ಕಪ್ಪು ಕುದುರೆ ಎಂದು 23 ಲಕ್ಷ ಕೊಟ್ಟು ತಂದ : ಸ್ನಾನ ಮಾಡಿಸಿದಾಗ ಬಯಲಾಯ್ತು ಬಣ್ಣ

By Anusha Kb  |  First Published Apr 25, 2022, 3:43 PM IST
  • ಕುದುರೆಗೆ ಬಣ್ಣ ಹಚ್ಚಿ ವಂಚಿಸಿದ ಖದೀಮರು
  • ಕಪ್ಪು ಕುದುರೆ ಎಂದು  23 ಲಕ್ಷ ಕೊಟ್ಟು ತಂದ
  • ಸ್ನಾನ ಮಾಡಿಸಿದ ನಂತರ ಬಯಲಾದ ಬಣ್ಣ

ಕಂದು ದೇಶೀಯ ಕುದುರೆಗೆ ಕಪ್ಪು ಬಣ್ಣ ಬಳಿದು ಪಂಜಾಬ್‌ನ (Punjab) ವ್ಯಕ್ತಿಯೊಬ್ಬರಿಗೆ ಖದೀಮರು ವಂಚಿಸಿದ ಘಟನೆ ನಡೆದಿದೆ. ದೇಶದಲ್ಲಿ ಅತೀ ಹೆಚ್ಚು ಬೇಡಿಕೆಯಿರುವ ಖ್ಯಾತ ಕುದುರೆ ತಳಿಯಾದ ಮರ್ವಾರಿ ಕಪ್ಪು ಕುದುರೆ (Marwari horse) ಎಂದು ವ್ಯಾಪಾರಿಯೊಬ್ಬರಿಗೆ ಖದೀಮರು ನಂಬಿಸಿ  23 ಲಕ್ಷಕ್ಕೆ ಕುದುರೆಯೊಂದನ್ನು ಅವರಿಗೆ ಮಾರಿದ್ದಾರೆ. ಖುಷಿ ಖುಷಿಯಿಂದಲೇ ಕುದುರೆಯನ್ನು ಮನೆಗೆ ಕರೆತಂದ ಅವರು ಅದಕ್ಕೊಮ್ಮೆ ಸ್ನಾನ ಮಾಡಿಸುವ ಎಂದು ನಿರ್ಧರಿಸಿ ಸ್ನಾನ ಮಾಡಿಸಲು ಹೊರಟಾಗ ಕುದುರೆಯ ಬಣ್ಣವೂ ಬದಲಾಗುವುದರ ಜೊತೆ ವಂಚಕರ ಮೋಸವೂ ಬಯಲಾಗಿದೆ. 

ಪಂಜಾಬ್‌ನ ಸಂಗ್ರೂರ್ (Sangrur) ಜಿಲ್ಲೆಯ ಬಟ್ಟೆ ವ್ಯಾಪಾರಿ ರಮೇಶ್ ಸಿಂಗ್ (Ramesh Singh) ಎಂಬುವವರೇ ಹೀಗೆ ಮೋಸ ಹೋದ ವ್ಯಾಪಾರಿ. ಕುದುರೆಯನ್ನು ಮನೆಗೆ ತಂದ ಅವರು ಅದಕ್ಕೆ ಸ್ನಾನ ಮಾಡಿಸಿದಾಗ ಆಘಾತಕ್ಕೊಳಗಾಗಿದ್ದಾರೆ. ಕಪ್ಪಿದ್ದ ಕುದುರೆಯ ಬಣ್ಣ ಕಂದು ಬಣ್ಣಕ್ಕೆ ತಿರುಗಿದೆ. 

Tap to resize

Latest Videos

ಲೋಕಲ್‌ ಟ್ರೈನೇರಿದ ಕುದುರೆ : ಫೋಟೋ ವೈರಲ್, ತನಿಖೆಗೆ ಆದೇಶ

ಸ್ಟಡ್ ಫಾರ್ಮ್‌ಗಳಲ್ಲಿ ಅಂದರೆ ಕುದುರೆ ಫಾರ್ಮ್‌ನಲ್ಲಿ(stud farms) ಈ ಕುದುರೆಯನ್ನು ಹೂಡಿಕೆ ಮಾಡಲು ಸಿಂಗ್ ನಿರ್ಧರಿಸಿದ ನಂತರ ಈ ವಂಚನೆ ಬಯಲಾಗಿದೆ. ಕುದುರೆಯ ಹೂಡಿಕೆಗೆ ಲೆಹರ್ ಕಲನ್ ಗ್ರಾಮದ (Lehar Kalan village) ಲಚ್ರಾ ಖಾನ್ (Lachhra Khan) ಎಂಬ ವ್ಯಕ್ತಿ ತನ್ನ ಸ್ನೇಹಿತರಾದ ಜಿತೇಂದರ್ ಪಾಲ್ ಸೆಖೋನ್ (Jitender Pal Sekhon) ಮತ್ತು ಲಖ್ವಿಂದರ್ ಸಿಂಗ್  (Lakhwinder Singh) ಇದಕ್ಕೆ ಸಹಾಯ ಮಾಡಬಹುದು ಮತ್ತುಅವರೊಂದಿಗೆ ಸಂಪರ್ಕದಲ್ಲಿರಬಹುದೆಂದು ಹೇಳಿದ್ದರು ಎಂದು ವರದಿಯಾಗಿದೆ.

