ಚುನಾವಣಾ ತಂತ್ರಗಾರಿಕೆಗೆ ಗುಡ್ ಬೈ ಎಂದ ಪ್ರಶಾಂತ್ ಕಿಶೋರ್| ಸ್ಥಾನ ಖಾಲಿ ಮಾಡುವುದಾಗಿ ಹೇಳಿ ನಿವೃತ್ತಿ ಘೋಷಿಸಿದ ಪಿಕೆ| ನಿವೃತ್ತಿ ಘೋಷಣೆ ಜೊತೆ ಬಿಜೆಪಿ ಸೋಲಿನ ರಹಸ್ಯ ಬಿಚ್ಚಿಟ್ಟ ಚುನಾವಣಾ ತಂತ್ರಗಾರ
ಕೋಲ್ಕತ್ತಾ(ಮೇ.02): ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಟಿಎಂಸಿ ಅಧಿಕಾರಕ್ಕೇರಲು ಸಿದ್ಧವಾಗಿದೆ, ಮಮತಾ ಬ್ಯಾನರ್ಜಿ ಮೂರನೇ ಬಾರಿ ಸಿಎಂ ಆಗಲು ಸಿದ್ಧರಾಗಿದ್ದಾರೆ. ಟಿಎಂಸಿಯ ಈ ಸಾಧನೆ ಹಿಂದೆ ಚುನಾವಣಾ ತಂತ್ರಗಾರಿಕೆ ಹೆಣೆದ ಪ್ರಶಾಂತ್ ಕಿಶೋರ್ ಪಾತ್ರ ಬಹಳ ಮಹತ್ವದ್ದು.ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಲೈವ್ ಇಂಟರ್ವ್ಯೂ ಮೂಲಕ ಪ್ರಶಾಂತ್ ಕಿಶೋರ್ ತಮ್ಮ ಸ್ಥಾನ ತೊರೆಯುವುದಾಗಿ ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಬಿಜೆಪಿಗೆ ಮುಳುವಾಗಿದ್ದೇನು ಎಂಬುವುದನ್ನೂ ಬಿಚ್ಚಿಟ್ಟಿದ್ದಾರೆ.
undefined
ಜಾಗ ಖಾಲಿ ಮಾಡ್ತೀನಿ, ನಿವೃತ್ತಿ ಘೋಷಿಸಿದ ಚುನಾವಣಾ ತಂತ್ರಗಾರ!
ಈ ಬಗ್ಗೆ ಮಾತನಾಡಿದ ಪ್ರಶಾಂತ್ ಕಿಶೋರ್ 'ಮಮತಾ ಬ್ಯಾನರ್ಜಿ ಲೋಕಸಭಾ ಚುನಾವಣೆ ವೇಳೆ ಮಾಡಿದ್ದ ತಪ್ಪುಗಳನ್ನು ಮತ್ತೆ ಮಾಡಲಿಲ್ಲ. ಆದರೆ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಅನುಸರಿಸಿದ ರಣತಂತ್ರವನ್ನೇ ಮತ್ತೆ ಬಳಸಿತು ಎಂದಿದ್ದಾರೆ. ಇದಕ್ಕೆ ಉದಾಹರಣೆ ನೀಡಿದ ಪ್ರಶಾಂತ್ ಕಿಶೋರ್ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಜೈಶ್ರೀರಾಮ್ ಎಂಬ ಘೋಷಣೆ ಮೊಳಗಿಸಿತತು. ಆದರೆ ಈ ಬಾರಿಯೂ ಅದನ್ನೇ ಮರುಕಳಿಸಿತು. ಆದರೆ ಅತ್ತ ಮಮತಾ ಬ್ಯಾನರ್ಜಿ ಲೋಕಸಭಾ ಚುನಾವಣೆಯಲ್ಲಿ ತಾನು ಮಾಡಿದ ತಪ್ಪನ್ನು ತಿದ್ದಿಕೊಂಡರು ಎಂದಿದ್ದಾರೆ.
ಇನ್ನು ತೃಣಮೂಲ ಕಾಂಗ್ರೆಸ್ ಬಿಟ್ಟು ಯಾವೆಲ್ಲ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡರೋ ಅವರ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಮಾಧ್ಯಮಗಳಲ್ಲಿ ಭಾರೀ ಶ್ಲಾಘಿಸಲಾಯ್ತು. ಅಲ್ಲದೇ ಟಿಎಂಸಿ ಪಕ್ಷ ಅಂತ್ಯಗೊಳ್ಳುತ್ತಿದೆ ಎನ್ನಲಾಯ್ತು. ಆದರೆ ವಾಸ್ತವವಾಗಿ ಟಿಎಂಸಿಯ ಕಸ ಏನಿತ್ತೋ ಅದು ಬಿಜೆಪಿ ತನ್ನ ಬಳಿ ಇರಿಸಿಕೊಂಡಿತು. ಟಿಎಂಸಿ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡ ಬಹುತೇಕ ನಾಯಕರು ಒಂದೋ ಭ್ರಷ್ಟಾಚಾರಿಗಳಾಗಿದ್ದರು ಇಲ್ಲವೇ ಅವರು ತಮ್ಮದೇ ಆದ ವರ್ಚಸ್ಸು ಇಲ್ಲದವರಾಗಿದ್ದರು ಎಂದಿದ್ದಾರೆ.
'ಪ.ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟಿದ್ರೆ ಸ್ಥಾನ ಬಿಡುವೆ'
ಇಷ್ಟೇ ಅಲ್ಲದೇ ತಮ್ಮ ಟಿಎಂಸಿ ಗೆಲುವಿನ ಬಗ್ಗೆಯೂ ಮಾತನಾಡಿದ ಪಿಕೆ 'ನಮ್ಮ ಗೆಲುವಿನಲ್ಲಿ ನಾವು ಬಹಳಷ್ಟು ತಪ್ಪು ಮಾಡಿದ್ದೇವೆ., ಈ ಗೆಲುವು ನಮ್ಮನ್ನು ಇತರರಿಗಿಂತ ಶಕ್ತಿಶಾಲಿಯಾಗಿಸುವುದಿಲ್ಲ. ಆದರೆ ಬಿಜೆಪಿ ಮಾತ್ರ ತಾನು ನಾಲ್ಕೈದು ವರ್ಷದ ಹಿಂದೆ ಆರಂಭಿಸಿದ ಹಾದಿಯಲ್ಲೇ ಇನ್ನೂ ನಿಂತಿದೆ' ಎಂದಿದ್ದಾರೆ.