ಎಕ್ಸ್ ಬಳಕೆದಾರನ ಸಲಹೆಗೆ ಜೊಮ್ಯಾಟೋ ಸಿಇಒ ಫುಲ್ ಖುಷ್, ಭರ್ಜರಿ ಉದ್ಯೋಗದ ಆಫರ್!
ಎಕ್ಸ್ ಬಳಕೆದಾರ ಜೊಮ್ಯಾಟೋ ಫುಡ್ ಡೆಲಿವರಿ ಆ್ಯಪ್ ಎದುರಿಸುತ್ತಿರುವ ಕೆಲ ಸಮಸ್ಯೆಗಳಿಗೆ ಸಲಹೆ ನೀಡಿದ್ದಾರೆ. ಈ ಸಲಹೆ ನೋಡಿದ ಜೊಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಫುಲ್ ಖುಷ್ ಆಗಿದ್ದಾರೆ. ಇಷ್ಟೇ ಅಲ್ಲ ಉದ್ಯೋಗದ ಆಫರ್ ನೀಡಿದ್ದಾರೆ.
ಗುರುಗಾಂವ್(ನ.11) ಜೊಮ್ಯಾಟೋ ಫುಡ್ ಡೆಲಿವರಿ ಆ್ಯಪ್ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಅಗತ್ಯಕ್ಕೆ ತಕ್ಕಂತೆ ಕೆಲ ಬದಲಾವಣೆ ಮಾಡಿದೆ.ಇತ್ತೀಚೆಗೆ ಜೊಮ್ಯಾಟೋ ಸಿಇಒ ದೀಪಿಂಗ್ ಗೋಯಲ್ ಆಹಾರ ವ್ಯರ್ಥಮಾಡದಂತೆ ಬಳಕೆ ಮಾಡುವ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚಿಸಿದ್ದರು. ಆರ್ಡರ್ ಕ್ಯಾನ್ಸಲ್ ಮಾಡಿದಾಗ ಆಗುವ ಆಹಾರ ವ್ಯವರ್ಥವಾಗಂತೆ ಸಮಪರ್ಕವಾಗಿ ಬಳಕೆ ಮಾಡುವ ಕುರಿತು ವ್ಯರ್ಥ ಮಾಡದಂತೆ ಮುನ್ನಚ್ಚೆರಿಕೆ ವಹಿಸುವ ಕುರಿತು ಚರ್ಚಿಸಿದ್ದರು. ಹಲವರು ಈ ಕುರಿತು ಸಲಹೆ ಸೂಚನೆ ನೀಡಿದ್ದರು. ಈ ಪೈಕಿ ಎಕ್ಸ್ ಬಳಕೆದಾರ ಭಾನು ಹಂಚಿಕೊಂಡ ಸಲಹೆ, ಜೋಮ್ಯಾಟೋ ಸಿಇಒ ದೀಪಿಂದರ್ ಗೋಯಲ್ ಇಂಪ್ರೆಸ್ ಮಾಡಿದೆ. ಇಷ್ಟೇ ಅಲ್ಲ, ತಕ್ಷಣವೇ ಉದ್ಯೋಗ ಆಫರ್ ಕೂಡ ನೀಡಿದ್ದಾರೆ.
ಕ್ಯಾನ್ಸಲ್ ಮಾಡುವ ಪ್ಯಾಕ್ಡ್ ಆರ್ಡರನ್ನು ಹತ್ತಿರದ ಗ್ರಾಹಕರಿಗೆ ಅತೀ ಕಡಿಮೆ ಬೆಲೆಯಲ್ಲಿ ನೀಡುವ ಕುರಿತು ಚರ್ಚೆಗಳು ನಡೆದಿದೆ. ಇದೇ ವೇಳೆ ಭಾನು ಹಂಚಿಕೊಂಡ ಸಲಹೆ ದೀಪಿಂದರ್ ಗೋಯಲ್ ಮೆಚ್ಚುಗೆಗೆ ಪಾತ್ರವಾಗಿದೆ. ಭಾನು ಪ್ರಮುಖವಾಗಿ 4 ಸಲಹೆಗಳನ್ನು ನೀಡಿದ್ದಾರೆ. ಈ ಸಲಹೆ ನೋಡಿದ ದೀಪಿಂದರ್ ಗೋಯಲ್, ತಕ್ಷಣವೆ ರಿಪ್ಲೇ ಮಾಡಿದ್ದಾರೆ. ನೀವು ಹೇಳಿದೆ ಈ ಸಲಹೆಗಳ ಕುರಿತು ಕಾರ್ಯಪ್ರವೃತ್ತರಾಗುತ್ತಿದ್ದೇವೆ. ಉತ್ತಮ ಆಲೋಜನೆ ನಿಮ್ಮದು. ನೀವು ಯಾರು, ಏನು ಮಾಡುತ್ತಿದ್ದೀರಿ? ನಿಮ್ಮ ಕುರಿತು ಹೆಚ್ಚಿಗೆ ತಿಳಿದುಕೊಳ್ಳಲು ಬಯಸುತ್ತಿದ್ದೇನೆ. ನೀವು ನಮ್ಮ ಜೊತೆ ಕೆಲಸ ಮಾಡಲು ಸಾಧ್ಯವೇ ? ಹೆಚ್ಚಿನ ಮಾಹಿತಿ ಹಾಗೂ ಈ ಕುರಿತು ಚರ್ಚಿಸಲು ಡೈರೆಕ್ಟ್ ಮೆಸೇಜ್ ಮಾಡಿ ಎಂದು ದೀಪಿಂದರ್ ಗೋಯಲ್ ಮೆಸೇಜ್ ಮಾಡಿದ್ದಾರೆ.
