ಟಾಯ್ಲೆಟ್‌ಗೆ ಹೋದ್ರೂ ನೆಮ್ಮದಿಯಿಲ್ಲ; ಕಮೋಡ್ ಸೀಟರ್ ಸಿಡಿದು ಮುಖ-ಮೂತಿ ಸುಟ್ಟೋಯ್ತು!

Published : May 13, 2025, 09:13 PM IST
ಟಾಯ್ಲೆಟ್‌ಗೆ ಹೋದ್ರೂ ನೆಮ್ಮದಿಯಿಲ್ಲ; ಕಮೋಡ್ ಸೀಟರ್ ಸಿಡಿದು ಮುಖ-ಮೂತಿ ಸುಟ್ಟೋಯ್ತು!

ಸಾರಾಂಶ

ನೋಯ್ಡಾದಲ್ಲಿ ಯುವಕನೊಬ್ಬ ಶೌಚಾಲಯದಲ್ಲಿ ಕುಳಿತಾಗ ಕಮೋಡ್ ಸ್ಫೋಟಗೊಂಡು ಶೇ.೩೫ರಷ್ಟು ಸುಟ್ಟ ಗಾಯಗಳಾಗಿವೆ. ವಿದ್ಯುತ್ ದೋಷ ಅಲ್ಲ, ಬದಲಾಗಿ ಚರಂಡಿ ಪೈಪ್‍ನಿಂದ ಮೀಥೇನ್ ಸೋರಿಕೆಯಾಗಿ ಸ್ಫೋಟ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸ್ವಚ್ಛಗೊಳಿಸದ ಹಳೆಯ ಪೈಪ್‍ಗಳೇ ಕಾರಣವಿರಬಹುದು ಎಂದು ನಿವಾಸಿಗಳು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಪ್ರಾಧಿಕಾರದ ಅಧಿಕಾರಿಗಳು ಬೇರೆ ಕಾರಣವಿರಬಹುದು ಎಂದಿದ್ದಾರೆ.

ಎಲ್ಲರೂ ದೇಹದಲ್ಲಿ ಶೇಖರಣೆ ಆಗುವ ಮಲ-ಮೂತ್ರ ವಿಸರ್ಜನೆ ಅರ್ಜೆಂಟಾಗಿ ಬಂದಲ್ಲಿ ತುಂಬಾ ತಡವರಿಸುತ್ತಾರೆ. ಮಲ-ಮೂತ್ರ ವಿಸರ್ಜನೆಗೆ ಶೌಚಾಲಯಕ್ಕೆ ಹೋಗಿ ಕುಳಿತಾಗ ಬಹುತೇಕರು ನೆಮ್ಮದಿ ಭಾವವನ್ನು ಪಡೆಯುತ್ತಾರೆ. ಆದರೆ, ಇಲ್ಲೊಬ್ಬ ಅರ್ಜೆಂಟಾಗಿದೆ ಎಂದು ಟಾಯ್ಕೆಟ್‌ಗೆ ಹೋಗಿ ಕುಳಿದಾತ ಕಮೋಡ್ ಸೀಟರ್ ಸ್ಪೋಟಗೊಂಡು ಆತನ ಮುಖ, ಕೈಕಾಲು, ಸೇರಿ ದೇಹದ ವಿವಿಧ ಭಾಗಗಳು ಶೇ.35ರಷ್ಟು ಸುಟ್ಟು ಹೋಗಿವೆ. ಮಲಬಾಧೆ ತೀರಿಸಲು ಹೋದವನು ಇದೀಗ ಆಸ್ಪತ್ರೆಯಲ್ಲಿ ನೋವಿನಿಂದ ನರಳುತ್ತಿದ್ದಾನೆ.

