RPF saves woman life:ಚಲಿಸುವ ರೈಲಿನಿಂದ ಆಯ ತಪ್ಪಿ ಬಿದ್ದ ವೃದ್ಧೆಯ ರಕ್ಷಿಸಿದ ರೈಲ್ವೇ ರಕ್ಷಣಾ ಪಡೆ!

By Suvarna NewsFirst Published Nov 30, 2021, 6:00 PM IST
Highlights
  • ಚಲಿಸುವ ರೈಲಿನಿಂದ ಆಯ ತಪ್ಪಿ ಬಿದ್ದ 71 ವರ್ಷದ ವೃದ್ಧೆ
  • ಪ್ಲಾಟ್‌ಫಾರ್ಮ್ ಹಾಗೂ ರೈಲಿನ ನಡುವೆ ಸಿಲುಕಿದ ವೃದ್ಧೆ
  • ತಕ್ಷಣ ಕಾರ್ಯಪ್ರವೃತ್ತರಾದ ರೈಲ್ವೇ ರಕ್ಷಣಾ ಪಡೆಯಿಂದ ರಕ್ಷಣೆ

ಮುಂಬೈ(ನ.30): ರೈಲು ಹತ್ತುವಾಗ ಹಾಗೂ ಇಳಿಯುವಾಗ ಎಚ್ಚರವಿರಲಿ, ಚಲಿಸುವ ರೈಲಿನಲ್ಲೂ(Railway) ಅಷ್ಟೇ ಜಾಗರೂಕತೆ ಮುಖ್ಯ. ಅಜಾಗರೂಕತೆಯಿಂದ, ಅಚಾನಕ್ಕಾಗಿ, ಆಯ ತಪ್ಪಿ ಬಿದ್ದು ಪ್ರಾಣಕ್ಕೆ ಸಂಚಕಾರ ತಂದ ಹಲವು ಘಟನಗಳು ವರದಿಯಾಗಿದೆ. ಇದರ ನಡುವೆ ರೈಲ್ವೇ ರಕ್ಷಣಾ ಪಡೆ(Railway protection force), ಪೊಲೀಸರ ನೆರವಿನಿಂದ ಹಲವರ ಜೀವಗಳು ಉಳಿದಿದೆ. ಇದೇ ರೀತಿ ಚಲಿಸುತ್ತಿರುವ ರೈಲಿನಿಂದ ಆಯ ತಪ್ಪಿ ಬಿದ್ದ 71 ವರ್ಷ ವೃದ್ಧೆಯನ್ನು ರೈಲ್ವೇ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸದ ಘಟನೆ ಮುಂಬೈನ(Mumbai) ಥಾಣೆಯಲ್ಲಿ ನಡೆದಿದೆ.

22159 CSMT - ಚೈನ್ನೈ ಮೈಲ್ ಎಕ್ಸ್‌ಪ್ರೆಸ್ ರೈಲು(chennai mail express train) ಥಾಣೆಯ  ಕಲ್ಯಾಣನಗರ ರೈಲು(Kalyanagar Railway station) ನಿಲ್ದಾಣಕ್ಕೆ ಆಗಮಿಸಿತ್ತು. ಈ ರೈಲು ಪ್ಲಾಟ್‌ಫಾರ್ಮ್ ತಲುಪುತ್ತಿದ್ದಂತೆ ವೃದ್ಧೆ ಆಯ ತಪ್ಪಿದ್ದಾರೆ. ಪರಿಣಾಮ ರೈಲು ಪ್ಲಾಟ್‌ಫಾರ್ಮ್ ಹಾಗೂ ರೈಲಿಗಿರುವ ಅಂತರದೊಳಕ್ಕೆ ಬಿದ್ದಿದ್ದಾರೆ. ಇತ್ತ ಗಸ್ತು ತಿರುಗುತ್ತಿದ್ದ ರೈಲ್ವೇ ರಕ್ಷಣಾ ಪಡೆ ಸಿಬ್ಬಂದಿ ಉಪದೇಶ್ ಯಾದವ್ ತಕ್ಷಣ ಕಾರ್ಯಪ್ರವೃತ್ತರಾಗಿದ್ದಾರೆ. ಇದರಿಂದ 71 ವರ್ಷದ ವೃದ್ಧೆಯನ್ನು(Woman) ರಕ್ಷಿಸಿದ್ದಾರೆ.

