆ ಹೀಗೆ ಮಾಡುತ್ತಿಲ್ಲ?’ ಎಂದು ಗಡ್ಡಕ್ಕೆ ಬೆಂಕಿ ಹತ್ತಿಕೊಳ್ಳುವಾಗ ಬಾವಿ ತೋಡುವ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡಿತು.

‘ಇನ್ನೂ 2-3 ದಿನ ಮಾಲಿನ್ಯ ನಿಯಂತ್ರಣ ಕ್ರಮ ಮುಂದುವರಿಸಿ. ಬರುವ ಸೋಮವಾರ ವಿಚಾರಣೆ ನಡೆಸೋಣ. ಮಾಲಿನ್ಯಗುಣಮಟ್ಟಸೂಚ್ಯಂಕ 100ಕ್ಕೆ ಇಳಿದರೆ ನಿರ್ಬಂಧ ಸಡಿಲಿಸುವ ವಿಚಾರ ಮಾಡೋಣ’ ಎಂದು ಹೇಳಿದ ಪೀಠ ವಿಚಾರಣೆ ಮುಂದೂಡಿತು.

ರೈತರ ಬಗ್ಗೆ ಅನಗತ್ಯ ಗದ್ದಲ:

ವಿಚಾರಣೆಯ ವೇಳೆ ಕೇಂದ್ರ ಸರ್ಕಾರವು ದೆಹಲಿಯಲ್ಲಿನ ವಾಯುಮಾಲಿನ್ಯಕ್ಕೆ ಸುತ್ತಮುತ್ತಲ ರಾಜ್ಯಗಳ ರೈತರು ಹುಲ್ಲು ಸುಡುವುದು ಕೇವಲ ಶೇ.4ರಿಂದ ಶೇ.10ರಷ್ಟುಮಾತ್ರ ಕಾರಣ ಎಂದು ತಿಳಿಸಿತು. ಅದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರ ಪೀಠ, ಹಾಗಿದ್ದರೆ ಇಷ್ಟುದಿನ ಏಕೆ ರೈತರ ಬಗ್ಗೆ ಅಷ್ಟೊಂದು ಗದ್ದಲ ಎಬ್ಬಿಸುತ್ತಿದ್ದಿರಿ? ವೈಜ್ಞಾನಿಕ ಅಥವಾ ವಾಸ್ತವಿಕ ಆಧಾರವಿಲ್ಲದೆ ಸುಮ್ಮನೆ ವಾದ ಮಾಡುತ್ತಿದ್ದಿರಾ? ಶೇ.75ರಷ್ಟುಮಾಲಿನ್ಯಕ್ಕೆ ಕಾರಣ ಉದ್ದಿಮೆಗಳು, ಧೂಳು ಹಾಗೂ ವಾಹನಗಳು ಎಂದು ಈಗ ಹೇಳುತ್ತಿದ್ದೀರಿ. ಹಾಗಿದ್ದರೆ ಇವುಗಳನ್ನು ನಿಯಂತ್ರಿಸಲು ಕೂಡಲೇ ಕ್ರಮ ಕೈಗೊಳ್ಳಿ ಎಂದು ಹೇಳಿತು.

ಸುಪ್ರೀಂ ಸೂಚನೆಗಳು

-  ತುರ್ತು ಸಭೆ ನಡೆಸಿ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಳ್ಳುವ ಕ್ರಮಗಳನ್ನು ತಿಳಿಸಬೇಕು

- ರೈತರು ಹುಲ್ಲು ಸುಡುತ್ತಾರೆಂದು ಸರ್ಕಾರ ಗದ್ದಲ ಎಬ್ಬಿಸುವುದು ಬಿಟ್ಟು ನಿಜವಾದ ಕಾರಣ ಪರಿಶೀಲಿಸಬೇಕು

- ಮಾಲಿನ್ಯಕ್ಕೆ 3 ಮುಖ್ಯ ಕಾರಣಗಳಾದ ಉದ್ದಿಮೆಗಳು, ಧೂಳು ಹಾಗೂ ವಾಹನಗಳನ್ನು ಸದ್ಯಕ್ಕೆ ನಿಯಂತ್ರಿಸಬೇಕು

- ವಾಹನ ದಟ್ಟಣೆ ಕಡಿಮೆ ಮಾಡಲು ವರ್ಕ್ ಫ್ರಂ ಹೋಂ ಜಾರಿಗೆ ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು

ದೇಶಕ್ಕೆ ಆತಂಕ: ಮುಂದುವರೆಯಲಿದೆ ಪ್ರವಾಹ, ಬರ, ಚಂಡಮಾರುತ: ತಜ್ಞರ ಎಚ್ಚರಿಕೆ!

