ಗಣರಾಜ್ಯೋತ್ಸವ ಪರೇಡ್‌: ಉತ್ತರಾಖಂಡ ಸ್ತಬ್ಧಚಿತ್ರಕ್ಕೆ ಮೊದಲ ಬಹುಮಾನ, ಕರ್ನಾಟಕಕ್ಕೆ ಇಲ್ಲ

By Kannadaprabha NewsFirst Published Jan 31, 2023, 7:11 AM IST
Highlights

ಜ.26ರಂದು ನವದೆಹಲಿ ಕರ್ತವ್ಯಪಥದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ ವೇಳೆ ಪ್ರದರ್ಶನಗೊಂಡ ಸ್ತಬ್ಧಚಿತ್ರಗಳ ಪೈಕಿ ಉತ್ತರಾಖಂಡ, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ.

ನವದೆಹಲಿ: ಜ.26ರಂದು ನವದೆಹಲಿ ಕರ್ತವ್ಯಪಥದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ ವೇಳೆ ಪ್ರದರ್ಶನಗೊಂಡ ಸ್ತಬ್ಧಚಿತ್ರಗಳ ಪೈಕಿ ಉತ್ತರಾಖಂಡ, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ. ಉತ್ತರಾಖಂಡ ರಾಜ್ಯವು, ಕಾರ್ಬೆಟ್‌ ರಾಷ್ಟ್ರೀಯ ಅಭಯಾರಣ್ಯದಲ್ಲಿ ಪ್ರಾಣಿಗಳು ವಿಹರಿಸುವ ದೃಶ್ಯ ಒಳಗೊಂಡ ಸ್ತಬ್ಧಚಿತ್ರ ಪ್ರದರ್ಶಿಸಿತ್ತು. ಇನ್ನು ಗುಜರಾತ್‌ನ ಸ್ತಬ್ಧಚಿತ್ರ ಜನಪ್ರಿಯ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಅತ್ಯುತ್ತಮ ಪಥಸಂಚಲನಕ್ಕಾಗಿ ನೀಡುವ ಪ್ರಶಸ್ತಿಯು ಸೇನೆಯ ಪಂಜಾಬ್‌ ರೆಜಿಮೆಂಟ್‌ಗೆ ಒಲಿದಿದೆ. ಕರ್ನಾಟಕವು ಈ ಬಾರಿ ಸಾಲು ಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ, ತುಳಸಿಗೌಡ ಹಾಲಕ್ಕಿ ಅವರನ್ನು ಒಳಗೊಂಡ ನಾರಿಶಕ್ತಿ ಥೀಮ್‌ನ ಸ್ತಬ್ಧಚಿತ್ರ ಕಳುಹಿಸಿಕೊಟ್ಟಿತ್ತು. 

ಗಣ​ರಾ​ಜ್ಯೋ​ತ್ಸ​ವ​ದ ಪರೇ​ಡ್‌ನ ಮೊದಲ ಸಾಲು ಶ್ರಮಜೀವಿಗಳಿಗೆ ಮೀಸಲು
ಗಣತಂತ್ರದ ದಿನ ಕರ್ನಾಟಕ ಸ್ತಬ್ಧ ಚಿತ್ರ ಪ್ರದರ್ಶನ: ನಾರಿಶಕ್ತಿಯನ್ನು ಅಭಿನಂದಿಸಿದ ಜೋಶಿ

click me!