ನರೇಂದ್ರ ಮೋದಿ, ಇಂದಿರಾ ಗಾಂಧಿ, ವಾಜಪೇಯಿ ಮತ್ತು ಬುದ್ಧ ಪೂರ್ಣಿಮೆ! ಏನಿದು ಅಚ್ಚರಿಯ ಸಂಬಂಧ!

Published : May 13, 2025, 09:53 PM ISTUpdated : May 14, 2025, 10:17 AM IST
ನರೇಂದ್ರ ಮೋದಿ, ಇಂದಿರಾ ಗಾಂಧಿ, ವಾಜಪೇಯಿ ಮತ್ತು ಬುದ್ಧ ಪೂರ್ಣಿಮೆ! ಏನಿದು ಅಚ್ಚರಿಯ ಸಂಬಂಧ!

ಸಾರಾಂಶ

ಬುದ್ಧ ಪೂರ್ಣಿಮೆಗೂ ಭಾರತದ ಮೂವರು ಪ್ರಧಾನಿಗಳಿಗೂ ಕುತೂಹಲಕಾರಿ, ವಿಶಿಷ್ಟ ಸಂಬಂಧ ಇದೆ. ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಅವರೇ ಈ ಪ್ರಧಾನಿಗಳು ಹೇಗೆ ಸಂಬಂಧ ಅಂತ ನೋಡಿ.

ನಿನ್ನೆ ಗೌತಮ ಬುದ್ಧನನ್ನು ನೆನೆಯುವ ಬುದ್ಧ ಪೂರ್ಣಿಮೆ ಆಚರಿಸಿದೆವು. ನಿಮಗೆ ಗೊತ್ತಿರಲಿಕ್ಕಲ್ಲ, ಭಾರತದ ಮೂವರು ಪ್ರಧಾನಿಗಳಿಗೂ, ಅವರು ಕೈಗೊಂಡ ಮೂರು ಮಹಾನ್‌ ಕಾರ್ಯಗಳಿಗೂ, ಬುದ್ಧ ಪೂರ್ಣಿಮೆಗೂ ಅಚ್ಚರಿ ಹುಟ್ಟಿಸುವಂಥ ಒಂದು ಸಂಬಂಧವಿದೆ. ಯಾರು ಆ ಮೂವರು ಪ್ರಧಾನಿಗಳು? ನರೇಂದ್ರ ಮೋದಿ, ಅಟಲ್‌ ಬಿಹಾರಿ ವಾಜಪೇಯಿ ಮತ್ತು ಇಂದಿರಾ ಗಾಂಧಿ. ಏನು ಸಂಬಂಧ? ನೋಡೋಣ.    

ವಿಶೇಷವೆಂದರೆ, ಬುದ್ಧ ಪೂರ್ಣಿಮೆಯು ಭಾರತದ ಭದ್ರತಾ ಇತಿಹಾಸದಲ್ಲಿಯೂ ಮಹತ್ವದ ಪಾತ್ರ ಹೊಂದಿದೆ! ಸಾಂಪ್ರದಾಯಿಕವಾಗಿ ಬುದ್ಧ ಪೂರ್ಣಿಮೆ ಅಂದರೆ ಶಾಂತಿ ಮತ್ತು ಜ್ಞಾನೋದಯದ ದಿನವೆಂದು ಲೆಕ್ಕ. ಆದರೆ ಭಾರತದ ರಾಷ್ಟ್ರೀಯ ಪವರ್‌ನ ದಿಟ್ಟ ಪ್ರತಿಪಾದನೆಗೂ ಈ ದಿನ ಕ್ಯಾನ್ವಾಸ್ ಆಗಿ ಮಾರ್ಪಟ್ಟಿದೆ. ಮೂವರು ಅಪ್ರತಿಮ ಪ್ರಧಾನ ಮಂತ್ರಿಗಳು ಈ ಪವಿತ್ರ ದಿನವನ್ನು - ಭಾರತದ ದಿಟ್ಟ ಶಕ್ತಿಯನ್ನು ಜಗತ್ತಿನ ಮುಂದಿಡಲು- ಆಯ್ಕೆ ಮಾಡಿಕೊಂಡಿದ್ದಾರೆ.