ಫುಡ್ ಆರ್ಡರ್ ಮಾಡಿದ ಗ್ರಾಹಕರಿಗೆ ಅಚ್ಚರಿ, ಡೆಲಿವರಿಗೆ ಬಂದ ಜೊಮ್ಯಾಟೋ ಸಿಇಒ & ಪತ್ನಿ!
ನಾಲ್ಕು ಸಲಹೆ ನೀಡಿದ ಎಕ್ಸ್ ಬಳಕೆದಾರನಿಗೆ ದೀಪಿಂದರ್ ಗೋಯೆಲ್ ಉದ್ಯೋಗ ಆಫರ್ ನೀಡಿದ್ದಾರೆ. ಎಕ್ಸ್ ಬಳಕೆದಾರ ಭಾನು ಸಲಹೆಗೆ ಹಲವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಿನ್ನವಾಗಿ ಯೋಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಲ್ಲ ಸಾಮರ್ಥ್ಯ ದೀಪಿಂದರ್ ಗೋಯೆಲ್‌ಗೆ ಇದೆ. ಹೀಗಾಗಿ ಭಾನು ಇದಕ್ಕೆ ಅರ್ಹರು ಎಂದು ಹಲವರು ಪ್ರಶಂಸಿಸಿದ್ದಾರೆ. ಇದೇ ವೇಳೆ ದೀಪಿಂದರ್ ಗೋಯಲ್ ನಡೆಗೂ ಮೆಚ್ಚುಗೆ ವ್ಯಕ್ತವಾಗಿದೆ. ಉತ್ತಮ ಸಲಹೆ ನೀಡಿದ ಎಕ್ಸ್ ಬಳಕೆದಾರನಿಗೆ ಆತನ, ಯಾವುದೇ ವಿದ್ಯಾರ್ಹತೆ ಕೇಳದೆ ಉದ್ಯೋಗ ಆಫರ್ ನೀಡಿದ ನಡೆಯನ್ನು ಮೆಚ್ಚಕೊಂಡಿದ್ದಾರೆ.
ಅಷ್ಟಕ್ಕೂ ಭಾನು ಹಂಚಿಕೊಂಡ ನಾಲ್ಕು ಸಲಹೆಗಳು ಇಲ್ಲಿವೆ.
ಮೊದಲ ಸಲಹೆಯಲ್ಲಿ ಭಾನು ಸಿಒಡಿಗೆ ಅನ್ವಯಿಸುವುದು ಸೂಕ್ತವಲ್ಲ ಎಂದಿದ್ದಾರೆ. ಇನ್ನು ಡೆಲಿವರಿ ಪಾಯಿಂಟ್‌ನಿಂದ ಪಾರ್ಸೆಲ್ 500 ಮೀಟರ್ ತಲುಪಿದ್ದರೆ ಫುಡ್ ಕ್ಯಾನ್ಸಲ್ ಮಾಡಲು ಅವಕಾಶ ನೀಡಬಾರದು ಎಂದು ಸಲಹೆ ನೀಡಿದ್ದಾರೆ. ಇಬ್ಬರು ಮೂರ್ಖರು ಫುಡ್ ಆರ್ಡರ್ ಮಾಡಿ ಕ್ಯಾನ್ಸಲ್ ಮಾಡುತ್ತಾರೆ. ಈ ಮೂಲಕ ಕಡಿಮೆ ಬೆಲೆಯಲ್ಲಿ ಕ್ಯಾನ್ಸಲ್ ಮಾಡಿದ ಆರ್ಡರ್ ಪಡೆಯುವ ಪ್ರಯತ್ನ ನಡೆಯುತ್ತಿರುತ್ತದೆ. ಓರ್ವ ಗ್ರಾಹಕನಿಗೆ ತಿಂಗಲ್ಲಿ ಗರಿಷ್ಠ 2 ಆರ್ಡರ್ ಮಾಡಿದ ಫುಡ್ ಕ್ಯಾನ್ಸಲ್ ಮಾಡಲು ಮಾತ್ರ ಅವಕಾಶ ನೀಡಬೇಕು ಎಂದು ನಾಲ್ಕು ಸಲಹೆಯನ್ನು ಭಾನು ನೀಡಿದ್ದಾರೆ. ಇದೇ ಸಲಹೆ ದೀಪೀಂದರ್ ಗೋಯೆಲ್ ಮೆಚ್ಚುಗೆಗೆ ಪಾತ್ರವಾಗಿದೆ.
ಜೊಮ್ಯಾಟೋ ಕಚೇರಿ ದುಬಾರಿ ಕಾರು, 6 ರೂ ಪ್ಲಾಟ್‌ಫಾರ್ಮ್ ಫೀನಿಂದ ಖರೀದಿ ಎಂದ ನೆಟ್ಟಿಗರು!