ರೈಲು ಹಳಿಗೆ ಬಿದ್ದ ಮಗು ರಕ್ಷಿಸಿದ ರೈಲ್ವೇ ಸಿಬ್ಬಂದಿ: ಮೈ ಜುಮ್ಮೆನಿಸುವ ವಿಡಿಯೋ ವೈರಲ್!

ಆಯ ತಪ್ಪಿ ಬಿದ್ದ ವೃದ್ಧೆಯನ್ನು ಸಾರುಬಾಯಿ ಕರ್ಸುದೆ ಎಂದು ಗುರುತಿಸಲಾಗಿದೆ. ಚತ್ರಪತಿ ಶಿವಾಜಿ ಟರ್ಮಿನಲ್‌ನಿಂದ ಹೊರಟ ಚೆನ್ನೈ ಎಕ್ಸ್‌ಪ್ರೆಸ್ ರೈಲು, ಥಾಣೆಯ ಕಲ್ಯಾಣನಗರ ನಿಲ್ದಾಣಕ್ಕೆ ಆಗಮಿಸಿತ್ತು. ರೈಲು ಹೊರಟ ಬಳಿಕ ವೃದ್ಧೆ ಹತ್ತುವ ಪ್ರಯತ್ನ ಮಾಡಿದ್ದಾರೆ. ವೇಗವಾಗಿ ಚಲಿಸುವ ರೈಲು ಸರಿಯಾಗಿ ಹತ್ತಲು ಸಾಧ್ಯವಾಗದೆ ಆಯ ತಪ್ಪಿಬಿದ್ದಿದ್ದಾರೆ. 

ಅನಾಹುತಗಳ ಕುರಿತು ಎಚ್ಚರಿಕೆಯಿಂದ ಇರುವ ರೈಲ್ವೇ ರಕ್ಷಣಾ ಪಡೆ ಸಿಬ್ಬಂದಿ ಮಿಂಚಿನ ವೇಗದಲ್ಲಿ ನೆರವಿಗೆ ಧಾವಿಸಿದ್ದಾರೆ. ಪರಿಣಾಣ 71 ವರ್ಷದ ಸಾರುಬಾಯಿ ಪ್ರಾಣ ಉಳಿದಿದೆ. ಕಲ್ಯಾಣನಗರ ನಿಲ್ದಾಣ ಪ್ಲಾಟ್‌ಫಾರ್ಮ್ ನಂಬರ್ 4 ರಲ್ಲಿ ಕರ್ತವ್ಯದಲ್ಲಿದ್ದ ಉಪದೇಶ್ ಯಾದವ್ ರಕ್ಷಣಾ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.

ಚಲಿಸುತ್ತಿದ್ದ ರೈಲಿನಡಿಗೆ ಬಿದ್ದ ಇಬ್ಬರು ಪ್ರಯಾಣಿಕರ ರಕ್ಷಿಸಿದ RPF ಮಹಿಳಾ ಪೇದೆ!

ಕಳೆದ 5 ತಿಂಗಳಲ್ಲಿ ಈ ರೀತಿ 7ನೇ ಘಟನೆ ಸಂಭವಿಸುತ್ತಿದೆ. ರೈಲು ಹತ್ತುವಾಗ ಜಾರಿ ಬಿದ್ದ ಘಟನೆ, ರೈಲು ನಿಲ್ಲುವ ಮುನ್ನವೇ ಇಳಿಯಲು ಯತ್ನಿಸಿದ್ದ ಬಿದ್ದ ಘಟನೆಗಳು ವರದಿಯಾಗುತ್ತಲೇ ಇದೆ. ಹೀಗಾಗಿ ರೈಲ್ವೇ ಇಲಾಖೆ ಪ್ರಯಾಣಿಕರಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಚಲಿಸುತ್ತಿರುವ ರೈಲಿನಿಂದ ಇಳಿಯುವ ಹಾಗೂ ಹತ್ತುವ ಪ್ರಯತ್ನ ಮಾಡಬೇಡಿ ಎಂದು ಮನವಿ ಮಾಡಿದೆ.

