ಆಟೋ ಮೇಲೆ ಪುಟ್ಟ ಗಾರ್ಡನ್: ಫೋಟೋ ವೈರಲ್‌

Published : Apr 08, 2022, 06:10 PM IST
ಆಟೋ ಮೇಲೆ ಪುಟ್ಟ ಗಾರ್ಡನ್: ಫೋಟೋ ವೈರಲ್‌

ಸಾರಾಂಶ

ಆಟೋ ಚಾಲಕನ ಪರಿಸರ ಪ್ರೇಮ ಆಟೋ ಟಾಪ್‌ ಮೇಲೆ ಗಾರ್ಡನ್‌ ನಿರ್ಮಿಸಿದ ಚಾಲಕ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್  

ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಿ ಕೊಡುವುದು ನಮ್ಮೆಲ್ಲರ ಕರ್ತವ್ಯ. ಈ ದಿಸೆಯಲ್ಲಿ ಹೆಜ್ಜೆ ಇಟ್ಟಿರುವ ಆಟೋ ಚಾಲಕರೊಬ್ಬರು ತಮ್ಮ ಆಟೋವನ್ನೇ ಪರಿಸರ ಸ್ನೇಹಿ ಗಾರ್ಡನ್‌ ರೀತಿ ರೂಪಿಸಿದ್ದು, ಇವರ ಆಟೋ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಆಟೋ ಚಾಲಕ ತನ್ನ ರಿಕ್ಷಾದಲ್ಲಿ ಬಿಸಿಲಿನ ಧಗೆಯಿಂದ ತಪ್ಪಿಸಿಕೊಳ್ಳಲು ಮಿನಿ ಗಾರ್ಡನ್ ಮಾಡಿದ್ದಾರೆ. ಇಂಟರ್ನೆಟ್ ಈ ಕಲ್ಪನೆಯನ್ನು ಇಷ್ಟಪಟ್ಟಿದೆ. 

ಇಂಟರ್‌ನೆಟ್‌ ವಿವಿಧ ವಿಭಿನ್ನ ಪ್ರತಿಭೆಗಳನ್ನು ನಮಗೆ ಆಗಾಗ ತೋರಿಸುತ್ತಲೇ ಇದೆ. ನಮ್ಮ ಸುತ್ತಮುತ್ತಲಿನ ಜನರ ಜೀವನಶೈಲಿ, ಪರಿಸರ ಪ್ರೇಮ, ಮನೋರಂಜನೆ ಬದುಕಿನ ಪಾಠ ಎಲ್ಲವನ್ನು ಇಂಟರ್‌ನೆಟ್‌ ನಮಗೆ ಕಲಿಸುತ್ತಿದೆ. ಹಾಗೆಯೇ ಇಲ್ಲೊಂದು ಫೋಟೋದಲ್ಲಿ ಆಟೋ ಚಾಲಕರೊಬ್ಬರ ಪರಿಸರ ಪ್ರೇಮವನ್ನು ಜಗತ್ತಿಗೆ ತಿಳಿಸಿದ್ದು, ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಎರಿಕ್ ಸೋಲ್ಹೈಮ್ ಎಂಬವರು ಪೋಸ್ಟ್ ಮಾಡಿದ ಈ ಫೋಟೋದಲ್ಲಿ ಒಂದು ಸಾಮಾನ್ಯ ಆಟೋವನ್ನು ಸಂಪೂರ್ಣ  ಹುಲ್ಲು ಮತ್ತು ಸಸ್ಯಗಳ ಪದರದಿಂದ ಆವೃತವಾಗಿರುವಂತೆ ಮಾಡಲಾಗಿದೆ. ತಮ್ಮ ಬದುಕನ್ನು ಹೇಗೆ ಆಸಕ್ತಿದಾಯಕ ಆಗಿಸಬಹುದು ಎಂಬುದಕ್ಕೆ ಈ ಆಟೋ ಚಾಲಕ ಉದಾಹರಣೆಯಾಗಿದ್ದಾರೆ.

ಪರಿಸರ ಸ್ನೇಹಿ ಪ್ಯಾಕೇಜಿಂಗ್ ಗೆ ಬಾಳೆ ಎಲೆ ಬಳಕೆ ಶ್ಲಾಘಿಸಿದ ಹರ್ಷ ಗೋಯೆಂಕಾ!

ಈ ಫೋಟೋದಲ್ಲಿ ಆಟೋ ಚಾಲಕ ತನ್ನ ರಿಕ್ಷಾದಲ್ಲಿ ಕುಳಿತಿರುವುದನ್ನು ತೋರಿಸುತ್ತಿದೆ. ಆದರೆ ಈ ವಾಹನವು ನೀವು ಪ್ರತಿದಿನ ನೋಡುವ ರಿಕ್ಷಾಗಳಂತಲ್ಲ. ಇದನ್ನು ಹುಲ್ಲಿನ ಸೊಂಪಾದ ಪದರದಿಂದ ಮುಚ್ಚಲ್ಪಟ್ಟಿದೆ. ಅಲ್ಲದೆ, ರಿಕ್ಷಾದಲ್ಲಿ ಸಣ್ಣ ಸಣ್ಣ ಹಲವಾರು ಸಣ್ಣ ಪ್ಲಾಸ್ಟಿಕ್‌ ಕುಂಡಗಳಲ್ಲಿ ಸಸ್ಯಗಳನ್ನು ಇರಿಸಿರುವುದನ್ನು ಕಾಣಬಹುದು. ಈ ವ್ಯಕ್ತಿ ಬಿಸಿಲಲ್ಲಿಯೂ ತಂಪಾಗಿರಲು ತನ್ನ ರಿಕ್ಷಾದಲ್ಲಿ ಹುಲ್ಲು ಬೆಳೆದಿದ್ದಾನೆ. ನಿಜವಾಗಿಯೂ ಇದು ತಂಪಾಗಿದೆ ಎಂದು ಬರೆದು ಈ ಫೋಟೋವನ್ನು ಪೋಸ್ಟ್‌ ಮಾಡಲಾಗಿದೆ.

