ಪಾಕ್‌ ಹಿಂದು ವಲಸಿಗರ 150 ಮನೆ ಧ್ವಂಸ : ಐಎಎಸ್ ಟೀನಾ ದಾಬಿ ವಿರುದ್ಧ ಆಕ್ರೋಶ

By Kannadaprabha NewsFirst Published May 19, 2023, 8:49 AM IST
Highlights

ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ಆರೋಪಿಸಿ ಪಾಕಿಸ್ತಾನದಿಂದ ವಲಸೆ ಬಂದಿರುವ ನಿರಾಶ್ರಿತ ಹಿಂದೂಗಳ 150 ಮನೆಗಳನ್ನು ನೆಲಸಮಗೊಳಿಸಲು ಆದೇಶಿಸಿದ ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲಾಧಿಕಾರಿ ಟೀನಾ ದಾಬಿ ಟೀಕೆಗೊಳಗಾಗಿದ್ದಾರೆ.

ನವದೆಹಲಿ: ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಲಾಗಿದೆ ಎಂದು ಆರೋಪಿಸಿ ಪಾಕಿಸ್ತಾನದಿಂದ ವಲಸೆ ಬಂದಿರುವ ನಿರಾಶ್ರಿತ ಹಿಂದೂಗಳ 150 ಮನೆಗಳನ್ನು ನೆಲಸಮಗೊಳಿಸಲು ಆದೇಶಿಸಿದ ರಾಜಸ್ಥಾನದ ಜೈಸಲ್ಮೇರ್‌ ಜಿಲ್ಲಾಧಿಕಾರಿ ಟೀನಾ ದಾಬಿ ಟೀಕೆಗೊಳಗಾಗಿದ್ದಾರೆ. ಟೀನಾ ಆದೇಶದ ಮೇರೆಗೆ ಅಮನ್‌ ಸಾಗರ್‌ ಪ್ರದೇಶದಲ್ಲಿ 150ಕ್ಕೂ ಹೆಚ್ಚು ಜನ ಹಿಂದೂ ವಲಸಿಗರು ವಾಸವಿದ್ದ 50 ಮನೆಗಳನ್ನು ಬುಲ್ಡೋಜರ್‌ನಿಂದ ನೆಲಸಮಗೊಳಿಸಲಾಗಿದೆ. ಇದನ್ನು ವಿರೋಧಿಸಿರುವ ಪಾಕಿಸ್ತಾನಿ ವಲಸಿಗ ಹಿಂದೂಗಳು ಟೀನಾ ಕಚೇರಿ ಮುಂದೆ ಗುಡಿಸಲುಗಳನ್ನು ಹಾಕಿ ಪ್ರತಿಭಟನೆ ನಡೆಸಿದ್ದಾರೆ. ನಮಗೆ ಮರಳಿ ಅದೇ ಜಾಗದಲ್ಲಿ ಅಥವಾ ಬೇರೆಡೆ ಸ್ಥಳಾವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜಸ್ಥಾನ (Rajasthan) ವಿಪಕ್ಷ ನಾಯಕ (Opposition Leader), ಘಟನೆಯನ್ನು ಖಂಡಿಸಿದ್ದು, ಬಿಜೆಪಿಯ ರಾಜೇಂದ್ರ ರಾಠೋಡ್‌ (Rajendra Rathod ‘ಗೆಹ್ಲೋಟ್‌ ಸರ್ಕಾರದ ತುಷ್ಟೀಕರಣ ರಾಜಕೀಯ ಮತ್ತು ಕಾಂಗ್ರೆಸ್‌ನ ಕ್ರೂರ ಧೋರಣೆ’ ಇದು ಎಂದು ಕಿಡಿಕಾರಿದ್ದಾರೆ.  ಆದರೆ, ‘ಈ ನಿರಾಶ್ರಿತರು ಕೆರೆಯ ದಂಡೆಯ ಜಾಗವನ್ನು ಅತಿಕ್ರಮಣ ಮಾಡಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದು, ಇದರಿಂದ ಕೆರೆಗೆ ನೀರು ಬರುವುದು ಸ್ಥಗಿತವಾಗಿತ್ತು. ಹೀಗಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಆಡಳಿತ ಹೇಳಿದೆ.

Latest Videos

ಐಎಸ್‌ಎಸ್‌ ಅಧಿಕಾರಿ ಟೀನಾ ಡಾಬಿಯ ತಾಯಿ ಕೂಡ ಐಇಎಸ್‌, ಕಾಲೇಜ್‌ ಟಾಪರ್‌ ಆಗಿದ್ರು ಹಿಮಾಲಿ ಡಾಬಿ!

‘ನಿರಾಶ್ರಿತರಿಗೆ ರಾತ್ರಿಯ ಊಟ (Dinner) ಮತ್ತು ತಾತ್ಕಾಲಿಕ ಮೇಲ್ಛಾವಣಿ ವ್ಯವಸ್ಥೆ ಮಾಡಲಾಗಿದೆ. ಭಾರತೀಯ ಪೌರತ್ವ (Indian citizenship) ಪಡೆಯದ ಇವರಿಗೆ ಪುನರ್ವಸತಿ ನಿರ್ಮಿಸಿ ಕೊಡುವ ಬಗ್ಗೆ ರಾಜ್ಯ ಸರ್ಕಾರದಿಂದ (State Govt)ಯಾವುದೇ ಸೂಚನೆ ಬಂದಿಲ್ಲ. ಒಂದು ವೇಳೆ ಬಂದರೆ ನಾವು ನಿರಾಶ್ರಿತರ ಪರವಾಗಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದು ಟೀನಾ ಹೇಳಿದ್ದಾರೆ.

Tina Dabi -Pradeep Gawande: ಐಎಎಸ್ ಅಧಿಕಾರಿ ಟೀನಾ ದಾಬಿ- ಪ್ರದೀಪ್ ಗವಾಂಡೆ ಲವ್ ಸ್ಟೋರಿ

click me!