ರಾಜ್ಯದಲ್ಲಿ ಉಚಿತ ಕೊಡುಗೆ ಭರವಸೆ ನೀಡಿ ಗೆದ್ದ ಕಾಂಗ್ರೆಸ್‌ನಿಂದ ಮಧ್ಯಪ್ರದೇಶದಲ್ಲೂ ಉಚಿತಗಳ ಘೋಷಣೆ

Published : May 19, 2023, 07:58 AM IST
ರಾಜ್ಯದಲ್ಲಿ ಉಚಿತ ಕೊಡುಗೆ ಭರವಸೆ ನೀಡಿ ಗೆದ್ದ ಕಾಂಗ್ರೆಸ್‌ನಿಂದ ಮಧ್ಯಪ್ರದೇಶದಲ್ಲೂ ಉಚಿತಗಳ ಘೋಷಣೆ

ಸಾರಾಂಶ

ಕರ್ನಾಟಕದಲ್ಲಿ ಕಾಂಗ್ರೆಸ್‌ ಉಚಿತ ಕೊಡುಗೆಗಳ ಭರವಸೆ ನೀಡಿ ಗೆಲ್ಲುತ್ತಿದ್ದಂತೆಯೇ ಮಧ್ಯಪ್ರದೇಶದಲ್ಲಿ ಕೂಡ ಕಾಂಗ್ರೆಸ್‌ ಇಂಥದ್ದೇ ಭರವಸೆಗಳನ್ನು ನೀಡಿದೆ.

ಭೋಪಾಲ್‌: ಕರ್ನಾಟಕದಲ್ಲಿ ಕಾಂಗ್ರೆಸ್‌ ಉಚಿತ ಕೊಡುಗೆಗಳ ಭರವಸೆ ನೀಡಿ ಗೆಲ್ಲುತ್ತಿದ್ದಂತೆಯೇ ಮಧ್ಯಪ್ರದೇಶದಲ್ಲಿ ಕೂಡ ಕಾಂಗ್ರೆಸ್‌ ಇಂಥದ್ದೇ ಭರವಸೆಗಳನ್ನು ನೀಡಿದೆ. ಪಕ್ಷ ಅಧಿಕಾರಕ್ಕೆ ಬಂದರೆ 100 ಯೂನಿಟ್‌ ಉಚಿತ ವಿದ್ಯುತ್‌ ನೀಡಲಾಗುವುದು. 101ರಿಂದ 200 ಯೂನಿಟ್‌ವರೆಗೆ ಅರ್ಧ ದರ ವಿಧಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕಮಲ್‌ ನಾಥ್‌ (Kamalanath) ಘೋಷಿಸಿದ್ದಾರೆ. ರಾಜ್ಯದಲ್ಲಿ ನವೆಂಬರ್‌ನಲ್ಲಿ ಚುನಾವಣೆ ನಡೆಯಬೇಕಿದೆ. ಈ ನಿಮಿತ್ತ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ನಾಥ್‌, ‘ಬಡ ಮಹಿಳೆಯರಿಗೆ ಮಾಸಿಕ 1500 ರು. ಸಹಾಯಧನ ನೀಡಲಾಗುವುದು. ಹಳೇ ಪಿಂಚಣಿ ಯೋಜನೆ ಜಾರಿಗೆ ತರಲಾಗುವುದು ಎಂದೂ ಹೇಳಿದರು. ಆಡಳಿತಾರೂಢ ಬಿಜೆಪಿ ಕೂಡ ಇತ್ತೀಚೆಗೆ ವಾರ್ಷಿಕ 2 ಲಕ್ಷ ರು.ಗಿಂತ ಕಡಿಮೆ ಆದಾಯ ಇರುವ ಕುಟುಂಬಕ್ಕೆ ಮಾಸಿಕ 1000 ರು. ನೀಡುವ ಭರವಸೆ ನೀಡಿತ್ತು.

ರಾಜ್ಯದಲ್ಲಿ ಉಚಿತ ವಿದ್ಯುತ್ ಘೋಷಣೆ

200 ಯೂನಿಟ್‌ ಉಚಿತ ವಿದ್ಯುತ್‌ ಗ್ಯಾರಂಟಿ ಘೋಷಣೆ ಮಾಡಿರುವ ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಸ್ಪಷ್ಟಬಹುಮತ ಪಡೆದು ಗೆದ್ದ ಬೆನ್ನಲ್ಲೇ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ವಿದ್ಯುತ್‌ ಬಿಲ್‌ ಕಟ್ಟಲು ನಾಗರಿಕರು ಹಿಂದೇಟು ಹಾಕುತ್ತಿದ್ದಾರೆ. ಆದರೆ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಮೆಸ್ಕಾಂ ವ್ಯಾಪ್ತಿಯ ನಾಲ್ಕು ಜಿಲ್ಲೆಗಳಲ್ಲಿ ಇಂತಹ ವಿದ್ಯಮಾನಗಳು ಹೆಚ್ಚಾಗಿ ನಡೆಯುತ್ತಿಲ್ಲ. ಮೊದಲಿನಂತೆಯೇ ಸಾಮಾನ್ಯ ರೀತಿಯಲ್ಲಿ ಜನರು ವಿದ್ಯುತ್‌ ಬಿಲ್‌ ಕಟ್ಟುತ್ತಿದ್ದಾರೆ.

