
ನವದೆಹಲಿ(ಮೇ.02): ಕೊರೋನಾ ವೈರಸ್ ಉಲ್ಬಣದಿಂದ ದೇಶದಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ವಿದೇಶದಿಂದಲೂ ತುರ್ತು ಆಕ್ಸಿಜನ್ ಟ್ಯಾಂಕ್‌ಗಳನ್ನು ತರಿಸಿಕೊಳ್ಳಲಾಗಿದೆ. ಇದರ ನಡುವೆ ದೇಶದಲ್ಲಿ ಆಕ್ಸಿಜನ್ ಉತ್ಪಾದನೆ ವೇಗವನ್ನು ಹೆಚ್ಚಿಸಲಾಗಿದೆ. ಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಆಕ್ಸಿಜನ್ ಮೂಲಗಳು ಹಾಗೂ ಲಭ್ಯತೆ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದಾರೆ.
ಕೊರೋನಾ ಹೋರಾಟ; ಮಾನವ ಸಂಪನ್ಮೂಲ ಸ್ಥಿತಿಗತಿ ಪರಿಶೀಲನೆಗೆ ಪ್ರಧಾನಿ ಮೋದಿ ಸಭೆ!
ದೇಶದಲ್ಲಿರುವ ಹಲವು ನೈಟ್ರೋಜನ್ ಉತ್ಪಾದಕ ಘಟಗಳನ್ನು ಪರಿವರ್ತಿಸಿ ಆಕ್ಸಿಜನ್ ಉತ್ಪಾದನೆ ಮಾಡುವ ಸುಲಭ ವಿಧಾನದ ಕುರಿತು ಕೇಂದ್ರ ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ದೇಶದಲ್ಲಿರುವ ನೈಟ್ರೋಜನ್ ಘಟಕ ಹಾಗೂ ಅದನ್ನು ಪರಿವರ್ತಿಸಿ ಆಕ್ಸಿಜನ್ ಉತ್ಪಾದಕ ಘಟಕ ಕೇಂದ್ರವನ್ನಾಗಿ ಮಾಡುವ ಕುರಿತು ಮೋದಿ ಸಭೆ ನಡೆಸಿದ್ದಾರೆ.
ಸರ್ಕಾರ 14 ಕೈಗಾರಿಗಳಲ್ಲಿನ ನೈಟ್ರೋಜನ್ ಘಟಗಳನ್ನು ಪರಿವರ್ತಿಸಲು ಗುರುತಿಸಿಲಾಗಿದೆ. ಇನ್ನು ಇತರ ಸಂಘಟನೆಗಳಿಂದ 37 ಘಟಕ ಗುರುತಿಸಿ ಪರಿವರ್ತನೆ ಕೆಲಸ ಪ್ರಗತಿಯಲ್ಲಿದೆ. ಶೀಘ್ರದಲ್ಲೇ ಈ ಕೆಲಸಗಳು ಪೂರ್ಣಗೊಳ್ಳಲಿದ್ದು, ಆಮ್ಲಜನಕ ಉತ್ಪಾದನೆ ಆರಂಭಗೊಳ್ಳಲಿದೆ.
ಕ್ಷೇತ್ರದ ಜನರಿಗೆ ನೆರವಾಗಿ, ಸಮಸ್ಯೆ ಬಗೆಹರಿಸಿ; ಮಂತ್ರಿ ಮಂಡಲ ಸದಸ್ಯರಿಗೆ ಮೋದಿ ಸೂಚನೆ!.
ಆಮ್ಲಜನಕದ ಉತ್ಪಾದನೆಗಾಗಿ ಅಸ್ತಿತ್ವದಲ್ಲಿರುವ ಪ್ರೆಶರ್ ಸ್ವಿಂಗ್ ಅಬ್ಸಾರ್ಪ್ಷನ್ (ಪಿಎಸ್ಎ) ನೈಟ್ರೋಜನ ಘಟಕಗಳನ್ನು ಪರಿವರ್ತಿಸುವ ಪ್ರಕ್ರಿಯೆ ಕುರಿತು ಚರ್ಚಿಸಲಾಯಿತು. ನೈಟ್ರೋಜನ್ ಘಟಕಗಳಲ್ಲಿ ಕಾರ್ಬನ್ ಮಾಲಿಕ್ಯುಲರ್ (ಸಿಎಮ್ಎಸ್) ಬಳಸಲಾಗುತ್ತದೆ. ಆಮ್ಲಜನಕವನ್ನು ಉತ್ಪಾದಿಸಲು ಜಿಯೋಲೈಟ್ ಮಾಲಿಕ್ಯುಲರ್ ಅಗತ್ಯವಿದೆ. ಆದ್ದರಿಂದ, CMS ಅನ್ನು ZMS ನೊಂದಿಗೆ ಬದಲಾಯಿಸುವ ಮೂಲಕ ಮತ್ತು ಆಮ್ಲಜನಕ ವಿಶ್ಲೇಷಕ, ನಿಯಂತ್ರಣ ಫಲಕ ವ್ಯವಸ್ಥೆ, ಹರಿವಿನ ಕವಾಟಗಳು ಮುಂತಾದ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಅಸ್ತಿತ್ವದಲ್ಲಿರುವ ನೈಟ್ರೋಜನ್ ಘಟಕಗಳನ್ನು ಆಮ್ಲಜನಕ ಘಟಕವನ್ನಾಗಿ ಪರಿವರ್ತಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