ಆರೋಗ್ಯ ತಪಾಸಣೆ ಸೋನಿಯಾ ವಿದೇಶಕ್ಕೆ: ಮುಂಗಾರು ಅಧಿವೇಶನಕ್ಕೆ ಗೈರು, ಇಂದು ಮಹತ್ವದ ಸಭೆ

By Suvarna NewsFirst Published Sep 8, 2020, 10:47 AM IST
Highlights

ಆರೋಗ್ಯ ತಪಾಸಣೆಗಾಗಿ ಪುತ್ರಿ ಪ್ರಿಯಾಂಕ ಜೊತೆ ವಿದೇಶಕ್ಕೆ ಸೋನಿಯಾ ಗಾಂಧಿ | ಮುಂಗಾರು ಅಧಿವೇಶನಕ್ಕೆ 10 ದಿನಗಳ ಕಾಲ ಗೈರು | ವಿದೇಶಕ್ಕೆ ಹೋಗುವ ಮುನ್ನ ಮಹತ್ವದ ಸಭೆ

ಈ ಬಾರಿಯ ಮಾನ್ಸೂನ್ ಅಧಿವೇಶನದ ಸುಮಾರು 10 ದಿನಗಳ ಕಾಲವಾದ್ರೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗೈರಾಗಲಿದ್ದಾರೆ. ಆರೋಗ್ಯ ತಪಾಸಣೆಗಾಗಿ ಸೋನಿಯಾ ಅವರು ವಿದೇಶಕ್ಕೆ ತೆರಳಿದ್ದು, ಜೊತೆಗೆ ಪುತ್ರಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ತೆರಳಿದ್ದಾರೆ.

ಆರೋಗ್ಯ ತಪಾಸಣೆ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಅವರು ಅಧಿವೇಶನಕ್ಕೆ ಗೈರಾಗುವುದು ಖಚಿತ ಎನ್ನುತ್ತಿವೆ ಮೂಲಗಳು. ಸುಮಾರು 18 ದಿನಗಳ ಮುಂಗಾರು ಅಧಿವೇಶನಲ್ಲಿ ಕಾಂಗ್ರೆಸ್ ನಾಯಕಿ ಗೈರಾಗಲಿದ್ದಾರೆ.

'ಕಾಂಗ್ರೆಸ್‌ನ ರಾಜೀವ್ ಗಾಂಧಿ ಫೌಂಡೇಶನ್‌ಗೆ ಝಾಕೀರ್‌ ನಾಯ್ಕ್‌ನಿಂದ ಭಾರೀ ದೇಣಿಗೆ'

ಇಂದು ರಣತಂತ್ರದ ಸಭೆ ನಡೆಯಲಿದ್ದು, ಇವತ್ತು ಬೆಳಗ್ಗೆ 11 ಗಂಟೆಗೆ ವರ್ಚುವಲ್ ವೇದಿಕೆಯ ಮೂಲಕ ಸಭೆ ನಡೆಯಲಿದೆ. ಅಧಿವೇಶನದಲ್ಲಿ ಕಾಂಗ್ರೆಸ್ ಹೋರಾಟ ಕುರಿತು ಚರ್ಚೆ ನಡೆಯಲಿದೆ.

ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕರು, ಎರಡು ಸದನಗಳ ವಿಪಕ್ಷ ನಾಯಕರು ಭಾಗಿಯಾಗಲಿದ್ದಾರೆ. ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಇದರಲ್ಲಿ ಹಿರಿಯ ನಾಯಕರಾದ ಗುಲಾಮ್ ನಬಿ ಅಝಾದ್, ಆನಂದ್ ಶರ್ಮಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.

'AICCಗೆ ಚುನಾವಣೆ ಆಗಲಿ, ಇಲ್ಲ ಇನ್ನೂ 50 ವರ್ಷ ವಿರೋಧ ಪಕ್ಷದಲ್ಲೇ ಇರಬೇಕು'

ಇತ್ತೀಚೆಗಷ್ಟೇ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಅಝಾದ್ ಅವರು ಕಾಂಗ್ರೆಸ್ ಆಂತರಿಕ ಚುನಾವಣೆ ಬಗ್ಗೆ ಮಾತನಾಡಿದ್ದರು. ಕಾಂಗ್ರೆಸ್‌ನಲ್ಲಿ ಆಂತರಿಕ ಚುನಾವಣೆ ನಡೆಯದಿರುವುದೇ ಪಕ್ಷ ದುರ್ಬಲವಾಗಲು ಕಾರಣ ಎಂದೂ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಸಭೆ ಪ್ರಾಮುಖ್ಯತೆ ಪಡೆದಿದೆ.

ಸಭೆಯಲ್ಲಿ ಆಂತರಿಕ ಚುನಾವಣೆ ನಡೆಸುವ ಬಗ್ಗೆ ಚರ್ಚೆಗಳಾಗಲಿದೆಯಾ..? ಯಾರ ರೀತಿಯ ನಿರ್ಧಾರವಾಗಲಿದೆ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ. ಸುಮಾರು 10 ದಿನಗಳ ಕಾಲ ಸೋನಿಯಾ ಗಾಂಧಿ ವಿದೇಶಕ್ಕೆ ತೆರಳಲಿದ್ದು, ಅವರ ಗೈರಿನಲ್ಲಿ ನಡೆಯಲಿರುವ ಕಾರ್ಯಕಗಳ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆ ಇದೆ.

click me!