ಕಾಶ್ಮೀರಕ್ಕೆ ಕಾಲಿಟ್ಟರೆ ಗ್ರೆನೇಡ್ ದಾಳಿಯ ಎಚ್ಚರಿಕೆ ಇತ್ತು; ಆದರೂ ಹೆದರಲಿಲ್ಲ: ರಾಹುಲ್ ಗಾಂಧಿ

Published : Jan 30, 2023, 11:31 PM IST
ಕಾಶ್ಮೀರಕ್ಕೆ ಕಾಲಿಟ್ಟರೆ ಗ್ರೆನೇಡ್ ದಾಳಿಯ ಎಚ್ಚರಿಕೆ ಇತ್ತು; ಆದರೂ ಹೆದರಲಿಲ್ಲ: ರಾಹುಲ್ ಗಾಂಧಿ

ಸಾರಾಂಶ

ನಾನು ಕಾಶ್ಮೀರದಲ್ಲಿ ಕಾಲಿಟ್ಟರೆ ನನ್ನ ಮೇಲೆ ಗ್ರೆನೇಡ್ ದಾಳಿಯ ಎಚ್ಚರಿಕೆ ನೀಡಲಾಯಿತು. ಇದು ನನ್ನನ್ನು ಹೆದರಿಸಲು ಆಗಿತ್ತು. ಆದರೆ, ನನ್ನ ಬಿಳಿ ಟಿ-ಶರ್ಟ್‌ನ ಬಣ್ಣವನ್ನು ಕೆಂಪು ಬಣ್ಣಕ್ಕೆ ತಿರುಗಿಸಲು ಬಯಸುವವರಿಗೆ ನಾನು ಅವಕಾಶ ನೀಡಲು ನಿರ್ಧರಿಸಿದ್ದೆ ಎಂದೂ ರಾಹುಲ್‌ ಗಾಂಧಿ ಹೇಳಿದರು.

ಶ್ರೀನಗರ (ಜನವರಿ 30, 2023): ಸೋಮವಾರ ತಮ್ಮ 135 ದಿನಗಳ ಭಾರತ್ ಜೋಡೋ ಯಾತ್ರೆಯನ್ನು ರಾಹುಲ್‌ ಗಾಂಧಿ ಪೂರ್ಣಗೊಳಿಸಿದ್ದಾರೆ. ಈ ವೇಳೆ ತಮ್ಮ ಯಾತ್ರೆ ಕೊನೆಯ ಹಂತ ಅಂದರೆ ಕಾಶ್ಮೀರಕ್ಕೆ ಭೇಟಿ ನೀಡಿದರೆ ಗ್ರೆನೇಡ್‌ ದಾಳಿ ನಡೆಯುವ ಆತಂಕವಿತ್ತು. ಈ ಬಗ್ಗೆ ಭದ್ರತಾ ಏಜೆನ್ಸಿಗಳ ಸಲಹೆಗೆ ವಿರುದ್ಧವಾಗಿ ಹೋಗಿದ್ದೇನೆ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಬಹಿರಂಗಪಡಿಸಿದ್ದಾರೆ. ಅದರೂ, ತಮ್ಮ ಬಿಳಿ ಟಿ-ಶರ್ಟ್‌ನ ಬಣ್ಣವನ್ನು ಕೆಂಪು ಬಣ್ಣಕ್ಕೆ ತಿರುಗಿಸಲು ಬಯಸುವವರಿಗೆ ಅವಕಾಶವನ್ನು ನೀಡಲು ನಿರ್ಧರಿಸಿದೆ ಎಂದೂ ರಾಹುಲ್‌ ಗಾಂಧಿ ಹೇಳಿಕೊಂಡಿದ್ದಾರೆ. 