ಈ ಘಟನೆ ನೋಯ್ಡಾದ ಸೆಕ್ಟರ್ 36 ರಲ್ಲಿ ನಡೆದಿದೆ. ನೋಯ್ಡಾದಲ್ಲಿ ಒಬ್ಬ ಯುವಕನಿಗೆ ಬಾತ್ರೂಮ್‌ನಲ್ಲಿ ವಿಚಿತ್ರ ಅನುಭವವಾಗಿದೆ. ಈ ಯುವಕ ಟಾಯ್ಲೆಟ್ ಸೀಟಿನಲ್ಲಿ ಕೂತಿದ್ದಾಗ ಸ್ಫೋಟ ಸಂಭವಿಸಿದೆ. ಯುವಕನ ಮುಖ ಸೇರಿದಂತೆ ಶರೀರದ 35% ರಷ್ಟು ಭಾಗ ಸುಟ್ಟಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 'ಸ್ಫೋಟದಲ್ಲಿ ಆಶುನ ಮುಖ ಮತ್ತು ದೇಹದ ಮೇಲೆ ತೀವ್ರ ಸುಟ್ಟ ಗಾಯಗಳಾಗಿವೆ. ಅವರನ್ನು ಗ್ರೇಟರ್ ನೋಯ್ಡಾದ ಸರ್ಕಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಜಿಮ್ಸ್) ದಾಖಲಿಸಲಾಗಿದೆ. 35% ಸುಟ್ಟ ಗಾಯಗಳಾಗಿವೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.' ಎಂದು ಆಶುನ ತಂದೆ ಸುನಿಲ್ ಪ್ರಧಾನ್ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದರು.

ಗ್ಯಾಜೆಟ್ ಸ್ಫೋಟದಂತಹ ಆರೋಪಗಳನ್ನು ಆಶುನ ತಂದೆ ತಳ್ಳಿಹಾಕಿದ್ದಾರೆ. ಆಶು ಬಾತ್ರೂಮ್‌ಗೆ ಹೋಗುವಾಗ ಮೊಬೈಲ್ ಫೋನ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಬಳಸುತ್ತಿರಲಿಲ್ಲ ಎಂದು ಅವರು ಹೇಳಿದರು. ಹಳೆಯ ಅಥವಾ ಸರಿಯಾಗಿ ನಿರ್ವಹಿಸದ ಪ್ಲಂಬಿಂಗ್ ವ್ಯವಸ್ಥೆಗಳಿರುವ ಮನೆಗಳಲ್ಲಿ ಇಂತಹ ಅಪಘಾತಗಳು ಸಂಭವಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಿದ್ಯುತ್ ದೋಷದಿಂದ ಸ್ಫೋಟ ಸಂಭವಿಸಿಲ್ಲ ಎಂದು ವರದಿಗಳು ಸೂಚಿಸುತ್ತವೆ. ಘಟನೆ ಸಂಭವಿಸಿದಾಗ ಮನೆಯಲ್ಲಿ ಎಸಿ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಅಪಾಯಕಾರಿಯಾದ ಮೀಥೇನ್ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿರಬಹುದು ಎಂದು ಕುಟುಂಬ ಹೇಳಿದೆ. ಟಾಯ್ಲೆಟ್ ಪೈಪ್‌ಗಳನ್ನು ನೇರವಾಗಿ ಚರಂಡಿಗೆ ಸಂಪರ್ಕಿಸಲಾಗಿದೆ. ಇದರಿಂದ ಅಪಾಯಕಾರಿ ಅನಿಲ ಸೋರಿಕೆಯಾಗಿರಬಹುದು ಎಂದು ಕುಟುಂಬ ಸೂಚಿಸಿದೆ.

