ಗುಡ್‌ ನ್ಯೂಸ್: ದೇಶದಲ್ಲಿ ಕೊರೋನಾ ಅಬ್ಬರ ಇಳಿಕೆ!

Published : Aug 18, 2020, 07:42 AM ISTUpdated : Aug 18, 2020, 08:58 AM IST
ಗುಡ್‌ ನ್ಯೂಸ್: ದೇಶದಲ್ಲಿ ಕೊರೋನಾ ಅಬ್ಬರ ಇಳಿಕೆ!

ಸಾರಾಂಶ

ಕೊರೋನಾ ಮತ್ತೆ ಇಳಿಕೆ| ಸತತ 2ನೇ ದಿನವೂ ಸೋಂಕಿತರ ಸಂಖ್ಯೆ ಕುಸಿತ| ವಾರದ ಬಳಿಕ ಸಾವಿನ ಸಂಖ್ಯೆಯೂ 900ಕ್ಕಿಂತ ಕೆಳಕ್ಕೆ| ನಿನ್ನೆ 52886 ಮಂದಿಗೆ ಸೋಂಕು, 889 ಜನರ ಸಾವು

ನವದೆಹಲಿ(ಆ. 18): ಕಳೆದ 7 ತಿಂಗಳಿನಿಂದ ದೇಶದಲ್ಲಿ ಭೀತಿ ಮೂಡಿಸಿರುವ ಕೊರೋನಾ ವೈರಸ್‌ ಅಬ್ಬರ ಸತತ ಎರಡನೇ ದಿನವೂ ಕಡಿಮೆಯಾಗಿರುವ ಆಶಾದಾಯಕ ಬೆಳವಣಿಗೆ ಕಂಡುಬಂದಿದೆ. ಸೋಮವಾರ 52886 ಸೋಂಕಿತರು ಕಂಡುಬಂದಿದ್ದಾರೆ. ಇದರೊಂದಿಗೆ ದೇಶದಲ್ಲಿ ಈವರೆಗಿನ ಕೊರೋನಾಪೀಡಿತರ ಸಂಖ್ಯೆ 26,95,230ಕ್ಕೆ ಹೆಚ್ಚಳವಾಗಿದೆ. ಮತ್ತೊಂದೆಡೆ, ಸಾವಿನ ಪ್ರಮಾಣ ಕೂಡ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, 889 ಮಂದಿ ನಿಧನರಾಗಿದ್ದಾರೆ. ಇಲ್ಲಿವರೆಗೆ ಕೊರೋನಾಗೆ ಬಲಿಯಾದವರ ಸಂಖ್ಯೆ 51840ಕ್ಕೆ ಏರಿಕೆಯಾಗಿದೆ.

ಆ.11ರಿಂದ ಆ.15ರವರೆಗೆ ಪ್ರತಿನಿತ್ಯ ಸರಾಸರಿ 60 ಸಾವಿರಕ್ಕೂ ಅಧಿಕ ಕೊರೋನಾಪೀಡಿತರು ಪತ್ತೆಯಾಗಿದ್ದರು. ಆ.13ರಂದು ದಾಖಲೆಯ 69 ಸಾವಿರ ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಆದರೆ ಭಾನುವಾರ 56507 ಮಂದಿಯಲ್ಲಿ ಮಾತ್ರ ಸೋಂಕು ಕಂಡುಬಂದಿತ್ತು. ಅದು ಮಂಗಳವಾರ ಮತ್ತಷ್ಟುಇಳಿಕೆಯಾಗಿದೆ. ಕಳೆದೊಂದು ವಾರದಿಂದ ಪ್ರತಿನಿತ್ಯ 900ಕ್ಕೂ ಅಧಿಕ ಮಂದಿ ಸಾವಿಗೀಡಾಗುತ್ತಿದ್ದರು. ಆದರೆ ಒಂದು ವಾರದ ಬಳಿಕ ಮೊದಲ ಬಾರಿಗೆ ಮೃತರ ಸಂಖ್ಯೆ 900ಕ್ಕಿಂತ ಕೆಳಕ್ಕೆ ಇಳಿದಿದೆ. ಸೋಂಕು ಪತ್ತೆ ಪರೀಕ್ಷೆ ಹೆಚ್ಚಿದಂತೆಲ್ಲಾ ಸೋಂಕಿತರು ಹೆಚ್ಚಾಗಬೇಕು. ಆದರೆ ಕಡಿಮೆಯಾಗುತ್ತಿರುವುದರಿಂದ ಕೊರೋನಾ ಅಬ್ಬರ ಇಳಿಮುಖವಾಗಬಹುದು ಎಂಬ ನಿರೀಕ್ಷೆ ಗರಿಗೆದರಿದೆ.

ನಿನ್ನೆ ಹೊಸ ಸೋಂಕಿತರಿಗಿಂತ ಡಿಸ್ಚಾಜ್‌ರ್‍ ಆದವರೇ ಹೆಚ್ಚು 

ದೇಶದಲ್ಲಿ ಸೋಮವಾರ 59097 ಮಂದಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸೋಮವಾರ ಕಂಡುಬಂದಿರುವ 52886 ಸೋಂಕಿತರಿಗಿಂತ ಡಿಸ್ಚಾಜ್‌ರ್‍ ಆದವರ ಸಂಖ್ಯೆ ಹೆಚ್ಚಿರುವುದು ಸಮಾಧಾನಕರ ಸಂಗತಿಯಾಗಿದೆ. ಈವರೆಗೆ 19,68,638 ಮಂದಿ ದೇಶದಲ್ಲಿ ಕೊರೋನಾ ಗೆದ್ದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ₹610 ಕೋಟಿ ಟಿಕೆಟ್‌ ಹಣ ವಾಪಸ್‌ ನೀಡಿದ ಇಂಡಿಗೋ; ಪ್ರಯಾಣಿಕರಿಗೆ ತಲುಪಿದ ಲಗೇಜ್
ಟಾಪ್‌ 10 ಸ್ವಚ್ಛ ಗಾಳಿಯ ನಗರಗಳಲ್ಲಿ ರಾಜ್ಯದ 6 !