1974: ಇಂದಿರಾ ಗಾಂಧಿಯವರ 'ಸ್ಮೈಲಿಂಗ್‌ ಬುದ್ಧ'

ಮೇ 18, 1974ರಂದು, ಜಗತ್ತು ಬುದ್ಧ ಪೂರ್ಣಿಮೆಯನ್ನು ಆಚರಿಸಿತು. ಭಾರತವು ರಾಜಸ್ಥಾನದ ಪೋಖ್ರಾನ್‌ನಲ್ಲಿ ʼಸ್ಮೈಲಿಂಗ್ ಬುದ್ಧʼ ಎಂಬ ಗುಪ್ತನಾಮದಲ್ಲಿ ತನ್ನ ಮೊದಲ ಪರಮಾಣು ಬಾಂಬ್‌ ಪರೀಕ್ಷೆಯನ್ನು ನಡೆಸಿ ಜಗತ್ತನ್ನು ಬೆರಗುಗೊಳಿಸಿತು. ಇದರ ಹಿಂದಿನ ಪ್ರಧಾನಿ: ಇಂದಿರಾ ಗಾಂಧಿ. ಇದು ಕೇವಲ ವೈಜ್ಞಾನಿಕ ಮೈಲಿಗಲ್ಲು ಮಾತ್ರಲ್ಲ, ಭಾರತದ ದೃಢ ಹೇಳಿಕೆಯಾಗಿತ್ತು. ಬುದ್ಧ ಪೂರ್ಣಿಮೆಯ ದಿನಾಂಕ ಶಾಂತಿಯನ್ನು ಸಂಕೇತಿಸುತ್ತದೆ, ಆದರೆ ವಿನಾಶದ ಸಾಮರ್ಥ್ಯವನ್ನು ಅನಾವರಣಗೊಳಿಸಿತು. ಅದರೆ, ಭಾರತವು ಶಾಂತಿಯನ್ನು ಬಯಸುತ್ತದೆ, ಆದರೆ ಯುದ್ಧಕ್ಕೆ ಸಿದ್ಧವಾಗಿರುತ್ತದೆ ಎಂಬುದು ಇದರ ಅರ್ಥವಾಗಿತ್ತು.

1998: ವಾಜಪೇಯಿಯವರ ಶಕ್ತಿ ಸರಣಿ

24 ವರ್ಷ ವೇಗವಾಗಿ ಸರಿಯಿತು. 1998ರ ಮೇ 11 ಮತ್ತು 13 - ಮತ್ತೆ ಬುದ್ಧ ಪೂರ್ಣಿಮೆಯ ಸುಮಾರಿಗೆ - ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪರಮಾಣು ಪರೀಕ್ಷೆಗಳನ್ನು ನಡೆಸಿದರು. ಇದನ್ನು ಪ್ರಸಿದ್ಧವಾಗಿ ʼಆಪರೇಷನ್ ಶಕ್ತಿʼ ಎಂದು ಹೆಸರಿಸಲಾಯಿತು. ಮತ್ತೊಮ್ಮೆ ಭಾರತ ತನ್ನ ಪರಮಾಣು ಸಿದ್ಧಾಂತವನ್ನು ಪುನರುಚ್ಚರಿಸಿತು. ಈ ಬಾರಿ ಹೆಚ್ಚಿನ ರಾಜಕೀಯ ವಿಶ್ವಾಸ ಮತ್ತು ತಾಂತ್ರಿಕ ಅತ್ಯಾಧುನಿಕತೆಯೊಂದಿಗೆ. ವಾಜಪೇಯಿಯವರ ದಿನಾಂಕದ ಆಯ್ಕೆಯ ಹಿಂದೆ ಸೈದ್ಧಾಂತಿಕ ಅರ್ಥವೂ ಇತ್ತು. ಅಮೆರಿಕ ಅಧ್ಯಕ್ಷ ಬಿಲ್‌ ಕ್ಲಿಂಟನ್‌ಗೆ ಬರೆದ ಪತ್ರದಲ್ಲಿ ಅವರು ಪಾಕಿಸ್ತಾನ ಮತ್ತು ಚೀನಾದಿಂದ ಭಾರತಕ್ಕೆ ಇರುವ ಬೆದರಿಕೆಯನ್ನು ಉಲ್ಲೇಖಿಸಿದರು. ಬುದ್ಧನ ಬೋಧನೆ ವಾಜಪೇಯಿಯವರ ಸಂದೇಶದಲ್ಲಿ ಸ್ಪಷ್ಟವಾಗಿದ್ದವು: "ನಾವು ಆಕ್ರಮಣಕಾರರಲ್ಲ, ಆದರೆ ನಾವು ಭಯಭೀತರಾಗುವುದಿಲ್ಲ."

