ಕೊಯಮತ್ತೂರು ಕಾರು ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದೆ. ಉಗ್ರರ ಕೈವಾಡದ ಸಾಕ್ಷ್ಯಗಳು ಲಭ್ಯವಾಗುತ್ತಿದೆ. ಭಾರಿ ವಿದ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಲಾಗಿತ್ತು ಅನ್ನೋ ಮಾಹಿತಿಯೂ ಬಹಿರಂಗವಾಗಿದೆ. ಇತ್ತ ತಮಿಳುನಾಡು ಸರ್ಕಾರ ತನಿಖಾ ಜವಾಬ್ದಾರಿಯನ್ನು NIAಗೆ ವಹಿಸಿದ ಬೆನ್ನಲ್ಲೇ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. NIA ಭೇಟಿ ಬೆನ್ನಲ್ಲೇ ಹಲವು ಮಾಹಿತಿಗಳು ಬಹಿರಂಗಗೊಂಡಿದೆ.
ಚೆನ್ನೈ(ಅ.27): ಭಾರತದಲ್ಲಿ ಉಗ್ರರ ಜಾಲಗಳು ಸದ್ದಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ಇತ್ತೀಚಿನ ಕೊಯಮತ್ತೂರು ಕಾರು ಸ್ಪೋಟ ಪ್ರಕರಣದಿಂದ ಬೆಳಕಿಗೆ ಬಂದಿದೆ. ವಿದ್ವಂಸಕ ಕೃತ್ಯದ ಮೂಲಕ ಭಾರತವನ್ನು ಉಗ್ರರ ನಾಡು ಎಂದು ಬಂಬಿಸುವ ಹಾಗೂ ಕೇಂದ್ರ ಸರ್ಕಾರಕ್ಕೆ ಮಸಿ ಬಳಿಯುವ ಕೆಲಸಕ್ಕೆ ಭಾರಿ ತಯಾರಿಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಕೊಯಮತ್ತೂರು ಕಾರು ಬಾಂಬ್ ಸ್ಫೋಟದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಉಗ್ರರ ಒಂದೊಂದೆ ಮಾಹಿತಿಗಳು ಬಹಿರಂಗವಾಗುತ್ತಿದೆ. ನಿನ್ನೆ(ಅ.26) ತಮಿಳುನಾಡು ಸರ್ಕಾರ ಪ್ರಕರಣದ ತನಿಖೆ ಜವಾಬ್ದಾರಿಯನ್ನು ರಾಷ್ಟ್ರೀಯ ತನಿಖಾ ದಳ(NIA)ಗೆ ವಹಿಸಿತ್ತು. ಇದರ ಬೆನ್ನಲ್ಲೇ ಇಂದು NIA ಅಧಿಕಾರಿಗಳ ತಂಡ ಸ್ಫೋಟದ ನಡೆದ ಸ್ಥಳಕ್ಕೆ ಭೇಟಿ ನೀಡಿದೆ. ಅಧಿಕಾರಿಗಳು ಆಗಮಿಸುತ್ತಿದ್ದಂತೆ ಪ್ರಕರಣ 6ನೇ ಆರೋಪಿಯನ್ನು ಬಂಧಿಸಲಾಗಿದೆ.
ಕಾರು ಸ್ಫೋಟದಲ್ಲಿ ಐಸಿಸ್ ಉಗ್ರರ ಜೊತೆ ಸಂಪರ್ಕದಲ್ಲಿದ್ದ ಜುಮೇಜಾ ಮುಬೀನ್ ಸಾವನ್ನಪ್ಪಿದ್ದಾನೆ. ಈತನ ವಿರುದ್ಧ ಉಗ್ರರ ಕೃತ್ಯ ನಡೆಸಿದ ಆರೋಪಗಳು ಇವೆ. ಮತ್ತೊಂದು ವಿದ್ವಂಸಕ ಕೃತ್ಯದ ವೇಳೆ ಅಥವಾ ಯೋಜನೆ ವೇಳೆ ಈ ಕಾರು ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣ ಸಂಬಂಧ ಮೃತ ಜುಮೇಜಾ ಮುಬೀನ್ ಸಂಬಂಧಿ ಅಫ್ಸರ್ ಖಾನ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಈತ ಪ್ರಕರಣ ಸಂಬಂಧ ಬಂಧಿತನಾಗಿರುವ 6ನೇ ಆರೋಪಿಯಾಗಿದ್ದಾನೆ.
ಕೊಯಮತ್ತೂರು ಕಾರು ಸ್ಫೋಟ ಪ್ರಕರಣದಲ್ಲಿ ಉಗ್ರರ ಕೈವಾಡ, NIA ತನಿಖೆಗೆ ಆದೇಶಿಸಿದ ಸಿಎಂ ಸ್ಟಾಲಿನ್!
