ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಗ್ರೇಟರ್ ನೋಯ್ಡಾ ಜಿಲ್ಲಾಧಿಕಾರಿ ಮಹೇಶ್ ವರ್ಮಾ ಅವರ ಅಧಿಕೃತ ಟ್ವೀಟರ್ ಖಾತೆಯಲ್ಲಿ ‘ಪಪ್ಪು’ ಎಂದು ಟೀಕಿಸಿ ಕಮೆಂಟ್ ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ.
ಗ್ರೇಟರ್ ನೋಯ್ಡಾ (ಸೆ.15): ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಗ್ರೇಟರ್ ನೋಯ್ಡಾ ಜಿಲ್ಲಾಧಿಕಾರಿ ಮಹೇಶ್ ವರ್ಮಾ ಅವರ ಅಧಿಕೃತ ಟ್ವೀಟರ್ ಖಾತೆಯಲ್ಲಿ ‘ಪಪ್ಪು’ ಎಂದು ಟೀಕಿಸಿ ಕಮೆಂಟ್ ಹಾಕಿದ್ದು ವಿವಾದಕ್ಕೆ ಕಾರಣವಾಗಿದೆ.
ಡೀಸಿ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ. ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿ ಶುಕ್ರವಾರ ಟ್ವೀಟ್ ಮಾಡಿದ್ದರು. ಇದಕ್ಕೆ ನೋಯ್ಡಾ ಡೀಸಿ ಖಾತೆಯಿಂದ ‘ಮೊದಲು ನಿಮ್ಮ ಬಗ್ಗೆ ಮತ್ತು ಪಪ್ಪು ಬಗ್ಗೆ ಯೋಚಿಸಿ’ ಎಂದು ಕಮೆಂಟ್ ಹಾಕಲಾಗಿದೆ. ಇದಕ್ಕೆ ಹಿರಿಯ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರಿ ಅಧಿಕಾರಿಗಳು ಬಿಜೆಪಿಗಳ ಚಮಚಾ ಆಗಿಬಿಟ್ಟಿದ್ದಾರೆ ಎಂದು ಖಂಡಿಸಿದ್ದಾರೆ.
ಜ್ಞಾನವಾಪಿಯನ್ನು ‘ಮಸೀದಿ’ ಎನ್ನುವುದು ‘ದುರದೃಷ್ಟಕರ’: ಯೋಗಿ ಆದಿತ್ಯನಾಥ್
ಆದರೆ ಇದಕ್ಕೆ ಡೀಸಿ ಸ್ಪಷ್ಟನೆ ನಿಡಿದ್ದು, ‘ನನ್ನ ಖಾತೆಯನ್ನು ಯಾರೋ ದುರ್ಬಳಕೆ ಮಾಡಿಕೊಂಡು ಕಮೆಂಟ್ ಹಾಕಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೂಈಡಲಾಗುವುದು ಹಾಗೂ ಕಮೆಂಟ್ ಅಳಿಸಿ ಹಾಕಲಾಗಿದೆ’ ಎಂದಿದ್ದಾರೆ.