ಸೊಸೈಟಿಯ ಪೈಪ್‌ಗಳು ಹಳೆಯದಲ್ಲ, ಆದರೆ ಅವುಗಳನ್ನು ವರ್ಷಗಳಿಂದ ಸ್ವಚ್ಛಗೊಳಿಸಿಲ್ಲ ಎಂದು ಸ್ಥಳೀಯ ನಿವಾಸಿ ಹರೀಂದರ್ ಭಾಟಿ ಹೇಳಿದ್ದಾರೆ. ಇದರಿಂದ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿರಬಹುದು ಎಂದು ಅವರು ಸೂಚಿಸಿದ್ದಾರೆ. ಸೀಮಿತ ಸ್ನಾನಗೃಹ ಸ್ಥಳಗಳಲ್ಲಿ ಮತ್ತು ಒಳಚರಂಡಿ ಮಾರ್ಗಗಳಲ್ಲಿ ಮೀಥೇನ್ ಸೋರಿಕೆಯಾಗುವ ಸಾಧ್ಯತೆ ಹೆಚ್ಚು. ವಿಶೇಷವಾಗಿ ಚರಂಡಿಗಳು ಮುಚ್ಚಿಹೋದಾಗ ಅಥವಾ ಗಾಳಿ ಪ್ರಸರಣ ಕಡಿಮೆಯಾದಾಗ ಸ್ಫೋಟದ ಸಾಧ್ಯತೆ ಹೆಚ್ಚು. ಆದರೆ, ವ್ಯವಸ್ಥೆಗಳು ಸ್ವಚ್ಛವಾಗಿದ್ದು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಮನೆಯಲ್ಲಿ ಬೇರೆ ಯಾವುದೋ ಕಾರಣದಿಂದ ಸ್ಫೋಟ ಸಂಭವಿಸಿರಬಹುದು ಎಂದು ಗ್ರೇಟರ್ ನೋಯ್ಡಾ ಪ್ರಾಧಿಕಾರದ ಹಿರಿಯ ವ್ಯವಸ್ಥಾಪಕ ಎ.ಪಿ. ವರ್ಮಾ ಹೇಳಿದ್ದಾರೆ.

ಟಾಯ್ಲೆಟ್ ಹೋಗುವ ಮಾರ್ಗದ ಬಗ್ಗೆ ಎಚ್ಚರವಿರಲಿ:
ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ಒಳಚರಂಡು ವ್ಯವಸ್ಥೆ ಮಾಡಿದ್ದರೆ ಕೆಲವೊಂದು ಬಾರಿ ಮ್ಯಾನ್ ಹೋಲ್ ಸಿಡಿಯುವ ಘಟನೆ ನಡೆಯುತ್ತದೆ. ಇದಕ್ಕೆ ಕಾರಣ ಮೀಥೇನ್ ಅನಿಲ. ಹೀಗಾಗಿ, ಮ್ಯಾನ್‌ ಹೋಲ್‌ನಲ್ಲಿ ರಂಧ್ರ ಕೊಟ್ಟು ಅನಿಲ ಹೊರಗೆ ಹೋಗುವಂತೆ ಮಾಡಲಾಗುತ್ತದೆ. ಇನ್ನು ಹಳ್ಳಿಗಳಲ್ಲಿ ಟಾಯ್ಲೆಟ್ ನಿರ್ಮಾಣಕ್ಕೆ ಪಿಟ್ ನಿರ್ಮಾಣ ಮಾಡಿದ್ದರೂ ಅದಕ್ಕೆ ಒಂದು ಗಾಳಿ ಹೋಗುವ ಪೈಪ್ ಅಳವಡಿಕೆ ಮಾಡಲಾಗಿರುತ್ತದೆ. ಈ ಪೈಪ್ ಮೂಲಕ ಮೀಥೇನ್ ಅನಿಲ ಹೊರಗೆ ಹೋಗುತ್ತದೆ. ಇದರಿಂದ ಸ್ಫೋಟ ಸಂಭವಿಸುವುದಿಲ್ಲ. ಆದರೆ,ಈ ಪ್ರಕರಣದಲ್ಲಿ ಚರಂಡಿಗೆ ನೇರವಾಗಿ ಟಾಯ್ಲೆಟ್ ಸಂಪರ್ಕ ಮಾಡಿದ್ದು, ಮೀಥೇನ್ ಅನಿಲ ಹೋಗಲು ಅವಕಾಶ ಸಿಗದೇ ನೀರು ಹಾಕಿದಾಗ ಸಿಡಿದು ಸ್ಪೋಟ ಆಗಿರಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..