PM Modi: ಸಿಜೆಪಿ ಪ್ರತಿಭಟನೆ ಬಳಿಕ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಧಾನಿ ಮೋದಿ ಫಸ್ಟ್ ರಿಯಾಕ್ಷನ್!

Published : Jul 21, 2026, 12:14 PM IST
Prime minister Modi first reaction to the NEET question paper leak following CJPs protest

ಸಾರಾಂಶ

ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಸೋನಮ್ ವಾಂಗ್ಚುಕ್ ಮತ್ತು ಕಾಕ್ರೋಚ್‌ ಜನತಾ ಪಾರ್ಟಿ ನಡೆಸಿದ ಪ್ರತಿಭಟನೆ ಹಿಂಸಾರೂಪ ಪಡೆದಿದೆ. ಈ ಬಗ್ಗೆ ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಪ್ರತಿಕ್ರಿಯಿಸಿ, ಯುವಕರ ಭವಿಷ್ಯದೊಂದಿಗೆ ಆಟವಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ.

ನೀಟ್‌ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ, ಶಿಕ್ಷಣದಲ್ಲಿ ಸುಧಾರಣೆ ಹಾಗೂ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra pradhan) ಅವರ ರಾಜೀನಾಮೆಗೆ ಆಗ್ರಹಿಸಿ ಸೋನಮ್ ವಾಂಗ್ಚುಕ್ ಹದಿನೆಂಟು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆ ಕೋರ್ಟ್ ಆದೇಶ ಹಿನ್ನೆಲೆ ದೆಹಲಿ ಪೊಲೀಸರು ವಾಂಗ್ಚುಕ್ ಅವರನ್ನ ಆಸ್ಪತ್ರೆಗೆ ದಾಖಲಿಸಿದ ಬಳಿಕ ಕಾಕ್ರೋಚ್‌ ಜನತಾ ಪಾರ್ಟಿ(Cockroach Janata Party- ಸಿಜೆಪಿ) ಪ್ರತಿಭಟನೆ ತೀವ್ರಗೊಳಿಸಿತು. ನಿನ್ನೆ ಸೋಮವಾರ ಕರೆ ನೀಡಿದ್ದ ಸಂಸತ್‌ ಚಲೋಗೆ ಬಳಿಕ ಹಿಂಸಾಚಾರಕ್ಕೆ ತಿರುಗಿತು.

ರಾಷ್ಟ್ರ ರಾಜಧಾನಿ ಇಷ್ಟೆಲ್ಲ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಆಗಲಿ, ಗೃಹ ಸಚಿವ ಅಮಿತ್ ಶಾ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿ ಇದ್ದಿದ್ದು ಸಿಜೆಪಿಗಳಿಗೆ ಆಕ್ರೋಶ, ಇತ್ತ ಮೋದಿ ಬೆಂಬಲಿಗರಿಗೆ ಅಸಹನೀಯವಾಗಿಸತೊಡಗಿಸಿತು. ಇಷ್ಟೆಲ್ಲ ಆದ್ರೂ ಮೋದಿ ಯಾಕೆ ಸೈಲೆಂಟ್ ಇದ್ದಾರೆ? ಮೌನ ಮುರಿದು ಮಾತನಾಡಬೇಕು, ದೇಶದ್ರೋಹಿಗಳ ವಿರುದ್ಧ ಕಠಿಣಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹ ಕೇಳಿ ಬಂದಿತ್ತು. ಇದೀಗ ಸಿಜೆಪಿಯ ಸಂಸತ್ ಮೆರವಣಿಗೆಯ ನಂತರ ಇದೀಗ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಮೊದಲ ಬಾರಿಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: Jantar Mantar: ಪ್ರಧಾನ್‌ರಿಂದ ಪ್ರಧಾನಿವರೆಗೆ ಹಬ್ಬಿತು ಹೋರಾಟ ದೆಹಲಿಯಲ್ಲಿ ಜಿರಳೆ ಕ್ರಾಂತಿ!

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಧಾನಿ ಮೋದಿ ಫಸ್ಟ್‌ ರಿಯಾಕ್ಷನ್

ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ಅವರು ಯುವಕರ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಲು ಬಿಡುವುದಿಲ್ಲ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಹೇಳಿದರು.

ಪ್ರಶ್ನೆಪತ್ರಿಕೆ ಸೋರಿಕೆ ರಾಜಕೀಯ ವಿಷಯವಲ್ಲ

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ರಾಜಕೀಯ ವಿಷಯವಲ್ಲ. ಅವರ ಭವಿಷ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು, ಮರು ಪರೀಕ್ಷೆ ನಡೆಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯ ಬಗ್ಗೆ ಸರ್ಕಾರ ತಕ್ಷಣ ಕ್ರಮ ಕೈಗೊಂಡಿದೆ, ವಿದ್ಯಾರ್ಥಿಗಳ ಆತಂಕಕ್ಕೆ ಸರ್ಕಾರ ಸೂಕ್ಷ್ಮವಾಗಿ ಸ್ಪಂದಿಸಿದೆ. ಇದು ಕೇವಲ ಕೇಂದ್ರ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಲ್ಲ, ಈ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾಗಬೇಕು. ಮುಂದೆ ಈ ರೀತಿ ಮರುಕಳಿಸಿದಂತೆ ನಾವು ಸೂಕ್ತ ವ್ಯವಸ್ಥೆ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದರು.

