ಮೆಟ್ರೋ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

Published : Apr 08, 2022, 06:37 PM IST
ಮೆಟ್ರೋ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ

ಸಾರಾಂಶ

ದೆಹಲಿಯ ಆನಂದ್ ವಿಹಾರ್‌ ಮೆಟ್ರೋ ನಿಲ್ದಾಣದಲ್ಲಿ ಘಟನೆ ಮಗುವಿಗೆ ಜನ್ಮ ನೀಡಿದ 22 ವರ್ಷದ ಮಹಿಳೆ ಮೆಟ್ರೋಗಾಗಿ ಕಾಯುತ್ತಿದ್ದಾಗ ಹೆರಿಗೆ ನೋವು

ನವದೆಹಲಿ(ಏ.8): ದೆಹಲಿಯ ಆನಂದ್ ವಿಹಾರ್‌ ಮೆಟ್ರೋ ನಿಲ್ದಾಣದಲ್ಲಿ ಗರ್ಭಿಣಿಯೊಬ್ಬರು (Pregnant) ಮಗುವಿಗೆ ಜನ್ಮ ನೀಡಿದ್ದಾರೆ. ಕೂಡಲೇ ಮಹಿಳಾ ಸಿಐಎಸ್‌ಎಫ್ ಸಿಬ್ಬಂದಿ ಮತ್ತು ಇತರ ಮಹಿಳಾ ಪ್ರಯಾಣಿಕರು ಆಕೆಯ ನೆರವಿಗೆ ಧಾವಿಸಿ ಬಂದು ಮಾನವೀಯತೆ ಮೆರೆದರು. 22 ವರ್ಷದ ಮಹಿಳೆಯೊಬ್ಬರು ಗುರುವಾರ ಆನಂದ್ ವಿಹಾರ್ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್ 3ರಲ್ಲಿ ಮೆಟ್ರೋಗಾಗಿ ಕಾಯುತ್ತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡಿದೆ. ನಂತರ ಶಿಫ್ಟ್ ಇನ್‌ಚಾರ್ಜ್‌ನ ನಿರ್ದೇಶನದ ಮೇರೆಗೆ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಅನಾಮಿಕಾ ಕುಮಾರಿ ತಕ್ಷಣ ಸ್ಥಳಕ್ಕೆ ತಲುಪಿದರು. ಇತರ ಮಹಿಳಾ ಪ್ರಯಾಣಿಕರ ಸಹಾಯದಿಂದ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಪ್ಲಾಟ್‌ಫಾರ್ಮ್‌ನಲ್ಲಿಯೇ ಮಗುವನ್ನು ಹೆರಿಗೆ ಮಾಡಿಸಿದರು.

ಸಿಐಎಸ್‌ಎಫ್‌ ಈ ವಿಚಾರವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದೆ. CISF ಸಿಬ್ಬಂದಿಯ ತ್ವರಿತ ಪ್ರತಿಕ್ರಿಯೆ ಮತ್ತು ಅಗತ್ಯ ನೆರವು ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ತುರ್ತು ಹೆರಿಗೆಗೆ ಒಳಗಾಗಲು ಸಹಾಯ ಮಾಡಿದೆ @ ಆನಂದ್ ವಿಹಾರ್ ISBT, ಮೆಟ್ರೋ ನಿಲ್ದಾಣ. ನವಜಾತ ಶಿಶುವಿನ ಜೊತೆಗೆ ತಾಯಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ
ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

 

ಮಧ್ಯಾಹ್ನ 3.25 ರ ಸುಮಾರಿಗೆ, ಆನಂದ್ ವಿಹಾರ್ ಮೆಟ್ರೋ ನಿಲ್ದಾಣದ (Anand Vihar Metro Station) ಪ್ಲಾಟ್‌ಫಾರ್ಮ್ ಸಂಖ್ಯೆ 3 ರಲ್ಲಿ ಮೆಟ್ರೋಗಾಗಿ ಕಾಯುತ್ತಿರುವಾಗ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಅಲ್ಲಿ ನಿಯೋಜನೆಗೊಂಡಿದ್ದ ಸಿಐಎಸ್‌ಎಫ್ ಸಿಬ್ಬಂದಿ ಆ ಪಾಳಿಯ ಉಸ್ತುವಾರಿಗೆ ವಿಷಯ ತಿಳಿಸಿದ್ದಾರೆ. ಮಹಿಳೆಗೆ ಮಗುವನ್ನು ಹೆರಿಗೆ ಮಾಡಲು ಸಹಾಯ ಮಾಡಲು ಸಿಐಎಸ್‌ಎಫ್ ಪಡೆಯ ಮಹಿಳಾ ಪೇದೆ ಅನಾಮಿಕಾ ಕುಮಾರಿ (Anamika Kumari) ಅವರನ್ನು ತಕ್ಷಣ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಿನ್ನೆಸ್‌ ಪುಟ ಸೇರಿದ ದೆಹಲಿ ಮೆಟ್ರೋ ಉದ್ಯೋಗಿ

