ಹೊರಗೆ ಬಂತು ತರೂರ್ ಟ್ಯಾಲೆಂಟ್... ಹಿಂದಿ ಹಾಡು ಇಂಗ್ಲಿಷ್ ಆಕ್ಸೆಂಟ್! ವಿಡಿಯೋ

Published : Sep 07, 2021, 04:30 PM ISTUpdated : Sep 07, 2021, 04:37 PM IST
ಹೊರಗೆ ಬಂತು ತರೂರ್ ಟ್ಯಾಲೆಂಟ್... ಹಿಂದಿ ಹಾಡು ಇಂಗ್ಲಿಷ್ ಆಕ್ಸೆಂಟ್! ವಿಡಿಯೋ

ಸಾರಾಂಶ

* ಹಿಂದಿ ಸಾಂಗ್ ಹಾಡಿ  ರಂಜಿಸಿದ ಶಶಿ ತರೂರ್ * ತರೂರ್  ಹಾಡಿಗೆ ಹೊಸದಾಗಿ ಹುಟ್ಟಿಕೊಂಡ ಅಭಿಮಾನಿಗಳು * ಹಿಂದಿ ಹಾಡನ್ನು ಇಂಗ್ಲಿಷ್ ರೀತಿ ಹಾಡಿದ್ದೀರಾ! * ತರೂರ್ ಹೊಗಳಿದವರೂ ಇದ್ದಾರೆ. ಕಾಲು ಎಳೆದವರು ಇದ್ದಾರೆ

ಶ್ರೀನಗರ(ಸೆ. 07)  ಟ್ವೀಟ್ ಗಳ ಮೂಲಕ ಸದಾ ಸುದ್ದಿ ಮಾಡುವ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ತಮ್ಮೊಳಗೆ ಅಡಗಿರುವ ಇನ್ನೊಂದು ಪ್ರತಿಭೆಯನ್ನು ಹೊರಕ್ಕೆ ಹಾಕಿದ್ದಾರೆ.  'ಏಕ್ ಅಜನಬಿ ಹಸಿನಾ ಸೇ' ಹಾಡನ್ನು ಹಾಡಿ ರಂಜಿಸಿದ್ದಾರೆ. ಶಶಿ ತರೂರ್ ಕಂಠಕ್ಕೆ ಸೋಶಿಯಲ್ ಮೀಡಿಯಾ ಮಾರುಹೋಗಿದೆ. ಇದಕ್ಕೆ  ಜಾವೇದ್ ಅಕ್ತರ ಸಹ ಸರಿಯಾದ ಕಮೆಂಟ್ ಮಾಡಿದ್ದಾರೆ.

ಶ್ರೀನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ವೇದಿಕೆಯಲ್ಲಿ ತರೂರ್ ತಮ್ಮ ಮೊಬೈಲ್ ನಲ್ಲಿ ಸಾಹಿತ್ಯ ನೋಡಿಕೊಂಡು ಹಾಡು ಹಾಡಿದರು.  ತರೂರ್ ವಿಡಿಯೋ ಪೋಸ್ಟ್ ಮಾಡಿದ ನಂತರ ವೈರಲ್ ಆಯಿತು. ಅವರ ತೆಂಗಿನಕಾಯಿ ಒಡೆಯುವ ಪೋಟೋಕ್ಕಿಂತಲೂ ಒಂದು ಹೆಜ್ಜೆ  ಜಾಸ್ತಿಯೇ ಹರಿದಾಡಿತು. 

ತಾಲೀಬಾನ್ ಗೂ ಕೇರಳಕ್ಕೂ ನಂಟು ಎಂದ ತರೂರ್!

ಪಾರ್ಲಿಮೆಂಟರಿ ಸ್ಟಾಂಡಿಂಗ್ ಕಮೀಟಿ ಮತ್ತು ಶ್ರೀನಗರದ ದೂರದರ್ಶನ ಆಯೋಜನೆ ಮಾಡಿದ್ದ  ಸಾಂಸ್ಕೃತಿಕ ಕಾರ್ಯಕ್ರಮದ ನಂತರ ವೇದಿಕೆಯಲ್ಲಿ ಹಾಡು ಹಾಡಿದೆ.  ಯಾವ ತರಬೇತಿಯನ್ನು ಮಾಡಿಕೊಂಡಿರಲಿಲ್ಲ.. ಜಸ್ಟ್ ಡೂ ಎಂಜಾಯ್ ಎಂದು ತರೂರ್ ಹೇಳಿ ತಮ್ಮ ಪೇಜ್ ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಅಜನಬಿ ಚಿತ್ರ 1974  ರಲ್ಲಿ ತೆರೆ ಕಂಡಿತ್ತು. ರಾಜೇಶ್ ಖನ್ನಾ ಮತ್ತು ಜೀನತ್ ಅಮಾನ್ ಪ್ರಮುಖ ಭೂಮಿಕೆಯಲ್ಲಿದ್ದರು. ಕಪ್ಪು ಬಣ್ಣದ ಜಾಕೆಟ್ ಧರಿಸಿದ್ದ ತರೂರ್ ಪಳಗಿದ  ಗಾಯಕರಂತೆ ಮಿಂಚಿದರು. 

ಈ ವಿಡಿಯೋ ನೋಡಿ ನಯವಾಗಿ ಕಾಲೆಳೆದ ಬಾಲಿವುಡ್ ಚಿತ್ರಕಥೆಗಾರ ಜಾವೇದ್ ಅಕ್ತರ್ 'ಓಹ್ .. ನಾವಿಬ್ಬರೂ  ಹಿಂದಿಯಲ್ಲಿ ಒಂದೇ ಹಾಡನ್ನು ಹಾಡುತ್ತಿದ್ದೇವೆ! ಎಂದಿದ್ದಾರೆ.

ಶಶಿ ತರೂರ್ ಹಿಂದಿ ಹಾಡನ್ನು ಆಂಗ್ಲ ಭಾಷೆಯ ಉಚ್ಚಾರಣೆ ರೀತಿ ಹಾಡಿದ್ದಾರೆ ಎಂದು ಕೆಲವರು ಹೇಳಿದರೆ ಇದು ಮಲಯಾಳಂ ಗೀತೆ ಕೇಳಿದಂತೆ ಭಾಸವಾಗುತ್ತಿದೆ ಎಂದು ಕೆಲವರು ತಿಳಿಸಿದ್ದಾರೆ.  ಕಿಶೋರ್ ಕುಮಾರ್ ದನಿ ನೀಡಿದ್ದ ಗೀತೆ ಎಂದೆಂದಿಗೂ ಜನಪ್ರಿಯವಾಗಿಯೇ ಇದೆ. 

ಆಂಗ್ಲ ಮಾಧ್ಯಮದಲ್ಲಿಯೂ ಓದಿ 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
India Latest News Live: ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್