LOC, LAC, IB: ಭಾರತದ ಈ ಗಡಿಗಳ ನಡುವಿನ ವ್ಯತ್ಯಾಸವೇನು? ನಕ್ಷೆಗಳು ಹೇಳದ ರಹಸ್ಯಗಳಿವು

2025: ಮೋದಿಯವರ ಆಪರೇಷನ್ ಸಿಂದೂರ್

2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಸಂಪ್ರದಾಯಕ್ಕೆ ಮೂರನೇ ಅಧ್ಯಾಯವನ್ನು ಸೇರಿಸಿದರು. ಬುದ್ಧ ಪೂರ್ಣಿಮೆಯಂದು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ಮಿಲಿಟರಿ ದಾಳಿಯಾದ ಆಪರೇಷನ್ ಸಿಂದೂರ್ ಅನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ ನಂತರ ಅವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ಮೇ 7ರಂದು ಪ್ರಾರಂಭಿಸಲಾದ ಈ ಕಾರ್ಯಾಚರಣೆ 100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿತು. ತಮ್ಮ ಭಾಷಣದಲ್ಲಿ ಮೋದಿ ಹೇಳಿದರು: “ಶಾಂತಿ ಕಾ ರಾಸ್ತಾ ಭಿ ಶಕ್ತಿ ಸೇ ಹೋಕರ್ ಹಿ ಜಾತಾ ಹೈ.” (“ಶಾಂತಿಯ ಹಾದಿಯೂ ಸಹ ಶಕ್ತಿಯ ಮೂಲಕವೇ ಸಾಗಬೇಕು.”)

ಮೂವರು ಪ್ರಧಾನ ಮಂತ್ರಿಗಳು - ಗಾಂಧಿ, ವಾಜಪೇಯಿ ಮತ್ತು ಮೋದಿ - ವಿಭಿನ್ನ ಕಾಲಘಟ್ಟ ಮತ್ತು ರಾಜಕೀಯವನ್ನು ಪ್ರತಿನಿಧಿಸುತ್ತಾರೆ. ಆದರೆ ಬುದ್ಧ ಪೂರ್ಣಿಮೆಯು ಈ ಮೂವರನ್ನೂ ವಿಶಿಷ್ಟವಾಗಿ ಬೆಸೆದಿದೆ ಎನ್ನಬಹುದು. ಮೂವರು ನಾಯಕರಾದರೂ ಸಂದೇಶ ಒಂದೇ. ಭಾರತವನ್ನು ಹಗುರವಾಗಿ ಪರಿಗಣಿಸಬೇಡಿ ಅಂತ. 

ಪಾಕಿಸ್ತಾನದಲ್ಲಿ ಮತ್ತೆ ಮತ್ತೆ ಭೂಂಕಪ! ಪರಮಾಣು ಪರೀಕ್ಷೆ ನಡೆಸ್ತಿದ್ಯಾ ಪಾಕ್​? ಏನಂದ್ರು ತಜ್ಞರು?
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೀ ಶರ್ಟ್ ಬಿಟ್ಟು ಖಾದಿ ಧರಿಸಿ ಬಂದು ರಾಜಕೀಯ ಸಂದೇಶ ರವಾನಿಸಿದ ರಾಹುಲ್ ಗಾಂಧಿ
ಪೌರತ್ವಕ್ಕೂ ಮುನ್ನ ಮತಪಟ್ಟೀಲಿ ಹೆಸರು : ಸೋನಿಯಾಗೆ ನೋಟಿಸ್‌