ಗಡಸುತನಕ್ಕೆ ಹೆಸರುವಾಸಿಯಾಗಿರುವ ಮಾರ್ವಾರ್ ಪ್ರದೇಶದ ಅಪರೂಪದ ತಳಿಯಾದ ಮಾರ್ವಾರಿ ಕುದುರೆಗೆ ಸುಮಾರು 23 ಲಕ್ಷ ರೂಪಾಯಿ ಹೂಡಿಕೆ ಮಾಡುವುದಾಗಿ ರಮೇಶ್ ಸಿಂಗ್ ಅವರನ್ನು ನಂಬಿಸಲಾಯಿತು. ಕುದುರೆಯನ್ನು ಖರೀದಿಸಿದರೆ 5 ಲಕ್ಷ ರೂಪಾಯಿ ಲಾಭವಾಗಬಹುದು ಎಂಬ ನಂಬಿಕೆಯೂ ಅವರಲ್ಲಿತ್ತು. ಟೈಮ್ಸ್ ನೌ ಪ್ರಕಾರ ವಂಚಕರಿಗೆ 7.6 ಲಕ್ಷ ರೂಪಾಯಿ ನಗದು ಪಾವತಿಸಿದ್ದೇನೆ ಮತ್ತು ಉಳಿದ ಮೊತ್ತಕ್ಕೆ ಎರಡು ಚೆಕ್‌ಗಳನ್ನು ನೀಡಿದ್ದೇನೆ ಎಂದು ಸಿಂಗ್ ಹೇಳಿದ್ದಾರೆ.

ಕಾಲೇಜ್‌ ಹೋಗಲು ಬೈಕ್‌ ಅಲ್ಲ ಕುದುರೆ ಖರೀದಿಸಿದ ಯುವಕ

ಇದಾದ ಬಳಿಕ ರಮೇಶ್‌ ಸಿಂಗ್‌ ಕುದುರೆಯನ್ನು ಖರೀದಿಸಿ ನಂತರ ಸ್ನಾನ ಮಾಡಿಸಿದ್ದಾರೆ. ಆದರೆ ಸ್ನಾನದ ಬಳಿಕ ಬಣ್ಣ ನೋಡಿದ ಪಂಜಾಬ್ ವ್ಯಾಪಾರಿ  ಆಘಾತಕ್ಕೊಳಗಾದರು. ಬಣ್ಣ ಹೋದ ನಂತರ ಈ ಕುದುರೆ ಮರ್ವಾರಿ ಅಲ್ಲ ದೇಶಿ ಸ್ಟಾಲಿಯನ್ ಎಂದು ತಿಳಿದು ಬಂದಿದೆ. ಇದೀಗ ಪೊಲೀಸರು ಮೂವರು ಆರೋಪಿಗಳ ವಿರುದ್ಧ ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಫ್ಐಆರ್ ನಂತರ, ಈ ಮೂವರು ಇದೇ ವಿಧಾನದಲ್ಲಿ ಇತರರನ್ನು ಕೂಡ ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಣದಾಸೆಗೆ ಜೈಲಿನಲ್ಲಿರುವ ಆರೋಪಿಗಳಿಗೆ ಜಾಮೀನು ಕೊಡಿಸಲು ನ್ಯಾಯಾಲಯಕ್ಕೆ(Court) ನಕಲಿ ದಾಖಲೆ ಸಲ್ಲಿಸಿ ಶ್ಯೂರಿಟಿ ನೀಡುತ್ತಿದ್ದ 9 ಜನರ ತಂಡವನ್ನು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂಜೀವಿನಿ ನಗರದ ಪುಟ್ಟಸ್ವಾಮಿ, ಮಧುಗಿರಿಯ ನಸ್ರೀನ್‌, ನಗರದ ಜಗದೀಶ್‌ ಅಲಿಯಾಸ್‌ ಬಾಂಬೆ, ಚಂದ್ರೇಗೌಡ, ಸೊನ್ನೇಗೌಡ, ವೆಂಕಟೇಶ್‌, ಶಿಕ್ಷಣ ಇಲಾಖೆಯ ‘ಡಿ’ ಗ್ರೂಪ್‌ ನೌಕರ ಅಂಜಿನಪ್ಪ, ಮಂಜುನಾಥ, ರಾಜಣ್ಣ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ನಕಲಿ ಸೀಲುಗಳು, ನಕಲಿ ಪಹಣಿಗಳು, ಕಂಪ್ಯೂಟರ್‌, ಪ್ರಿಂಟರ್‌, ಸ್ಕಾನರ್‌, ಲ್ಯಾಮಿನೇಷನ್‌ ಮಿಷನ್‌, ಆಟೋ ರಿಕ್ಷಾ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

 

click me!