ಸಿಜೆಪಿಯ ಸಂಸತ್ ಮೆರವಣಿಗೆ ಬಗ್ಗೆ ಮೋದಿ ಹೇಳಿದ್ದೇನು?

ಕಾಕ್ರೋಚ್ ಜನತಾ ಪಕ್ಷ ಸಂಸತ್ ಚಲೋ ಮೆರವಣಿಗೆ ವೇಳೆ ಹಿಂಸಾಚಾರ ನಡೆಸಲಾಗಿದೆ. ಹೀಗಾಗಿ ದೆಹಲಿ ಪೊಲೀಸರು ಮತ್ತು ಆರ್‌ಎಎಫ್ ಲಾಠಿ ಚಾರ್ಜ್ ನಡೆಸಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಪ್ರತಿಭಟನಕಾರರು ಸಂಸತ್ತಿನ ಬಳಿ ಬಂದಾಗ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ ಉದ್ರಿಕ್ತ ಗುಂಪನ್ನ ಚದುರಿಸಲಾಯಿತು. ಶಾಂತಿಯುತ ಪ್ರತಿಭಟನೆಗೆ ನಾವು ಅವಕಾಶ ಕೊಟ್ಟಿದ್ದೇವೆ. ದೇಶದ ಸಾರ್ವಜನಿಕ ಸ್ವತ್ತು ಹಾಳುಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇವೆ ಎಂದರು.

ಜೆ ಪಿ ನಡ್ಡಾಗೆ ಸಲ್ಲಿಸಿದ ಸಿಜೆಪಿ ಬೇಡಿಕೆಗಳೇನು?

ಕಾಕ್ರೋಚ್ ಜನತಾ ಪಕ್ಷದ ಪರವಾಗಿ ಸಿಜೆಪಿಯ ಸೌರವ್ ದಾಸ್ ಮತ್ತು ಎನ್‌ಸಿಪಿಯ ಅಶುತೋಷ್ ಆರೋಗ್ಯ ಸಚಿವ ಜೆಪಿ ನಡ್ಡಾ ಅವರನ್ನು ಭೇಟಿಯಾದರು. ಇಬ್ಬರ ನಡುವೆ ಎರಡು ಸುತ್ತಿನ ಮಾತುಕತೆ ನಡೆದಿತ್ತು, ಆದರೆ ಸರ್ಕಾರ ಪ್ರತಿಭಟನಾಕಾರರ ಯಾವುದೇ ಬೇಡಿಕೆಗಳ ಬಗ್ಗೆ ಯಾವುದೇ ಭರವಸೆ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಸಿಜೆಪಿ ಪ್ರತಿಭಟನೆ ಬೆನ್ನಲ್ಲೇ ಪಂಜಾಬ್ ರೈತ ಸಂಘಟನೆಗಳು ದೆಹಲಿಗೆ ನುಗ್ಗಲು ಯತ್ನ; ಶುಂಭು ಗಡಿ ಬಂದ್, ಹೈಅಲರ್ಟ್

ಮಾತುಕತೆ ವೇಳೆ ಜೆಪಿ ನಡ್ಡಾ ಅವರು 'ತಮ್ಮ ಬೇಡಿಕೆಗಳೇನು?' ಎಂದು ಕೇಳಿದರು. ಆಗ ಪ್ರತಿನಿಧಿಗಳು ತಮ್ಮ ಬೇಡಿಕೆಗಳನ್ನು ಪಟ್ಟಿ ನೀಡಿದರು. ಆಗ ಜೆಪಿ ನಡ್ಡಾ ಅವರು 'ಸರ್ಕಾರವು ತಮ್ಮ ಬೇಡಿಕೆಗಳನ್ನು ಪರಿಗಣಿಸಬೇಕೆಂದು ಬಯಸಿದರೆ ಲಿಖಿತ ಜ್ಞಾಪಕ ಪತ್ರವನ್ನು ಸಲ್ಲಿಸಬೇಕೆಂದು ನಡ್ಡಾ ತಿಳಿಸಿದರು. ಇದಾದ ಬಳಿಕ ಸಿಜೆಪಿ ಪ್ರತಿನಿಧಿಗಳು ಸಂಜೆ 4 ಗಂಟೆ ಸುಮಾರಿಗೆ ಕೇಂದ್ರ ಸಚಿವರಿಗೆ ತಮ್ಮ ಬೇಡಿಕೆಗಳ ಲಿಖಿತ ಜ್ಞಾಪಕ ಪತ್ರವನ್ನು ಸಲ್ಲಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Delhi Protest: ಸುಮ್ಮನೆ ಹೊರಟಿದ್ದೆ, ಬೈದು ಫೋನ್ ಒಡೆದ್ರು! ಜಂತರ್ ಮಂತರ್‌ನಲ್ಲಿ ಕಣ್ಣೀರಿಟ್ಟ ಯುವಕನ ಕರುಣಾಜನಕ ಕಥೆ!
ಹನಿಮೂನ್​ ಹಂತಕಿ ಸೋನಂ ರಘುವಂಶಿಗೆ ಎರಡು ಆಯ್ಕೆ ಕೊಟ್ಟ ಸುಪ್ರೀಂ ಕೋರ್ಟ್​: ಏನದು? ಮುಂದೇನು