ನರೇಂದ್ರ ಮೋದಿ ಸರ್ಕಾರದ ಮತ್ತೊಂದು ಐತಿಹಾಸಿಕ ನಡೆ, ಸೇನೆಗೆ ಹಣಕಾಸು ಹೊಣೆ!

By Suvarna NewsFirst Published Sep 7, 2021, 5:21 PM IST
Highlights

* ಸಶಸ್ತ್ರ ಪಡೆಗಳಿಗೆ ಹಣಕಾಸು ಅಧಿಕಾರವನ್ನು ನೀಡುವ ಆದೇಶ

* ನರೇಂದ್ರ ಮೋದಿ ಸರ್ಕಾರದ ಮತ್ತೊಂದು ಐತಿಹಾಸಿಕ ನಡೆ

* ಸೇನಾಪಡೆಗಳಿಗೆ ಖರೀದಿ ಹಾಗೂ ಹಣಕಾಸು ವಿಚಾರಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ಸ್ವಾತಂತ್ರ್ಯ

ನವದೆಹಲಿ(ಸೆ.07): ನರೇಂದ್ರ ಮೋದಿ ಸರ್ಕಾರದ ಮತ್ತೊಂದು ಐತಿಹಾಸಿಕವೆನ್ನಬಹುದಾದ ನಡೆಯೊಂದರಲ್ಲಿ, ಸಶಸ್ತ್ರ ಪಡೆಗಳಿಗೆ ಮತ್ತಷ್ಟು ಅಧಿಕಾರವನ್ನು ನೀಡುವ ಆದೇಶವನ್ನು ಹೊರಡಿಸಲಾಗಿದೆ.

ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್, ಸಶಸ್ತ್ರ ಪಡೆಗಳಿಗೆ ಹಣಕಾಸು ಅಧಿಕಾರವನ್ನು ನೀಡುವ ಆದೇಶವನ್ನು ಹೊರಡಿಸಿದ್ದು, ಸೇನೆಗೆ ಮತ್ತಷ್ಟು ಬಲ ತುಂಬಿದ್ದಾರೆ.

ರಕ್ಷಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಹಾಗೂ   ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮ ಬಹಳ ಮಹತ್ವವಾದುದು ಎಂದು ವಿಶ್ಲೇಷಿಸಲಾಗಿದೆ.

ಚಿನ್ನದ ಹುಡುಗನಿಗೆ ರಕ್ಷಣಾ ಸಚಿವರಿಂದ ಸನ್ಮಾನ; ಕ್ರೀಡಾಂಗಣಕ್ಕೆ ನೀರಜ್ ಚೋಪ್ರಾ ಹೆಸರು!

ರಾಜನಾಥ್ ಸಿಂಗ್ ಹೊರಡಿಸಿರುವ 'Delegation of Financial Powers to Defence Services (DFPDS) 2021' ಆದೇಶದಲ್ಲಿ ಸೇನಾಪಡೆಗಳಿಗೆ ಖರೀದಿ ಹಾಗೂ ಹಣಕಾಸು ವಿಚಾರಗಳಿಗೆ ಸಂಬಂಧಿಸಿದಂತೆ ಮತ್ತಷ್ಟು ಸ್ವಾತಂತ್ರ್ಯ ನೀಡಲಾಗಿದೆ.  ಆ ಮೂಲಕ ಯೋಜನೆ, ಕಾರ್ಯನಿರ್ವಹಣೆ, ಸನ್ನದ್ಧತೆ, ಶಸ್ತ್ರಾಸ್ತ್ರ ಖರೀದಿ ಹಾಗೂ ಐಕ್ಯತೆ ಸಾಧಿಸಲು ಸಹಕಾರಿಯಾಗಲಿದೆ.

ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಶಸ್ತ್ರಾಸ್ತ್ರ ಖರೀದಿಸಲು ಫೀಲ್ಡ್ ಕಮಾಂಡರ್‌ಗಳಿಗೆ ಅನುಕೂಲವಾಗುವಂತೆ ನಿಯಮಗಳನ್ನು ರೂಪಿಸಲಾಗಿದ್ದು, ಇದು ಸಂಪನ್ಮೂಲಗಳ ಉತ್ತಮ ರೀತಿಯಲ್ಲಿ ಬಳಕೆಗೆ ಪೂರಕವಾಗಿದೆ. 

'ತಾಲಿ​ಬಾನ್‌, ಪಾಕ್‌ಗೆ ಭಾರತ ಸೇನೆ ಎಚ್ಚರಿಕೆ, ನಮ್ಮ ತಂಟೆಗೆ ಬಂದರೆ ತಕ್ಕ ಶಾಸ್ತಿ!'

ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್,   ದೇಶದ ರಕ್ಷಣಾ  ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಕಟಿಬದ್ಧವಾಗಿದೆ ಎಂದರು.

ಕಾರ್ಯವಿಧಾನದಲ್ಲಿ ವಿಳಂಬವನ್ನು ತಡೆಯಲು ಹಾಗೂ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ  ಪ್ರಸ್ತುತ ನೀತಿ-ನಿಯಮಗಳನ್ನು ಪರಿಷ್ಕರಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

click me!