ಸ್ವಲ್ಪ ಸಮಯದ ನಂತರ, ತಾಯಿ ಮತ್ತು ಅವಳ ನವಜಾತ ಶಿಶುವನ್ನು ಆಂಬ್ಯುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಮಹಿಳೆ ಮತ್ತು ಆಕೆಯ ಪತಿ ಸಿಐಎಸ್‌ಎಫ್ ಸಿಬ್ಬಂದಿಗೆ ಅವರ ತ್ವರಿತ ಪ್ರತಿಕ್ರಿಯೆ ಮತ್ತು ನಿರ್ಣಾಯಕ ಸಮಯದಲ್ಲಿ ಅಗತ್ಯ ಸಹಾಯಕ್ಕಾಗಿ ಧನ್ಯವಾದ ಅರ್ಪಿಸಿದರು ಎಂದು ಹೇಳಿಕೆ ತಿಳಿಸಿದೆ. ಗಮನಾರ್ಹವಾಗಿ, ಸಿಐಎಸ್ಎಫ್ ಅನ್ನು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ದೆಹಲಿ (New Delhi) ಮೆಟ್ರೋ ಜಾಲದಾದ್ಯಂತ ಭಯೋತ್ಪಾದನಾ ನಿಗ್ರಹ ರಕ್ಷಣೆ ಒದಗಿಸಲು ನಿಯೋಜಿಸಲಾಗಿದೆ. ದೇಶಾದ್ಯಂತ ಇರುವ ವಿಮಾನ ನಿಲ್ದಾಣಗಳು ಮತ್ತು ರೈಲು ನಿಲ್ದಾಣಗಳ ಭದ್ರತೆಯನ್ನು ಸಿಐಎಸ್‌ಎಫ್‌ಗೆ ವಹಿಸಲಾಗಿದೆ.

ಮೆಟ್ರೋ ನಿಲ್ದಾಣದಿಂದ ಜಿಗಿದು ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ 

ಕೆಲ ದಿನಗಳ ಹಿಂದೆ ದೆಹಲಿಯ ಶಹದಾರಾ ಮೆಟ್ರೋ ನಿಲ್ದಾಣದಲ್ಲಿ ತನ್ನ ಫೋನ್‌ ನೋಡುತ್ತಾ ಪ್ಲಾಟ್‌ಫಾರ್ಮ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಮುಗ್ಗರಿಸಿ ಹಳಿಗಳ ಮೇಲೆ ಬಿದ್ದಿದ್ದಾನೆ. ಹಳಿ ಮೇಲೆ ಬಿದ್ದ ವ್ಯಕ್ತಿ ಎದ್ದೇಳಲು ಪ್ರಯತ್ನಿಸುತ್ತಿರುವಾಗ ಕೆಲವು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‌ಎಫ್) ಸಿಬ್ಬಂದಿ ಆತನ ಸಹಾಯಕ್ಕೆ ಓಡುತ್ತಿರುವುದನ್ನು ಕಾಣಬಹುದು. ಸಿಬ್ಬಂದಿ ಕೂಡಲೇ ವ್ಯಕ್ತಿಯತ್ತ ಧಾವಿಸಿ ಮೆಟ್ರೋ ರೈಲು ಬರುವ ಮುನ್ನವೇ ವ್ಯಕ್ತಿಯನ್ನು ಹಳಿಯಿಂದ ಎತ್ತಿ ಪ್ಲಾಟ್‌ಫಾರ್ಮ್‌ ಮೇಲೆ ಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!