
ಶ್ರೀನಗರ (ಅ.27): ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ವಿವಿಧ ಕಾರ್ಯಕ್ರಮಗಳಿಗಾಗಿ ಶ್ರೀನಗರಕ್ಕೆ ಆಗಮಿಸಿದ್ದಾರೆ. ಇಂದಿನಿಂದ ಅವರು ಎರಡು ದಿನಗಳ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ಗೆ ಭೇಟಿ ನೀಡುವುದಲ್ಲದೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಶ್ರೀನಗರದ ಬುದ್ಗಾಮ್‌ನಲ್ಲಿ ಭಾರತೀಯ ಸೇನೆ ಆಯೋಜಿಸಿದ್ದ ಶೌರ್ಯ ದಿವಸ್ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡಲು ಪ್ರಾಣ ತ್ಯಾಗ ಮಾಡಿದ ವೀರ ಯೋಧರನ್ನು ಸ್ಮರಿಸಿದರು. ಶೌರ್ಯ ದಿವಸ್‌ನ ವೀರ ಯೋಧರಿಗೆ ನಮನ ಸಲ್ಲಿಸಿ ಮಾತನಾಡಿದ ಅವರು, ದೇಶದಲ್ಲಿ ದೀಪಾವಳಿ ಇದ್ದಾಗ ಇವರು ಹೋಳಿ ಆಡುತ್ತಿದ್ದರು ಎಂದು ಹೇಳಿದರು. ಇಂದು ಅವರ ತ್ಯಾಗ ಮತ್ತು ಸಮರ್ಪಣೆಗೆ ಹೃದಯಪೂರ್ವಕ ನಮನ ಸಲ್ಲಿಸುವ ದಿನ ಎಂದಿದ್ದಾರೆ. 1947 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ವಿಭಜನೆಯ ಕಥೆಯನ್ನು ಇತಿಹಾಸದಲ್ಲಿ ಬರೆಯಲಾಯಿತು. ಈ ಕಥೆಯ ರಕ್ತಸಿಕ್ತ ಮಸಿ ಇನ್ನೂ ಒಣಗಿಲ್ಲ, ಪಾಕಿಸ್ತಾನದ ದ್ರೋಹದ ಹೊಸ ಸ್ಕ್ರಿಪ್ಟ್ ಬರೆಯಲು ಪ್ರಾರಂಭಿಸಿದೆ. ವಿಭಜನೆಯಾದ ಕೆಲವೇ ದಿನಗಳಲ್ಲಿ ಹೊರಬಂದ ಪಾಕಿಸ್ತಾನದ ಮುಖವಾಡ ಇಂದಿಗೂ ಕಳಚಿಲ್ಲ ಎಂದಿದ್ದಾರೆ.
ಇಂದು ನಾವು ಕಾಣುತ್ತಿರುವ ಭಾರತದಂಥ (India) ಬೃಹತ್ ದೇಶವು, ನಮ್ಮ ವೀರ ಯೋಧರ ತ್ಯಾಗದ ತಳಪಾಯದ ಮೇಲೆ ನಿಂತಿದೆ. ಭಾರತ ಎಂಬ ಹೆಸರಿನ ಈ ಬೃಹತ್ ಆಲದ ಮರವು ಆ ವೀರ ಸೈನಿಕರ ರಕ್ತ ಮತ್ತು ಬೆವರಿನಿಂದ ಬೆಳೆದು ನಿಂತಿದೆ. ಅದಮ್ಯ ಧೈರ್ಯ ಮತ್ತು ಶೌರ್ಯದಿಂದ ನಮ್ಮ ಸೈನ್ಯವು ಶತ್ರುಗಳನ್ನು ಹಿಮ್ಮೆಟ್ಟುವಂತೆ ಮಾಡಿತು. ನಮ್ಮ ಸೈನ್ಯವು 1947 ರಲ್ಲಿ ತನ್ನ ಮೊದಲ ವಿಜಯವನ್ನು ಪಡೆಯಿತು. ಭಾರತೀಯ ಸೇನೆಯು ಮಹಾನ್ ಸೈನ್ಯ. ಅದೆಲ್ಲವೂ ನಮಗೆ ಹೆಮ್ಮೆಯ ವಿಚಾರ (shaurya diwas) ಎಂದರು.
