ಬೀದಿಯಲ್ಲಿ ಕಿತ್ತಾಡಿಕೊಂಡ ವೃದ್ಧ ದಂಪತಿ: ವಿಡಿಯೋ ವೈರಲ್

Published : Feb 08, 2023, 07:06 PM IST
ಬೀದಿಯಲ್ಲಿ ಕಿತ್ತಾಡಿಕೊಂಡ ವೃದ್ಧ ದಂಪತಿ: ವಿಡಿಯೋ ವೈರಲ್

ಸಾರಾಂಶ

ವೃದ್ಧ ದಂಪತಿ ಬೀದಿಯಲ್ಲಿ ಹೊಡೆದಾಡಿಕೊಂಡಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. 

ಮುಂಬೈ: ದಾಂಪತ್ಯದಲ್ಲಿ ಕಿತ್ತಾಟ ಮುದ್ದಾಟ ಎರಡು ಸಾಮಾನ್ಯ. ಇದುವರೆಗೆ ನಾವು ವೃದ್ಧ ದಂಪತಿಗಳು ಬಹಳ ಅನೋನ್ಯವಾಗಿರುವ ಬೀದಿಯಲ್ಲಿ ಜೊತೆಯಾಗಿ ಕೈ ಕೈ ಹಿಡಿದು ನಡೆದಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದನ್ನು ನೋಡಿದ್ದೆವು. ಆದರೆ ಈಗ ವೃದ್ಧ ದಂಪತಿ ಬೀದಿಯಲ್ಲಿ ಹೊಡೆದಾಡಿಕೊಂಡಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. 
 
ಘರ್ ಕೇ ಕಲೇಶ್ ಎಂಬ ಹೆಸರಿನ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋ ಪೋಸ್ಟ್ ಆಗಿದೆ.  ರಸ್ತೆ ಬದಿಯ ಅಂಗಡಿಯೊಂದರ ಮುಂದೆ ದಂಪತಿ ಹೊಡೆದಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ಮುಂಬೈನಲ್ಲಿ ಮುಂಬೈನ (Mumbai) ಪಶ್ಚಿಮ ಮಲದ್‌ನಲ್ಲಿ (Malad West) ಪ್ರಸಿದ್ಧ ಎಂಎಂ ಮಿಠಾಯಿವಾಲಾ ಸ್ವೀಟ್ ಶಾಪ್ ಮುಂದೆ ಈ ದೃಶ್ಯ ಸೆರೆ ಆಗಿದೆ. ವಿಡಿಯೋದಲ್ಲಿ ಕಾಣಿಸುವಂತೆ  ವೃದ್ಧ ದಂಪತಿ (Old couple) ಪಾತ್ರೆಯೊಂದರಲ್ಲಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. 

ವೃದ್ಧ ಜೋಡಿಯ ಕೊಲೆ ಮಾಡಿದ್ದು 12 ವರ್ಷದ ಚಿಂದಿ ಆಯುವ ಬಾಲಕ

ಮೊದಲಿಗೆ ಚೂಡಿಧಾರ್ ಧರಿಸಿರುವ ವೃದ್ಧ ಮಹಿಳೆ ಪಾತ್ರೆಯಿಂದ ತನ್ನ ಗಂಡನ ಮೇಲೆ ಹಲ್ಲೆ ಮಾಡಿದ್ದಾಳೆ. ಈ ವೇಳೆ ಗಂಡ ಆಕೆಯಿಂದ ಪಾತ್ರೆ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ನಂತರ  ಅದರಿಂದ ಪತ್ನಿಗೆ ಥಳಿಸಲು ಮುಂದಾಗುತ್ತಾನೆ. ಇದರೊಂದಿಗೆ ವಿಡಿಯೋ ಕೊನೆಯಾಗುತ್ತದೆ.  ಈ ದೃಶ್ಯವನ್ನು ದಾರಿಯಲ್ಲಿ ಹೋಗುವವರು ಕೂಡ ನೋಡುತ್ತಾ ನಿಂತಿರುವುದು ವಿಡಿಯೋದಲ್ಲಿ ಸೆರೆ ಆಗಿದೆ.

ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸೆರೆ ಆಗಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಇದು ಕರಣ್ ಜೋಹರ್ (Karan Johar) ಸಿನಿಮಾದಲ್ಲಿ ಇರದಂತಹ ದೃಶ್ಯ. ಇದು  ನಿಜವಾದ ಮದುವೆಯ ಸೀನ್ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ವೃದ್ಧ ಜೋಡಿಯ ಕಿತ್ತಾಟ ನೋಡುತ್ತಾ ನಿಂತಿರುವ ಜನರಿಗೆ ಬೈದಿದ್ದಾರೆ. ನೋಡುತ್ತಾ ನಿಂತವರಿಗೆ ನಾಚಿಕೆ ಇಲ್ಲವೇ ಎಂದು ಕಾಮೆಂಟ್ ಮಾಡಿದ್ದಾರೆ. ಇದೊಂದು ಅಂತಿಮವಾದ ಸೋಲು ಕಷ್ಟ ಸುಖ ಎರಡರಲ್ಲೂ ಜೊತೆಯಾಗಿರುತ್ತೇವೆ ಎಂದು ಮತ್ತು ಕೊಟ್ಟವರು ಬೀದಿಯಲ್ಲಿ ಕಿತ್ತಾಡುವುದು ಬೇಸರದ ವಿಚಾರ ಎಂದು ಕಾಮೆಂಟ್ ಮಾಡಿದ್ದಾರೆ. 

ಡಾನ್ಸ್‌ಗೆ ಕರೆದ ತಾತನಿಗೆ ನೋ ಎಂದ ಅಜ್ಜಿ... ಆಮೇಲೆ ತಾತ ಮಾಡಿದ್ದು ಕಿತಾಪತಿ..!

ನವ ಪ್ರೇಮಿಗಳು ಪರಸ್ಪರ ಹೊಡೆದಾಡುವುದನ್ನು ನಾವು ನೋಡುತ್ತೇವೆ. ಆದರೆ ಪ್ರಾಯ ಮಾಗಿದಂತೆ ದಂಪತಿ ಮಧ್ಯೆ ಒಂದು ಗಾಢವಾದ ಅನೋನ್ಯತೆ ಏರ್ಪಡುತ್ತದೆ. ಕಷ್ಟದಲ್ಲೂ ಸುಖದಲ್ಲೂ ಧೀರ್ಘಕಾಲದಿಂದ ಜೊತೆಗಿರುವ ಸಂಗಾತಿಯ ಬಗ್ಗೆ ಪ್ರೀತಿ ಅಭಿಮಾನ ಮೂಡುತ್ತದೆ.  ಸಿನಿಮಾಗಳಲ್ಲಿ ರೋಮ್ಯಾಂಟಿಕ್ ಸೀನ್‌ಗಳನ್ನು ನೋಡಿದ ಅನೇಕರು ನಿಜ ಜೀವನದಲ್ಲಿಯೂ ಬದುಕು ಹಾಗೆಯೇ ಇರುತ್ತದೆ ಎಂದು ಭಾವಿಸುವವರೇ ಹೆಚ್ಚು. ಆದರೆ ನಿಜ ಜೀವನ ಪ್ರೀತಿ ವಿರಸ ಎರಡರ ಸಮಾಗಮ. ಪರಸ್ಪರ ಕಿತ್ತಾಟಗಳು ದಾಂಪತ್ಯದ ಒಂದು ಭಾಗ. ಇದನ್ನು ನವ ಜೋಡಿಗಳು ಪರಸ್ಪರ ಅರಿತುಕೊಂಡು ಜೊತೆಯಾಗಿ ಸಾಗಬೇಕಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್