ದೇಶದ ಮುಕುಟ ಕಾಶ್ಮೀರದಲ್ಲಿ (Kasshmir) ತಮ್ಮ ಪಾದಯಾತ್ರೆಯನ್ನು (Padayatra) ಪ್ರಾರಂಭಿಸುತ್ತಿದ್ದಂತೆ, ಯುವಕರು ಮತ್ತು ಹಿರಿಯರು ಸೇರಿ ಕಾಶ್ಮೀರಿಗಳು (Kashmiri) ತನ್ನನ್ನು ಸ್ವಾಗತಿಸಿದರು ಮತ್ತು ಅವರ ಕಣ್ಣುಗಳಲ್ಲಿ ಕಣ್ಣೀರಿನೊಂದಿಗೆ ಪ್ರೀತಿ ಮತ್ತು ವಾತ್ಸಲ್ಯವನ್ನು ನೀಡಿದರು ಎಂದೂ ರಾಹುಲ್ ಗಾಂಧಿ (Rahul Gandhi) ಹೇಳಿದರು. ನಾನು ಕಾಶ್ಮೀರದಲ್ಲಿ ಕಾಲಿಟ್ಟರೆ ನನ್ನ ಮೇಲೆ ಗ್ರೆನೇಡ್ ದಾಳಿಯ (Grenade Attack) ಎಚ್ಚರಿಕೆ ನೀಡಲಾಯಿತು. ಇದು ನನ್ನನ್ನು ಹೆದರಿಸಲು ಆಗಿತ್ತು. ಆದರೆ, ನನ್ನ ಬಿಳಿ ಟಿ-ಶರ್ಟ್‌ನ ಬಣ್ಣವನ್ನು ಕೆಂಪು ಬಣ್ಣಕ್ಕೆ ತಿರುಗಿಸಲು ಬಯಸುವವರಿಗೆ ನಾನು ಅವಕಾಶ ನೀಡಲು ನಿರ್ಧರಿಸಿದ್ದೆ ಎಂದೂ ರಾಹುಲ್‌ ಗಾಂಧಿ ಹೇಳಿದರು.

ಇದನ್ನು ಓದಿ: ಹಿಮಮಳೆಯಲ್ಲೇ ರಾಹುಲ್‌ ಗಾಂಧಿ ಭಾವುಕ ಭಾಷಣ, 'ಪ್ರೀತಿ ಪಾತ್ರರ ಕಳೆದುಕೊಂಡ ನೋವು ನನಗೆ ಗೊತ್ತಿದೆ'!

ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಆರ್‌ಎಸ್‌ಎಸ್ ಹಿಂಸಾಚಾರಕ್ಕೆ ಕಾರಣವೆಂದು ಆರೋಪಿಸಿದ ಕಾಂಗ್ರೆಸ್ ನಾಯಕ, ಹಿಂಸಾಚಾರವನ್ನು ಪ್ರಚೋದಿಸುವವರಿಗೆ ಅದು ಜನರ ಮೇಲೆ ಉಂಟುಮಾಡುವ ನೋವು ಅರ್ಥವಾಗಲ್ಲ ಎಂದೂ ಅವರು ಹೇಳಿದರು. ಈ ವೇಳೆ, ತಮ್ಮ ಅಜ್ಜಿ, ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿಯವರ ಹತ್ಯೆಯ ಘಟನೆಗಳನ್ನು ವಿವರಿಸಿದ ರಾಹುಲ್‌ ಗಾಂಧಿ, ತಮ್ಮ ಅಜ್ಜಿ ಮತ್ತು ತಂದೆಯನ್ನು ಕೊಂದಾಗ ಬಂದ ಫೋನ್ ಕರೆಗಳ ಬಗ್ಗೆ ಮಾತನಾಡಿದರು ಮತ್ತು ಹಿಂಸಾಚಾರದಲ್ಲಿ ತಮ್ಮ ಆತ್ಮೀಯರನ್ನು ಕಳೆದುಕೊಳ್ಳುವ ಜನರೊಂದಿಗೆ ಇದು ಸಂಬಂಧ ಹೊಂದಬಹುದು ಎಂದೂ ಹೇಳಿದರು.

ಇದು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಫೋನ್ ಕರೆ ಸ್ವೀಕರಿಸಿದಂತಿದೆ, ಕಾಶ್ಮೀರದ ಸಾವಿರಾರು ಕುಟುಂಬಗಳು ಸ್ವೀಕರಿಸಿವೆ, ನಮ್ಮ ಹುತಾತ್ಮ ಯೋಧರ ಕುಟುಂಬಗಳು ಸ್ವೀಕರಿಸಿವೆ. ಹುತಾತ್ಮ ಸೈನಿಕರ ಕುಟುಂಬಗಳ ನೋವು, ಆತ್ಮೀಯ ವ್ಯಕ್ತಿಯನ್ನು ಕಳೆದುಕೊಂಡ ಕಾಶ್ಮೀರದ ಜನರ ನೋವು ನನಗೆ ಅರ್ಥವಾಗಿದೆ ಎಂದೂ ರಾಹುಲ್‌ ಗಾಂಧಿ ಹೇಳಿದರು.

