ಭಾರತದ ಜೊತೆ ಕಾರ್ಯನಿರ್ವಹಿಸಲು ಸಿದ್ಧ: ಮೋದಿ ಖಡಕ್‌ ಎಚ್ಚರಿಕೆ ಬೆನ್ನಲ್ಲೇ ಚೀನಾ ಥಂಡಾ!

By Kannadaprabha NewsFirst Published Aug 18, 2020, 8:24 AM IST
Highlights

ಮೋದಿ ಖಡಕ್‌ ಎಚ್ಚರಿಕೆ ಬೆನ್ನಲ್ಲೇ ಚೀನಾ ಥಂಡಾ| ಭಾರತದ ಜೊತೆ ಕಾರ್ಯನಿರ್ವಹಿಸಲು ಸಿದ್ಧ

ಬೀಜಿಂಗ್‌(ಆ.18):  74ನೇ ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಖಡಕ್‌ ಎಚ್ಚರಿಕೆಯ ಬೆನ್ನಲ್ಲೇ ಮೆತ್ತಗಾಗಿರುವ ಚೀನಾ, ರಾಜಕೀಯ ಸಂಬಂಧಗಳ ವೃದ್ಧಿ, ಭಿನ್ನಾಭಿಪ್ರಾಯ ಶಮನ ಮತ್ತು ದ್ವಿಪಕ್ಷೀಯ ಸಂಬಂಧಗಳ ರಕ್ಷಣೆಗೆ ಭಾರತದ ಜೊತೆ ಕಾರ್ಯನಿರ್ವಹಿಸಲು ಸಿದ್ಧವಿರುವುದಾಗಿ ಸೋಮವಾರ ತಿಳಿಸಿದೆ.

ಆತ್ಮನಿರ್ಭರ್ ಭಾರತ: ಭಾರತದಲ್ಲಿ ಫ್ಯಾಕ್ಟರಿ ತೆರೆಯಲು ಚೀನಾದ 24 ಮೊಬೈಲ್ ಕಂಪನಿಗಳ ನಿರ್ಧಾರ!

ಮೋದಿ ಅವರ ಭಾಷಣಕ್ಕೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವ ಝಾಹೋ ಲಜಿಯಾನ್‌, ಪ್ರಧಾನಿ ಮೋದಿ ಅವರ ಭಾಷಣವನ್ನು ಗಮನಿಸಿದ್ದೇವೆ. ನಾವು ನೆರೆಹೊರೆಯ ದೇಶಗಳು. ಹೀಗಾಗಿ ಭವಿಷ್ಯದ ಹಿತಾಸಕ್ತಿಯಿಂದ ಒಬ್ಬರನ್ನೊಬ್ಬರು ಗೌರವಿಸುವುದು ಮತ್ತು ಒಬ್ಬರನ್ನೊಬ್ಬರು ಬೆಂಬಲಿಸುವುದು ಉಭಯ ದೇಶಗಳಿಗೂ ಸರಿಯಾದ ಮಾರ್ಗವಾಗಿದೆ. ರಾಜಕೀಯ ಹಿತಾಸಕ್ತಿ ವರ್ಧನೆ, ನಮ್ಮ ನಡುವಿನ ಭಿನ್ನಾಭಿಪ್ರಾಯ ಶಮನಗೊಳಿಸುವಿಕೆ ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ರಕ್ಷಿಸಲು ಭಾರತದ ಜೊತೆ ಕಾರ್ಯನಿರ್ವಹಿಸಲು ಚೀನಾ ಸಿದ್ಧವಿದೆ ಎಂದು ಹೇಳಿದ್ದಾರೆ.

ಚೀನಾ ಹವಾಲ ಹಣ ಬಳಸಿ ಬೇಹುಗಾರಿಕೆ: ದೆಹಲಿ IT ಅಧಿಕಾರಿಗಳಿಂದ ಆರೋಪಿ ಬಂಧನ!

ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ)ಯಿಂದ ವಾಸ್ತವ ಗಡಿ ರೇಖೆ (ಎಲ್‌ಎಸಿ)ವರೆಗೆ ದೇಶದ ಸಾರ್ವಭೌಮತೆಗೆ ಯಾರೇ ಧಕ್ಕೆ ತಂದವರಿಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಹೇಳುವ ಮೂಲಕ ಚೀನಾ ಮತ್ತು ಪಾಕಿಸ್ತಾನಕ್ಕೆ ಖಡಕ್‌ ಎಚ್ಚರಿಕೆ ರವಾನಿಸಿದ್ದರು.

click me!