ಅಕ್ಟೋಬರ್ ತಿಂಗಳಲ್ಲಿ ಇದೇ ಕಲ್ಯಾಣನಗರ ರೈಲು ನಿಲ್ದಾಣದಲ್ಲಿ 8 ತಿಂಗಳ ಗರ್ಭಿಣಿಯನ್ನು ರಕ್ಷಿಸಿದ ಘಟನೆ ನಡೆದಿತ್ತು. ಚಲಿಸುತ್ತಿರುವ ರೈಲಿನಿಂದ ಆಯ ತಪ್ಪಿ ರೈಲು ಪ್ಲಾಟ್‌ಫಾರ್ಮ್ ಹಾಗೂ ರೈಲಿಗಿರುವ ಅಂತರದಲ್ಲಿ ಬಿದ್ದಿದ್ದರು. ತಕ್ಷಣವೇ ರೈಲ್ವೇ ರಕ್ಷಣಾ ಪಡೆ ಗರ್ಭಿಣಿಯನ್ನು ರಕ್ಷಿಸಲಾಗಿತ್ತು.  ಗರ್ಭಿಣಿ ರೈಲಿನಿಂದ ಇಳಿಯುವಾಗ ಈ ಘಟನೆ ನಡೆದಿತ್ತು. ಪತಿ, ಪುತ್ರನೊಂದಿಗೆ ರೈಲಿನಿಂದ ಇಳಿಯುತ್ತಿರುವ ವೇಳೆ ಆಯ ತಪ್ಪಿ ಬಿದ್ದಿದ್ದರು.

ಕಲ್ಯಾಣನಗರ ರೈಲು ನಿಲ್ದಾಣದ 4ನೇ ಪ್ಲಾಟ್‌ಫಾರ್ಮ್‌ನಲ್ಲಿ ಈ ರೀತಿಯ ಘಟನೆಗಳು ಮರುಕಳಿಸುತ್ತಲೇ ಇದೆ. ಸಂಪೂರ್ಣ ರೈಲು ನಿಲ್ದಾಣಕ್ಕೆ ಸಿಸಿಟಿವಿ ಅಳವಡಿಸಲಾಗಿದೆ. ರೈಲ್ವೇ ರಕ್ಷಣಾ ಪಡೆ ಹದ್ದಿನ ಕಣ್ಣಿಟ್ಟಿದೆ. ಹೀಗಾಗಿ ಪ್ರಯಾಣಿಕರು ಜಾಗೃತ ವಹಿಸಲು ಕಲ್ಯಾಣನಗರ ನಿಲ್ದಾಣದ ಅಧಿಕಾರಿಗಳು ಮನವಿ ಮಾಡಿದ್ದಾರೆ. ಇನ್ನು ಎಲ್ಲೆಂದರಲ್ಲಿ ರೈಲು ಹಳಿಗಳನ್ನು  ದಾಟಬಾರದು ಎಂದು ಮನವಿ ಮಾಡಲಾಗಿದೆ. ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳಲು ಪಾದಾಚಾರಿ ರಸ್ತೆಗಳು, ಮೆಟ್ಟಿಲುಗಳಿವೆ. ಇದನ್ನು ಹೊರತು ಪಡಿಸಿ ಸುಲಭಕ್ಕಾಗಿ ರೈಲು ಹಳಿ ದಾಟುವ ಸಾಹಸ ಮಾಡಬಾರದು. ಇದರಿಂದ ಸಮಯ ಉಳಿಯುವುದಕ್ಕಿಂತ ಪ್ರಾಣ ಉಳಿಯುವುದಿಲ್ಲ ಎಂದು ರೈಲು ಅಧಿಕಾರಿಗಳು ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ.

click me!