ಎಮ್ಮೆಲ್ಲೆ ಬಸನಗೌಡ ಹೇಳ್ಯಾರಾ, ಕರೆಂಟ್‌ ಬಿಲ್‌ ಕಟ್ಟಂಗಿಲ್ಲ, ಏನ್ಮಾಡ್ತಿರಾ ಮಾಡ್ಕೊಳ್ಳಿ

ದಕ್ಷಿಣ ಕನ್ನಡ(Dakshina kannada) ಜಿಲ್ಲೆಯಲ್ಲಿ ಭಾಗ್ಯಜ್ಯೋತಿ(Bhagya jyoti), ಕುಟೀರ ಜ್ಯೋತಿ ಯೋಜನೆ(Kuteera jyoti scheme)ಯ ಮನೆಗಳನ್ನು ಹೊರತುಪಡಿಸಿ ಒಟ್ಟು 6,24,663 ಗೃಹಬಳಕೆ ಸಂಪರ್ಕಗಳಿಂದ ಮಾಚ್‌ರ್‍ ತಿಂಗಳಲ್ಲಿ ಒಟ್ಟು 64.8 ಮಿಲಿಯನ್‌ ಯೂನಿಟ್‌ ವಿದ್ಯುತ್‌ ಬಳಕೆಯಾಗಿತ್ತು. ಮೆಸ್ಕಾಂ(Mescom)ಗೆ ಮಾರ್ಚ್‌ನಲ್ಲಿ ಬರಬೇಕಾದ ವಿದ್ಯುತ್‌ ಶುಲ್ಕದ ಬೇಡಿಕೆ 52.79 ಕೋಟಿ ರು. ಇದ್ದರೂ ಹಿಂದಿನ ತಿಂಗಳ ಬಾಕಿ ಮೊತ್ತ ಇತ್ಯಾದಿ ಸೇರಿ 60.04 ಕೋಟಿ ರು. ಸಂಗ್ರಹವಾಗಿತ್ತು. ಅದೇ ರೀತಿ ಉಡುಪಿಯಲ್ಲಿ 3,55,740 ಗೃಹ ಬಳಕೆ ಸಂಪರ್ಕಗಳಿಂದ ಮಾರ್ಚ್‌ನಲ್ಲಿ 26.23 ಕೋಟಿ ರು. ಶುಲ್ಕ ಸಂಗ್ರಹದ ಗುರಿ ಇದ್ದರೂ 28.84 ಕೋಟಿ ರು. ಸಂಗ್ರಹವಾಗಿದೆ.

ತೀರ ಸಮಸ್ಯೆ ಆಗಿಲ್ಲ: ‘‘ಮೆಸ್ಕಾಂ ವ್ಯಾಪ್ತಿಯ ಕೆಲವೊಂದು ಕಡೆಗಳಲ್ಲಿ ಜನರು ಉಚಿತ ಯೋಜನೆ ಇರುವುದರಿಂದ ಈಗಲೇ ವಿದ್ಯುತ್‌ ಬಿಲ್‌ ಕಟ್ಟಬೇಕೇ ಎಂದು ವಿಚಾರಿಸುತ್ತಿದ್ದಾರೆ. ಮೆಸ್ಕಾಂ ಸಿಬ್ಬಂದಿ ತಿಳಿಹೇಳಿದ ಬಳಿಕ ಶುಲ್ಕ ಕಟ್ಟುತ್ತಿದ್ದಾರೆ. ಆದರೆ ಬಿಲ್‌ ಕಟ್ಟುವುದೇ ಇಲ್ಲ ಎಂದು ಹಠ ಹಿಡಿದ ವಿದ್ಯಮಾನಗಳು, ತೀರ ಸಮಸ್ಯೆ ಎನಿಸುವ ಘಟನೆಗಳು ಕಂಡುಬರುತ್ತಿಲ್ಲ’’ ಎಂದು ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ನಮ್ಮೋಣಿಗೆ ಯಾಕ್‌ ಬಂದ್ರಿ ? ನಾವು ಕರೆಂಟ್‌ ಬಿಲ್‌ ಕಟ್ಟಲ್ಲಂದ್ರೆ ಕಟ್ಟಲ್ಲ : ಜನ ಪಟ್ಟು!

200 ಯೂನಿಟ್‌ ಉಚಿತ ವಿದ್ಯುತ್‌’ ಘೋಷಣೆ ಜಾರಿಯಾಗಬೇಕಾದರೆ ಮೊದಲು ಸರ್ಕಾರ ರಚನೆಯಾಗಬೇಕು. ಅದರ ಬಳಿಕ ಸರ್ಕಾರ ಈ ಯೋಜನೆಯನ್ನು ಅಧಿಕೃತವಾಗಿ ಘೋಷಣೆ ಮಾಡಬೇಕು. ಯಾವ ತಿಂಗಳಿನಿಂದ ವಿದ್ಯುತ್‌ ಉಚಿತ ಎನ್ನುವುದನ್ನೂ ತಿಳಿಸಬೇಕು. ನಂತರವೇ ಅದು ಜಾರಿಯಾಗುವುದು. ಅಲ್ಲಿಯವರೆಗೆ ಸಾರ್ವಜನಿಕರು ವಿದ್ಯುತ್‌ ಬಿಲ್‌ ಕಟ್ಟಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