ಇದನ್ನೂ ಓದಿ: ಮಂಜಿನಲ್ಲಿ ಮಕ್ಕಳಂತೆ ಆಡಿದ ರಾಹುಲ್ , ಪ್ರಿಯಾಂಕಾ: ವಿಡಿಯೋ ಸಖತ್ ವೈರಲ್

ಕಾಶ್ಮೀರದಲ್ಲಿ ಹಿಂಸಾಚಾರವನ್ನು ಕೊನೆಗಾಣಿಸಲು ಭಾವನಾತ್ಮಕವಾಗಿ ಮಾತನಾಡಿದ ರಾಹುಲ್ ಗಾಂಧಿ, ಅಂತಹ ಫೋನ್ ಕರೆಗಳನ್ನು ಕೊನೆಗೊಳಿಸುವುದು ತಮ್ಮ ಯಾತ್ರೆಯ ಕಾಶ್ಮೀರದ ಹಂತದ ಗುರಿಯಾಗಿದೆ ಎಂದು ಹೇಳಿದರು. ಕಾಶ್ಮೀರದಲ್ಲಿ ಯಾತ್ರೆಯ ಗುರಿಯು ಹಿಂಸೆಯ ಸಂತ್ರಸ್ತರ ಕುಟುಂಬಗಳಿಗೆ ಮಾಡಿದ ಫೋನ್ ಕರೆಗಳನ್ನು ಕೊನೆಗೊಳಿಸುವುದು. ಯಾವುದೇ ತಾಯಿ, ಮಗು ಅಥವಾ ಸಹೋದರಿ ಅಂತಹ ಕರೆಗಳನ್ನು ಸ್ವೀಕರಿಸಬಾರದು ಎಂದು ಅವರು ಹೇಳಿದರು. ಈ ಮಧ್ಯೆ,  ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಿದಾಗ ಮನೆಗೆ ಬರುತ್ತಿರುವಂತೆ ಭಾಸವಾಯಿತು ಎಂದು ರಾಹುಲ್‌ ಗಾಂಧಿ ಹೇಳಿದ್ದು, ಈ ಮೂಲಕ ತಮ್ಮದು ಕಾಶ್ಮೀರಿ ಮನೆತನ ಎಂಬುದನ್ನು ಜನರಿಗೆ ನೆನಪಿಸಿದರು. 

ಕಾಶ್ಮೀರದಲ್ಲಿ ಭಾರಿ ಹಿಮಪಾತ ಬೀಳುತ್ತಿದ್ದು, ಇದು ಸಾಮಾನ್ಯ ಜನರ ಜೀವನವನ್ನು ಅಡ್ಡಿಪಡಿಸುತ್ತಿದ್ದರೂ, ರಾಹುಲ್‌ ಗಾಂಧಿಯವರು ಭಾರತ್ ಜೋಡೋ ಯಾತ್ರೆಯ ಸಮಾರೋಪ ಕಾರ್ಯದೊಂದಿಗೆ ಮುಂದುವರಿಯಲು ನಿರ್ಧರಿಸಿದರು. ಆದರೆ, ಇಂದು ಶ್ರೀನಗರ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಈ ಕಾರಣದಿಂದ ಅದೇ ವೇದಿಕೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ಒಟ್ಟುಗೂಡಿಸುವ ಕಾಂಗ್ರೆಸ್ ಯೋಜನೆಗಳನ್ನು ಹಿಮಪಾತವು ಅಸಮಾಧಾನಗೊಳಿಸಿತು. ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾರಿ ಹಿಮಪಾತದ ನಡುವೆ ನಿಂತು ರಾಹುಲ್ ಗಾಂಧಿ ಸ್ಥೈರ್ಯ ಪ್ರದರ್ಶಿಸಿದ್ದಾರೆ ಮತ್ತು ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳಿಗೆ ಇಚ್ಛಾಶಕ್ತಿ ಇದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂದು ಹಲವರು ಹೇಳಿದ್ದಾರೆ. 

ಇದನ್ನೂ ಓದಿ: ಜಮ್ಮುವಿನಿಂದ ಲಾಲ್ ಚೌಕ್‌ವರೆಗೆ ಪಾದಯಾತ್ರೆ ಮಾಡಿ: ಅಮಿತ್ ಶಾಗೆ ರಾಹುಲ್ ಗಾಂಧಿ ಸವಾಲು..!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