ಮಮತಾ ಬ್ಯಾನರ್ಜಿ ಚುನಾವಣಾ ರಣನೀತಿ ತಂಡದಿಂದ ಹೊರಬಂದ ಪ್ರಶಾಂತ್ ಕಿಶೋರ್!

By Suvarna NewsFirst Published Jun 15, 2021, 4:08 PM IST
Highlights
  • ಪಶ್ಚಿಮ ಬಂಗಾಳಾ ಚುನಾವಣಾ ರಣನೀತಿ ತಂಡದಿಂದ ಹೊರಬಂದ ಚಾಣಾಕ್ಯ
  • 2026ರ  ವರೆಗೆ ಪ್ರಶಾಂತ್ ಕಿಶೋರ್ ತಂಡದ ಜೊತೆ ಮಮತಾ ಒಪ್ಪಂದ
  • ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಾಯ್ತು  ಆತಂಕ

ಕೋಲ್ಕತಾ(ಜೂ.15): ಈ ಬಾರಿಯ ಪಂಚ ರಾಜ್ಯಗಳ ವಿಧನಾಸಭಾ ಚುನಾವಣೆ ಬಳಿಕ ಚುಣವಣಾ ರಣನೀತಿಗಾರ ಪ್ರಶಾಂತ್ ಕಿಶೋರ್ ಬೇಡಿಕೆ ದುಪ್ಪಟ್ಟಾಗಿದೆ. ಆಡಳಿತ ವಿರೋಧಿ ಅಲೆ, ಬಿಜೆಪಿ ಘಟಾನುಘಟಿ ನಾಯಕರ ಉತ್ಸುವಾರಿ ಸೇರಿದಂತೆ ಹಲವು ಅಡೆತಡೆಗಳಿದ್ದರೂ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಗೆಲ್ಲಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಇದೀಗ  2026ರ ವರೆಗೆ ಚಾಣಾಕ್ಯ ಪ್ರಶಾಂತ್ ಕಿಶೋರ್ ತಂಡದ ಜೊತೆಗೆ ಮಮತಾ ಬ್ಯಾನರ್ಜಿ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ ಈ ಪ್ರಶಾಂತ್ ಕಿಶೋರ್ ಬಂಗಾಳದಿಂದ ಹೊರಬಂದಿದ್ದಾರೆ.

ಮೋದಿಗೆ ಎದುರಾಳಿ ಸೃಷ್ಟಿ?: ಪವಾರ್‌- ಪ್ರಶಾಂತ್‌ ಕಿಶೋರ್ ಚರ್ಚೆ, ಭಾರೀ ಸಂಚಲನ!

ಪಶ್ಚಿಮ ಬಂಗಾಳದ ಮುಂದಿನ ವಿಧನಾಸಭಾ ಚುನಾವಣೆ ವರೆಗೆ ಅಂದರೆ 2026ರ ವರೆಗೆ ಪ್ರಶಾಂತ್ ಕಿಶೋರ್ ಅವರ ಇಂಡಿಯನ್ ಪಾಲಿಟಿಕಲ್ ಆ್ಯಕ್ಷನ್ ಕಮಿಟಿ( I-PAC) ಜೊತೆ ಮಮತಾ ಬ್ಯಾನರ್ಜಿ ಒಪ್ಪಂದ ಮಾಡಿಕೊಂಡಿದ್ದಾರೆ.  I-PAC ತಂಡದ 9 ಮಂದಿ ಮಮತಾ ಬ್ಯಾನರ್ಜಿ ಜೊತೆ ಕೆಲಸ ಮುಂದುವರಿಸಲಿದ್ದಾರೆ. ಆದರೆ ಈ ತಂಡದ ಮುಖ್ಯಸ್ಥ, ಪ್ರಮುಖ ರಣನೀತಿಗಾರ ಪ್ರಶಾಂತ್ ಕಿಶೋರ್ ಹೊರಬಂದಿದ್ದಾರೆ.

ಪ್ರಶಾಂತ್ ಕಿಶೋರ್ ತಂಡದಿಂದ ಹೊರಬಂದರೂ, ಪಂಚಾಯತ್ ಚುನಾವಣೆಯಿಂದ ಹಿಡಿದು ವಿಧಾನ ಸಭಾ ಚುನಾವಣೆ ವರೆಗೆ ಮಮತಾ ಬ್ಯಾನರ್ಜಿಗೆ ಸಲಹೆ, ಮಾರ್ಗದರ್ಶನ ನೀಡಲಿದ್ದಾರೆ. ಆದರೆ ಪ್ರಶಾಂತಿ ಕಿಶೋರ್ ನಿರ್ಧಾರ ತೃಣಮೂಲ ಕಾಂಗ್ರೆಸ್ ನಿದ್ದೆಗೆಡಿಸಿದೆ. 

ಬಂಗಾಳದಲ್ಲಿ ಮಾತ್ರವಲ್ಲ, ತಮಿಳುನಾಡಿನಲ್ಲಿ DMK ಹಾಗೂ ಕಾಂಗ್ರೆಸ್ ಮೈತ್ರಿಕೂಟದ ಗೆಲುವಿನ ಹಿಂದೆ ಶ್ರಮಿಸಿದ್ದರು. ಹೀಗಾಗಿ ಈ ಚುನಾವಣೆ ಬಳಿಕ ಪ್ರಶಾಂತ್ ಬೇಡಿಕೆ ದುಪ್ಪಟ್ಟಾಗಿತ್ತು. ಆದರೆ 2021ರ ವಿಧಾನ ಸಭಾ ಚುನಾವಣೆ ಬಳಿಕ ತಾನು  I-PAC ತಂಡದಿಂದ ಹೊರಬರವುದಾಗಿ ತಿಳಿಸಿದ್ದರು. 

ಪ್ರಶಾಂತ್‌ ಕಿಶೋರ್‌ ಬಂಗಾಳದಲ್ಲಿ ಮಮತಾರನ್ನು ಗೆಲ್ಲಿಸಿದ್ದು ಹೀಗೆ!...

ಪ್ರಶಾಂತ್ ಕಿಶೋರ್ ಇತ್ತೀಚೆಗೆ NCP ಮುಖ್ಯಸ್ಥ ಶರದ್ ಪವಾರ್ ಭೇಟಿಯಾಗಿದ್ದರು. ಸತತ 3 ಗಂಟೆಗಳ ಮಾತುಕತೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗಿತ್ತು. ಮುಂಬರುವ ಲೋಕಸಭಾ ಚುನಾವಣೆಗೆ ಮೋದಿಗೆ ಪ್ರತಿಸ್ಪರ್ಧಿಯಾಗಿ ಪ್ರಬಲ ನಾಯಕನನ್ನು ಕಣಕ್ಕಿಳಿಸುವುದು ಸೇರೇದಂತೆ ಬಿಜೆಪಿಯನ್ನು ಕೇಂದ್ರದಿಂದ ಇಳಿಸಲು ಭಾರಿ ರಣತಂತ್ರ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ. 

click me!