 

ಭಾರತದ ದಕ್ಷಿಣ (South India) ರಾಜ್ಯಗಳು ಮಳೆ ಮತ್ತು ಪ್ರವಾಹದಿಂದ (Rain And Floods) ಬಳಲುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ವಿಶೇಷವಾಗಿ ಸಮುದ್ರ ತೀರಕ್ಕೆ ಹೊಂದಿಕೊಂಡಿರುವಂತಹ ಕರಾವಳಿ ರಾಜ್ಯಗಳು (Coastal States) ಮತ್ತು ಪ್ರದೇಶಗಳಲ್ಲಿ ಮಳೆ ಮತ್ತು ಪ್ರವಾಹದ ಘಟನೆಗಳು ಹೆಚ್ಚಿವೆ. ಏತನ್ಮಧ್ಯೆ, ಸಮುದ್ರದಲ್ಲಿನ ಅಸಾಮಾನ್ಯ ಚಲನವಲನಗಳಿಂದ ಮುಂಬರುವ ದಿನಗಳಲ್ಲಿ ದೇಶದಲ್ಲಿ ಚಂಡಮಾರುತ (Cyclone), ಬಿರುಗಾಳಿ, ಪ್ರವಾಹ (Flood) ಮತ್ತು ಅನಾವೃಷ್ಟಿಗಳ (Drought) ಘಟನೆಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನಶಾಸ್ತ್ರಜ್ಞರು ಭವಿಷ್ಯ ನುಡಿದಿದ್ದಾರೆ. ಈ ವರ್ಷ, ಯಾಸ್ ಚಂಡಮಾರುತವು (Yaas Cyclone) ಮೇ 26 ರಂದು ಉತ್ತರ ಒಡಿಶಾ (Odisha)ಕರಾವಳಿಯನ್ನು ಅಪ್ಪಳಿಸಿತು. ಅದೇ ಸಮಯದಲ್ಲಿ, ಟೌಕ್ಟೇ (Cyclone Tauktae) ಚಂಡಮಾರುತವು ಗುಜರಾತ್ (Gujarat) ಕರಾವಳಿಗೆ ಅಪ್ಪಳಿಸಿತ್ತು ಎಂಬುವುದು ಉಲ್ಲೇಖನೀಯ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟ್ರೋಲಜಿಯ (Indian Institute Of Tropical Meteorology) ಹವಾಮಾನ ವಿಜ್ಞಾನಿ ಸ್ವಪ್ನಾ ಪಾನಿಕಲ್ (Swapna Panikal), ಸಾಗರದಲ್ಲಿನ ಉಬ್ಬರವಿಳಿತಗಳು ಮತ್ತು ಇತರ ಚಟುವಟಿಕೆಗಳು ಅಪಾಯದಿಂದ ಕೂಡಿದ ಸಾಗರ ಘಟನೆಗಳ ಹೆಚ್ಚಳದ ಸಾಧ್ಯತೆಯನ್ನು ಸೂಚಿಸುತ್ತವೆ ಎಂದು ಹೇಳಿದರು. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 1870 ರ ಆರಂಭದಿಂದ ಮುಂಬೈ ಕರಾವಳಿಯಲ್ಲಿ ಈ ಸಾಗರ ಸಂಬಂಧಿ ಘಟನೆಗಳು ಹೆಚ್ಚಳಗೊಂಡಿವೆ ಎಂದು ಡೇಟಾ ತೋರಿಸುತ್ತದೆ ಎಂದು ಹೇಳಿದರು.

click me!