ಇವರ ಈ ಫೋಟೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು, ಭಾರತ ಹಲವು ಕಾಣದ ಪ್ರತಿಭೆಗಳನ್ನು ಹೊಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೇರೆ ಆಟೋ ಚಾಲಕರು ಕೂಡ ಇದೇ ರೀತಿಯ ಕ್ರಮವನ್ನು ಕೈಗೊಂಡರೆ ಚೆನ್ನಾಗಿರುವುದು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಮಂಗಳೂರಿನಲ್ಲಿ ಪರಿಸರ ಪ್ರೇಮಿಗಳು ಮರ ಕಡಿಯದಂತೆ ದೈವ ದೇವರ ಮೊರೆ ಹೋಗಿದ್ದರು.

ಪರಿಸರ ಜಾಗೃತಿಗಾಗಿ ಗದಗದ 52ರ ವೃದ್ಧನಿಂದ 300 ಕಿ.ಮೀ ಸೈಕಲ್ ಜಾಥಾ!

ನಗರೀಕರಣ, ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿದುರುಳಿಸುವುದು ಎಲ್ಲೆಡೆ ಸಾಮಾನ್ಯ. ಈ ವೇಳೆ ಅನಗತ್ಯವಾಗಿ ಮರಗಳನ್ನು ಕಡಿಯುವುದೇ ಹೆಚ್ಚು. ನಿರಂತರವಾಗಿ ಮನವಿ ಮಾಡಿದರೂ ಮರ ಹನನ ಅವ್ಯಾಹತವಾಗಿ ನಡೆಯುತ್ತಿರುವುದರಿಂದ ರೋಸಿ ಹೋಗಿರುವ ಮಂಗಳೂರಿನ (Mangaluru) ಪರಿಸರ ಪ್ರೇಮಿಗಳು ಇದೀಗ ಮರ ಕಡಿಯುವವರ ವಿರುದ್ಧ ದೈವ ದೇವರ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಮರಗಳನ್ನು ಉಳಿಸಲು 'ಅಪ್ಪಿಕೋ ಚಳವಳಿ' ಸೇರಿದಂತೆ ಅನೇಕ ಯಶಸ್ವಿ ಚಳುವಳಿಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಇಂತಹ ಚಳವಳಿಗಳಿಗೆ ಈಗಿನ ಕಾಲಘಟ್ಟದಲ್ಲಿ ಆಡಳಿತ ಯಂತ್ರ ಮಹತ್ವ ನೀಡುವುದು ಕಡಿಮೆಯಾಗಿರುವುದರಿಂದ ಅನಿವಾರ್ಯವಾಗಿ ಈ ಪರಿಸರ ಪ್ರೇಮಿಗಳು ಮರ ಕಟುಕರ ವಿರುದ್ಧ ದೇವರಿಗೇ (God)ಅಹವಾಲು ಸಲ್ಲಿಸಲು ಮುಂದಾಗಿರುವುದು ವಿನೂತನ ರೀತಿಯ ಪ್ರತಿಭಟನೆ.


ಪ್ರಸ್ತುತ ಮಂಗಳೂರು ಸ್ಮಾರ್ಟ್ ಸಿಟಿ ಕಾಮಗಾರಿಗಳಿಗಾಗಿ ಅವ್ಯಾಹತವಾಗಿ ಮರಗಳನ್ನು(Tree) ಕಡಿಯಲಾಗುತ್ತಿದೆ. ರಸ್ತೆಗಳ ಅಗಲೀಕರಣ ನೆಪದಲ್ಲಿ ನೂರಾರು ವರ್ಷಗಳಿಂದ ಬಾಳಿ ಬದುಕಿ ನೆರಳು, ಹೂಹಣ್ಣು ನೀಡಿ ಸಲಹಿದ ಮರಗಳನ್ನು ರಾತ್ರಿ ಹಗಲಾಗುವುದರೊಳಗೆ ಕಡಿದುರುಳಿಸಲಾಗುತ್ತಿದೆ. ಈ ಮರಗಳನ್ನು ಉಳಿಸಲು ಮಂಗಳೂರಿನಲ್ಲಿ 'ಟ್ರೀ ಕಮಿಟಿ' ಎಂಬ ಶಶಿಧರ ಶೆಟ್ಟಿ (Shashidara Shetty) ಮುಂದಾಳತ್ವದ ಪರಿಸರ ಪ್ರೇಮಿಗಳ ತಂಡವೂ ರಚನೆಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ
ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