ಅಫ್ಸರ್ ಖಾನ್ ಕಳೆದ ಎರಡು ವರ್ಷದಿಂದ ಇ ಕಾಮರ್ಸ್ (ಆನ್‌ಲೈನ್ ಶಾಪಿಂಗ್) ಮೂಲಕ ಸಣ್ಣ ಸಣ್ಣ ಪ್ರಮಾಣದಲ್ಲಿ ಸ್ಫೋಟಕಗಳನ್ನು ಸಂಗ್ರಹಿಸಿದ್ದ. ಯಾರಿಗೂ ಅನುಮಾನ ಬರದ ರೀತಿಯಲ್ಲಿ ಈತ ಸ್ಫೋಟಕಕ್ಕೆ ಬೇಕಾದ ರಾಸಾಯನಿಕಗಳನ್ನು ಆರ್ಡರ್ ಮಾಡಿಕೊಳ್ಳುತ್ತಿದ್ದ. ಹೀಗಾಗಿ ಈ ಸ್ಫೋಟದ ಹಿಂದ ಅಫ್ಸರ್ ಖಾನ್ ಪಾತ್ರ ಪ್ರಮುಖವಾಗಿದೆ.
ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಕೊಯಮತ್ತೂರು ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಮಹತ್ವದ ಮಾಹಿತಿ ಪಡೆದಿದ್ದರೆ. ಬಳಿಕ ಕಾರು ಸ್ಫೋಟ ನಡೆದ ಸ್ಥಳಕ್ಕೆ ಬೇಟಿ ನೀಡಿದ್ದಾರೆ. ಇನ್ನು ಸ್ಪೋಟದಲ್ಲಿ ಮೃತಪಟ್ಟಿರುವ ಮುಬಿನ್ ಮನೆಗೆ ಅಧಿಕಾರಿಗಳ ತಂಡ ಭೇಟಿ ನೀಡಲಿದೆ. 2019ಲ್ಲೇ ಮುಂಬಿನ ಭಯೋತ್ಪಾದನೆ ನಿಗ್ರಹ ದಳದ ರೇಡಾರ್‌ನಲ್ಲಿದ್ದ. 2019ರಲ್ಲಿ ಈತನನ್ನು ಉಗ್ರರ ಜೊತೆಗಿನ ಸಂಪರ್ಕ ಕುರಿತು ವಿಚಾರಣೆ ನಡೆಸಲಾಗಿತ್ತು.
Coimbatore Blast: 5 ಜನರ ಬಂಧನ, 25 ಮಂದಿ ಮೇಲೆ ನಿಗಾ; ಆರೋಪಿಗಳ ವಿರುದ್ಧ ಯುಎಪಿಎ ಕಾಯ್ದೆ
ಕೊಯಮತ್ತೂರಿನ ಕೊಟ್ಟೈ ಈಶ್ವರನ್ ದೇವಾಲಯದ ಬಳಿ ಕಾರಿನಲ್ಲಿ ಸಿಲಿಂಡರ್ ಸ್ಫೋಟಿಸಿ ಜೆಮಿಶಾ ಮುಬೀನ್ ಎಂಬ ವ್ಯಕ್ತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಉಗ್ರವಾದದ ದೃಷ್ಟಿಕೋನದಲ್ಲಿ ತನಿಖೆ ಆರಂಭಿಸಿದ್ದಾರೆ. ಈತನ ಸಾವಿಗೆ ಕೆಲವೇ ಗಂಟೆ ಮೊದಲು ಮುಬೀನ್ ಮನೆಯಿಂದ ಐವರು ಶಂಕಾಸ್ಪದ ಗೋಣಿಚೀಲ ತೆಗೆದುಕೊಂಡು ಹೋಗಿದ್ದು ಸಿಸಿಟೀವಿಯಲ್ಲಿ ಕಂಡುಬಂದಿದೆ.
ಮುಬೀನ್‌ನನ್ನು 2019ರಲ್ಲಿ ಐಸಿಸ್ ನಂಟಿನ ಬಗ್ಗೆ ವಿಚಾರಣೆ ಮಾಡಿ ಸಾಕ್ಷ್ಯ ಸಿಗದ ಕಾರಣ ಬಿಡುಗಡೆ ಮಾಡಲಾಗಿತ್ತು. ಈತ ಭಾನುವಾರ ನಸುಕಿನ 4 ಗಂಟೆಗೆ ಈಶ್ವರನ್ ದೇಗುಲ ಬಳಿ ಕಾರ್‌ನಲ್ಲಿ ಸಾಗುತ್ತಿದ್ದಾಗ, ಕಾರಿನಲ್ಲಿನ ಸಿಲಿಂಡರ್ ಸ್ಫೋಟಿಸಿ ಸಾವನ್ನಪ್ಪಿದ್ದ. ಪೊಲೀಸರು ಈತನ ಮನೆ ಶೋಧಿಸಿದಾಗ ಬಾಂಬ್ ತಯಾರಿಕಾ ರಾಸಾಯನಿಕ, ಬೇರಿಂಗ್‌ಗಳು ಪತ್ತೆಯಾಗಿದ್ದವು. ಇನ್ನು ಇದಕ್ಕೂ ಕೆಲ ತಾಸು ಮುನ್ನ ಶನಿವಾರ ರಾತ್ರಿ 11.25ಕ್ಕೆ ಈತನ ಮನೆಯಿಂದ ಐವರು ಶಂಕಾಸ್ಪದ ಗೋಣಿಚೀಲ ಒಯ್ದಿದ್ದಾರೆ.