
ಚೆನ್ನೈ(ಮೇ.02): ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಟಾರ್ ರಂಗು ಹೆಚ್ಚಿದೆ. ಕಾಲಿವುಡ್ ಖ್ಯಾತ ನಟ ಕಮಲ್ ಹಾಸನ್ ಮತ್ತು ಖುಷ್ಬೂ ಕೂಡಾ ಈ ಬಾರಿ ಸ್ಫರ್ಧಿಸಿದ್ದಾರೆ. ಕೊಯಮತ್ತೂರು ಸೌತ್‌ನಿಂದ ಮಕ್ಕಳ್ ನೀದಿ ಮೈಯಂ ಪಕ್ಷದಿಂದ ಸ್ಪರ್ಧಿಸಿದ ಕಮಲ್ ಹಾಸನ್ ಲೀಡ್‌ನಲ್ಲಿದ್ದಾರೆ.
ಇಂದು ಜಿಸಿಟಿ ಕಾಲೇಜು ಕ್ಯಾಂಪಸ್‌ನಲ್ಲಿರುವ ಎಣಿಕೆ ಕೇಂದ್ರವನ್ನು ತಲುಪಿದ ಕಮಲ್ ಹಾಸನ್ ಅವರು ಕಾಂಗ್ರೆಸ್ ಅಭ್ಯರ್ಥಿ ಮಯೂರ ಜಯಕುಮಾರ್ ವಿರುದ್ಧ ಮುನ್ನಡೆ ಸಾಧಿಸುತ್ತಿದ್ದಾರೆ.
ಪಂಚರಾಜ್ಯ ಚುನಾವಣಾ ಫಲಿತಾಂಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಆಡಳಿತಾರೂಢ ಎಐಎಡಿಎಂಕೆ 81 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ, ಡಿಎಂಕೆ 98 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಏಪ್ರಿಲ್ 6 ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆದಿದೆ.
ಥೌಸಂಡ್ಸ್ ಲೈಟ್ಸ್‌ನಲ್ಲಿ ಖುಷ್ಬೂಗೆ ಖುಷಿ ಇಲ್ಲ:
ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಿದ ಬಹುಭಾಷಾ ನಟಿ ಖುಷ್ಬೂಗೆ ಹಿನ್ನಡೆಯಾಗಿದೆ. ಡಿಎಂಕೆಯ ಎಳಿಯನ್ ಮುನ್ನಡೆ ಸಾಧಿಸಿದ್ದಾರೆ. ಸಂಜೆ 6.20 ರ ವೇಳೆಗೆ ಎಳಿಯನ್ 11155 ಮತಗಳನ್ನು ಗಳಿಸಿದ್ದರೆ, ಅವರ ಪ್ರತಿಸ್ಪರ್ಧಿ ಖುxಷ್ಬೂ 5658 ಮತಗಳನ್ನು ಗಳಿಸಿದ್ದಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