ಕಾಶ್ಮೀರಿಯತ್ (Kashmiriyat) ಹೆಸರಿನಲ್ಲಿ ಈ ರಾಜ್ಯವು ಕಂಡ ಭಯೋತ್ಪಾದನೆಯ (terrorism) ಮತಾಂಧತೆಯನ್ನು ವಿವರಿಸಲು ಸಾಧ್ಯವಿಲ್ಲ. ಧರ್ಮದ ಹೆಸರಿನಲ್ಲಿ ಎಷ್ಟು ರಕ್ತ ಹರಿದಿದೆ ಎಂಬುದಕ್ಕೆ ಲೆಕ್ಕವಿಲ್ಲ. ಅನೇಕ ಜನರು ಭಯೋತ್ಪಾದನೆಯನ್ನು ಧರ್ಮದೊಂದಿಗೆ ಸಂಪರ್ಕಿಸಲು ಪ್ರಯತ್ನಿಸಿದರು. ಭಯೋತ್ಪಾದಕರಿಗೆ ಬಂದೂಕು ತೋರಿಸುವುದರ ಮೂಲಕ ತಮ್ಮ ಕಾರ್ಯಗಳನ್ನು ಹೇಗೆ ನಿರ್ವಹಿಸಬೇಕೆಂದು ಮಾತ್ರ ತಿಳಿದಿದೆ. ಯಾರಿಗಾದರೂ ತೊಂದರೆಯಾದರೆ, ಅವನು ಮೊದಲು ಭಾರತೀಯ, ಮತ್ತು ಅದಕ್ಕೂ ಮೊದಲು ಅವನು ಮನುಷ್ಯ ಎನ್ನುವ ರೀತಿಯಲ್ಲಷ್ಟೇ ನೋಡಬೇಕು (rajnath singh) ಎಂದರು.
ರಾಜನಾಥ್ ಸಿಂಗ್‌ಗೆ ಕುದುರೆ ಗಿಫ್ಟ್ ನೀಡಿದ ಮಂಗೋಲಿಯಾ ಸರ್ಕಾರ
ಸಾರ್ವಜನಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಭದ್ರತಾ ಪಡೆಗಳು ಯಾವುದೇ ಕ್ರಮ ಕೈಗೊಂಡಾಗ, ದೇಶದ ಕೆಲವು ತಥಾಕಥಿತ ಬುದ್ಧಿಜೀವಿಗಳು ಭಯೋತ್ಪಾದಕರ ಮಾನವ ಹಕ್ಕುಗಳ ಬಗ್ಗೆ ಚಿಂತಿಸಲು ಪ್ರಾರಂಭಿಸುತ್ತಾರೆ. ಸೇನೆ, ಜನಸಾಮಾನ್ಯರ ಮೇಲೆ ದಾಳಿ ನಡೆದಾಗ ಈ ಮಾನವ ಹಕ್ಕುಗಳ ಕಾಳಜಿ ಎಲ್ಲಿಗೆ ಹೋಗುತ್ತದೆ. ಆಗೆಲ್ಲಾ ಅವರು ಬಾಯಿ ಮುಚ್ಚಿಕೊಂಡು ಕುಳಿತಿರುತ್ತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೃಷ್ಟಿಯಾಗಿರುವ ಪರಿಸ್ಥಿತಿಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಕಾಶ್ಮೀರಿ ಪಂಡಿತರು ಕಣಿವೆಯಿಂದ ವಲಸೆ ಹೋಗುವಂತೆ ಒತ್ತಾಯಿಸಿದಾಗ, ಇಲ್ಲಿದ್ದವರ ಮೌನವೇ ಭಯೋತ್ಪಾದಕರಿಗೆ ಶಕ್ತಿಯಾಯಿತು ಎಂದರು. ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ಶೇರ್-ಎ-ದುಗ್ಗರ್ ಪಂಡಿತ್ ಪ್ರೇಮ್ ನಾಥ್ ಡೋಗ್ರಾ ಅವರನ್ನು ಈ ವೇಳೆ ನಾವು ನೆನಪಿಸಿಕೊಳ್ಳಬೇಕು ಎಂದರು.
ದಕ್ಷಿಣ ಭಾರತದಲ್ಲಿ ಅಧಿಕಾರಕ್ಕೆ ಬರಲು ನಿಮ್ಮ ಶ್ರಮ ಬೇಕು: ಬಿಎಸ್‌ವೈಗೆ ಹೇಳಿದ ಮೋದಿ
ಈಗ ನಾವು ಉತ್ತರ ದಿಕ್ಕಿಗೆ ನಡೆಯಲು ಪ್ರಾರಂಭಿಸಿದ್ದೇವೆ. 22 ಫೆಬ್ರವರಿ 1949 ರಂದು ಭಾರತೀಯ ಸಂಸತ್ತಿನಲ್ಲಿ ಅಂಗೀಕರಿಸಿದ ನಿರ್ಣಯವು ಜಾರಿಗೆ ಬಂದಾಗ ಯಾತ್ರೆಯು ಪೂರ್ಣಗೊಳ್ಳುತ್ತದೆ. ಅದರಂತೆ ಗಿಲ್ಗಿಟ್ ಬಾಲ್ಟಿಸ್ತಾನ್ ತಲುಪಲಿದೆ. ಆಗ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕನಸು ನನಸಾಗುತ್ತದೆ. 1947ರ ನಿರಾಶ್ರಿತರಿಗೆ ನ್ಯಾಯ ಸಿಗಲಿದೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