ಬಿಹಾರ ಚುನಾವಣೆಗೆ ಮೊದಲು ಕುಡುಕರಿಗೆ ಪ್ರಶಾಂತ್ ಕಿಶೋರ್ ಕಿಕ್: ಅಧಿಕಾರಕ್ಕೆ ಬಂದ 1 ಗಂಟೆಯಲ್ಲಿ ಮದ್ಯ ನಿಷೇಧ ವಾಪಸ್

By Anusha Kb  |  First Published Sep 15, 2024, 11:55 AM IST

ಬಿಹಾರದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕೂ ಮೊದಲು ಹೊಸ ಪಕ್ಷವೊಂದರ ಘೋಷಣೆ  ಮಾಡಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ಈಗ ಹೊಸದೊಂದು ಘೋಷಣೆ ಮಾಡುವ ಮೂಲಕ ಮದ್ಯ ನಿಷೇಧವಾಗಿರುವ ಬಿಹಾರ ರಾಜ್ಯದ ಕುಡುಕರಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.


ಪಾಟ್ನಾ: ಬಿಹಾರದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕೂ ಮೊದಲು ಹೊಸ ಪಕ್ಷವೊಂದರ ಘೋಷಣೆ  ಮಾಡಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ಈಗ ಹೊಸದೊಂದು ಘೋಷಣೆ ಮಾಡುವ ಮೂಲಕ ಮದ್ಯ ನಿಷೇಧವಾಗಿರುವ ಬಿಹಾರ ರಾಜ್ಯದ ಕುಡುಕರಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ತಾವು ಸ್ಥಾಪಿಸಿರುವ ಜನ್ ಸೂರಜ್ ಸರ್ಕಾರ ಅಧಿಕಾರಕ್ಕೆ ಬಂದರೆ, ಅಧಿಕಾರಕ್ಕೆ ಬಂದ ಒಂದು ಗಂಟೆಯೊಳಗೆ ರಾಜ್ಯದಲ್ಲಿ ಮದ್ಯದ ಮೇಲಿನ ನಿಷೇಧವನ್ನು ಹಿಂತೆಗೆಯುವುದಾಗಿ ಹೇಳಿದ್ದಾರೆ. ಪ್ರಶಾಂತ್ ಕಿಶೋರ್‌ ಅವರ ಈ ಘೋಷಣೆ ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮ್ಯಾಜಿಕ್ ಮಾಡಬಹುದಾ ಎಂಬುದನ್ನು ನೋಡುವುದಕ್ಕೆ ಒಂದು ವರ್ಷವಂತೂ ಕಾಯಲೇಬೇಕು.

ಸುದ್ದಿಸಂಸ್ಥೆ ಎಎನ್‌ಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ಬಿಹಾರದ ಕುಡುಕರಿಗೆ ಕಿಕ್ ಏರಿಸುವ ಸುದ್ದಿ ನೀಡಿದ್ದಾರೆ. ಆದರೆ ಪ್ರಶಾಂತ್ ಕಿಶೋರ್ ಅವರ ಈ ಮಾತಿಗೆ ಬಿಹಾರದ ಮಹಿಳೆಯರು ಹೇಗೆ ಪ್ರತಿಕ್ರಿಯಿಸುತ್ತಾರೋ ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬಹುದು. ಆಕ್ಟೋಬರ್ 2ರಂದು ತಮ್ಮ ಜನ ಸೂರಜ್ ಪಕ್ಷದ  ಸಂಸ್ಥಾಪನ ದಿನವಾಗಿದ್ದು, ಅದಕ್ಕಾಗಿ ವಿಶೇಷ ಸಿದ್ಧತೆಯನ್ನು ನಡೆಸಿಲ್ಲ, ಕಳೆದ ಎರಡು ವರ್ಷಗಳಿಂದಲೂ ನಾವು ಸಿದ್ಧತೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. 

Latest Videos

undefined

ಇದನ್ನು ಓದಿ: ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ರಾಜಕೀಯ ಪಕ್ಷ ಘೋಷಣೆ ಮಾಡಿದ ಪ್ರಶಾಂತ್‌ ಕಿಶೋರ್‌!

ಇದೇ ವೇಳೆ ಪ್ರಶಾಂತ್ ಕಿಶೋರ್ ಅವರ ಬಳಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಯಾತ್ರೆಯ ಬಗ್ಗೆ ಅಭಿಪ್ರಾಯ ಕೇಳಿದಾಗ, ನಾನು ಅವರಿಗೆ ಶುಭಹಾರೈಸುತ್ತೇನೆ. ಕನಿಷ್ಠ ಅವರಾದರೂ ಮನೆಯಿಂದ ಹೊರಗೆ ಬಂದು ಸಾರ್ವಜನಿಕರೊಂದಿಗೆ ಬೆರೆಯುತ್ತಿದ್ದಾರೆ ಎಂದರು.  ಬಿಹಾರ ಸಿಎಂ ಹಾಗೂ ತೇಜಸ್ವಿ ಯಾದವ್ ಮಧ್ಯೆ ನಡೆಯುತ್ತಿರುವ ಪ್ರಸ್ತುತ ಆರೋಪ ಪ್ರತ್ಯಾರೋಪದ ಬಗ್ಗೆ ಪ್ರತಿಕ್ರಿಯಿಸಿದ ಪ್ರಶಾಂತ್ ಕಿಶೋರ್, ಈ ಇಬ್ಬರು ನಾಯಕರು ಕೂಡ ಬಿಹಾರಕ್ಕೆ ಹಾನಿ ಮಾಡಿದ್ದಾರೆ ಎಂದರು. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಸೇರಿದ್ದಕ್ಕಾಗಿ ನಿತೀಶ್ ಕುಮಾರ್ ಕೈಮುಗಿದು ಕ್ಷಮೆಯಾಚಿಸಿದ್ದಾರೆ ಎಂಬ ತೇಜಸ್ವಿ ಯಾದವ್ ಆರೋಪಿಸಿದ್ದರು. 

ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಮಧ್ಯೆ ಈ ಸಮಸ್ಯೆ ಇದೆ. ಮತ್ತು ಯಾರು ಯಾರಿಗೆ ಕೈ ಜೋಡಿಸಿ ಕ್ಷಮೆಯಾಚಿಸಿದರು ಎಂಬುದು ಇಲ್ಲಿ ಮುಖ್ಯವಲ್ಲ ಇಬ್ಬರೂ ಬಿಹಾರಕ್ಕೆ ಹಾನಿ ಮಾಡಿದ್ದಾರೆ. ಬಿಹಾರದ ಜನರು 30 ವರ್ಷಗಳಿಂದ ಅವರಿಬ್ಬರನ್ನೂ ನೋಡಿದ್ದಾರೆ. ನಾವೀಗ ಅವರಿಬ್ಬರನ್ನು ಬಿಹಾರ ತೊರೆಯುವಂತೆ ಒತ್ತಾಯಿಸುತ್ತಿದ್ದೇವೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ. 

ಇದನ್ನು ಓದಿ: ದೋಹಾಗೆ ಹೊರಟಿದ್ದ ವಿಮಾನ ವಿಳಂಬ : 5 ಗಂಟೆ ಪ್ರಯಾಣಿಕರ ವಿಮಾನದೊಳಗೆ ಕಾಯಿಸಿದ ಇಂಡಿಗೋ ಏರ್‌ಲೈನ್ಸ್

ಇದಕ್ಕೂ ಮೊದಲು, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ವಿರುದ್ಧ ಪ್ರಶಾಂತ್‌ ಕಿಶೋರ್ ತೀವ್ರ ವಾಗ್ದಾಳಿ ನಡೆಸಿದರು, ರಾಜ್ಯದ ಅಭಿವೃದ್ಧಿಯನ್ನು ಮುನ್ನಡೆಸುವ ಅವರ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಿದ್ದರು. ಬಿಹಾರದ ಭೋಜ್‌ಪುರದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಶಾಂತ್ ಕಿಶೋರ್, ಸಂಪನ್ಮೂಲದ ಕೊರತೆಯಿಂದ ಯಾರಾದರೂ ಶಿಕ್ಷಣ ಪಡೆಯಲು ಸಾಧ್ಯವಾಗದೇ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರೆ ಅದನ್ನು ಅರ್ಥ ಮಾಡಿಕೊಳ್ಳಬಹುದು ಆದರೆ ಮುಖ್ಯಮಂತ್ರಿಗಳ ಪುತ್ರನಾಗಿದ್ದು, ಕನಿಷ್ಠ 10ನೇ ತರಗತಿ ಪಾಸ್ ಮಾಡಲು ಸಾಧ್ಯವಾಗದಿದ್ದರೆ ಅದು ಶಿಕ್ಷಣದ ಬಗೆಗಿನ ಅವರ ನಿರಾಸಕ್ತಿಯನ್ನು ಸೂಚಿಸುತ್ತದೆ ಎಂದು ತೇಜಸ್ವಿ ಯಾದವ್ ಅವರ ಶೈಕ್ಷಣಿಕ ಹಿನ್ನೆಲೆಯ ಬಗ್ಗೆ ಟೀಕೆ ಮಾಡಿದ್ದರು. 

9ನೇ ಕ್ಲಾಸ್‌ನಲ್ಲಿ ಶಾಲೆ ಬಿಟ್ಟ ತೇಜಸ್ವಿಗೆ ಜಿಡಿಪಿ ಹಾಗೂ ಜಿಡಿಪಿ ಅಭಿವೃದ್ಧಿ ನಡುವಣ ವ್ಯತ್ಯಾಸ ಗೊತ್ತಿಲ್ಲ. ಆದರೂ ಅವರು ಬಿಹಾರದ ಅಭಿವೃದ್ಧಿ ಹೇಗೆ ಮಾಡಬೇಕು ತಿಳಿದಿದೆ ಎನ್ನುತ್ತಾರೆ. ಮುಖ್ಯಮಂತ್ರಿಯ ಪುತ್ರ ಎಂಬುದು ಮಾತ್ರವೇ ಅವರಿಗೆ ಇರುವ ಅರ್ಹತೆಯಾಗಿದೆ. ತೇಜಸ್ವಿ ಅವರು ತಮ್ಮ ತಂದೆಯ ಹೆಸರಲ್ಲಿ ಗುರುತಿಸಿಕೊಳ್ಳದೇ ತಮ್ಮದೇ ಅಹರ್ತೆಯನ್ನು ಗಳಿಸಬೇಕಾದರೆ ಕಠಿಣ ಪರಿಶ್ರಮದ ಜೊತೆ ಕೆಲಸ ಮಾಡಬೇಕು ಎಂದು ಕಿಶೋರ್ ಹೇಳಿದ್ದರು.

ಇದನ್ನು ಓದಿ: ಪಿಎಂ ಹುದ್ದೆಗೆ ಸ್ಪರ್ಧಿಸಿದರೆ ಬೆಂಬಲಿಸುವುದಾಗಿ ಹೇಳಿದ್ರು, ಆದರೆ ... :ನಿತಿನ್ ಗಡ್ಕರಿ ಹೇಳಿದ್ದೇನು?

click me!