ಕಣ್ಣೀರಿಡ್ತಾ ಪಬ್‌ಜಿ ಅಂತ್ಯಕ್ರಿಯೆ ಮಾಡಿದ ಯುವಕರು..!

Suvarna News   | Asianet News
Published : Sep 08, 2020, 11:33 AM ISTUpdated : Sep 08, 2020, 01:08 PM IST
ಕಣ್ಣೀರಿಡ್ತಾ ಪಬ್‌ಜಿ ಅಂತ್ಯಕ್ರಿಯೆ ಮಾಡಿದ ಯುವಕರು..!

ಸಾರಾಂಶ

ನಿಷೇಧಕ್ಕೆ ಒಳಗಾಗಿರುವ ಪಬ್‌ಜಿ ಆ್ಯಪ್‌ ಭಾರತದಲ್ಲಿ ಇನ್ನು ನೆನಪು ಮಾತ್ರ. ಹೀಗಾಗಿ 15-20 ಯುವಕರು ಪಬ್ಜಿ ಆ್ಯಪ್‌ಗೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಿ ಕಂಬನಿ ಮಿಡಿದಿದ್ದಾರೆ. ಹೀಗಿತ್ತು ನೋಡಿ ಪಬ್‌ಜಿ ಅಂತ್ಯಕ್ರಿಯೆ

ಭಾರತದಲ್ಲಿ ಪಬ್ ಜಿ ಬ್ಯಾನ್ ಆಗಿದೆ. ದೇಶದಲ್ಲಿದ್ದ ಭಾರೀ ಫೇಮಸ್ ಗೇಮ್ ಹೀಗೆ ಹಠಾತ್ತನೆ ಬ್ಯಾನ್ ಆಗಿದ್ರಿಂದ ಯುವಕರು ಮಾತ್ರ ಭಾರೀ ಬೇಸರದಲ್ಲಿದ್ದಾರೆ. ಹಗಲು ರಾತ್ರಿ ಪಬ್‌ ಜಿ, ಗನ್, ಫೈಟ್, ಚಿಕನ್ ಡಿನ್ನರ್ ಅಂತಿದ್ದ ಯುವಕರ ಪಾಡು ಹೇಳ ತೀರದು.

ಪಬ್ ಜೀ ಬ್ಯಾನ್ ಆದ ಬೇಸರದಲ್ಲೇ ಯುವಕರ ತಂಡವೊಂದು ತಮ್ಮ ನೆಚ್ಚಿನ ಗೇಮ್‌ಗೆ ಹಾರ ಹಾಕಿ, ಹೆಗಲ ಮೇಲೆ ಹೊತ್ತುಕೊಂಡು ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಕಣ್ಣೀರೊರೆಸ್ಕೊಳ್ತಾ ವಿನ್ನರ್ ವಿನ್ನರ್ ಚಿಕನ್ ಡಿನ್ನರ್ ಅಂತ ಮಂತ್ರ ಬೇರೆ ಪಠಿಸಿದ್ದಾರೆ.

ಚೀನಾಕ್ಕೆ ಮತ್ತೊಂದು ಮರ್ಮಾಘಾತ; ಪಬ್‌ಜಿ ಸೇರಿ 118 ಅಪ್ಲಿಕೇಶನ್ ಬ್ಯಾನ್'

ನಿಷೇಧಕ್ಕೆ ಒಳಗಾಗಿರುವ ಪಬ್‌ಜಿ ಆ್ಯಪ್‌ ಭಾರತದಲ್ಲಿ ಇನ್ನು ನೆನಪು ಮಾತ್ರ. ಹೀಗಾಗಿ ಅಹಮದಾಬಾದ್‌ನಲ್ಲಿ 15-20 ಯುವಕರು ಪಬ್ಜಿ ಆ್ಯಪ್‌ಗೆ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಿ ಕಂಬನಿ ಮಿಡಿದಿದ್ದಾರೆ.

ಶವಕ್ಕೆ ಅಂತ್ಯಕ್ರಿಯೆ ಮಾಡುವಂತೆ ಪಬ್ಜಿ ಆಟದ ಫೋಟೊವನ್ನು ಇಟ್ಟು ಅದಕ್ಕೆ ಹೂಮಾಲೆ ಹಾಕಿ ಬಿಳಿ ಬಟ್ಟೆಯಲ್ಲಿ ನಾಲ್ವರು ಹೆಗಲ ಮೇಲೆ ಹೊತ್ತು ಊರೆಲ್ಲಾ ಮೆರವಣಿಗೆ ಮಾಡಿದ್ದು, ವಿನ್ನರ್‌ ವಿನ್ನರ್‌ ಚಿಕನ್‌ ಡಿನ್ನರ್‌ ಎಂದು ಮಂತ್ರ ಪಠಿಸಿದ್ದಾರೆ.

ಟಿಕ್ ಟಾಕ್ ಹೋಯ್ತು, ಪಬ್‌ಜಿನೂ ಹೋಯ್ತು..ಇನ್ನು ಇರೋದ್ಯಾವುದು?

ದೇಶದ ಅಭದ್ರತೆಗೆ ಕಾರಣವಾಗುವ ಪಬ್ ಹೇ ಗೇಮಿಂಗ್ ಮೊಬೈಲ್ ಎಪ್ಲಿಕೇಷನನ್ನು ಮಾಹಿತಿ ತಂತ್ರಜ್ಞಾನ ಇಲಾಖೆ ಇತ್ತೀಚೆಗಷ್ಟೇ ಭಾರತದಲ್ಲಿ ಬ್ಯಾನ್ ಮಾಡಿದೆ. ಸೋಷಿಯಲ್ಲ್ ಮೀಡಿಯಾದಲ್ಲಂತೂ ಈ ಬಗ್ಗೆ ಮೆಮ್ಸ್ ಸಿಕ್ಕಾಪೊಟ್ಟೆ ವೈರಲ್ ಆಗಿದೆ.

ಈ ಗೇಮ್ ಕಂಡು ಹಿಡಿದಿದ್ದು, ಐಯರ್‌ಲೆಂಡ್‌ನ ಬ್ರೆಂದನ್ ಗ್ರೀನ್. ಡೆಸ್ಕ ಟಾಪ್ ವರ್ಷನ್ ಗೇಮ್ ಕಂಡುಹಿಡಿದ ಈತನ ಗೇಮನ್ನು ದಕ್ಷಿಣ ಕೊರಿಯಾದ ಗೇಮಿಂಗ್ ಕಂಪನಿ ಬ್ಲೂ ಹೋಲ್ ಅಭಿವೃದ್ಧಿಪಡಿಸಿತ್ತು.ಗೌರವಯುತ ವಿದಾಯ ಕೋರಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

18 ದಿನದಲ್ಲಿ 10 ಲಕ್ಷ ಪ್ರಯಾಣಿಕರ ಇಂಡಿಗೋ ಟಿಕೆಟ್‌ ರದ್ದು
ಬೆಂಗ್ಳೂರಲ್ಲಿ ಸಿ-130 ವಿಮಾನ ವಿರ್ವಹಣಾ ಕೇಂದ್ರಕ್ಕೆ ಶಂಕು