ಸಿಎಂ ಮನೆ ಹೊರಗೆ ಅಕಾಲಿ ದಳದ ಪ್ರತಿಭಟನೆ, ಸುಖ್‌ಬೀರ್‌ ಬಾದಲ್‌ ವಶಕ್ಕೆ!

By Suvarna NewsFirst Published Jun 15, 2021, 3:48 PM IST
Highlights

* ಕೊರೋನಾ ಸಂಕಷ್ಟದ ಮಧ್ಯೆ ಪಂಜಾಬ್‌ನಲ್ಲಿ ಭುಗಿಲೆದ್ದ ಲಸಿಕೆ ಅಕ್ರಮ ಆರೋಪ

* ಲಸಿಕೆ, ವೈದ್ಯಕೀಯ ಕಿಟ್‌ ಖರೀದಿಯಲ್ಲಿ ಅಕ್ರಮ ಆರೋಪ

* ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಅಕಾಳಿ ದಳದ ಪ್ರತಿಭಟನೆ

ಚಂಡೀಗಢ(ಜೂ.15): ಕೊರೋನಾ ಸೋಂಕಿತರಿಗೆ ಲಸಿಕೆ ಮಾರಾಟ ಹಾಗೂ ವೈದ್ಯಕೀಯ ಕಿಟ್‌ ಖರೀದಿ ವಿಚಾರದಲ್ಲಿ ಅಕ್ರಮವೆಸಗಿರುವ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಪಂಜಾಬ್‌ನ ವಿಪಕ್ಷ ಶಿರೋಮಣಿ ಅಕಾಲಿ ದಳದ ಕಾರ್ಯಕರ್ತರು, ಇಲ್ಲಿನ ಸಿಎಂ ಅಮರಿಂದರ್ ಸಿಂಗ್ ಮನೆ ಎದುರು ಪ್ರತಿಭಟನೆ ಆರಂಬಿಸಿದ್ದಾರೆ. ಪ್ರಕರಣ ಸಂಬಂಧ ರಾಜ್ಯ ಆರೋಗ್ಯ ಸಚಿವ ಸಚಿವ ಬಲ್ಬೀರ್ ಸಿಂಗ್ ಸಂಧು ಅವರನ್ನು ವಜಾ ಮಾಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಸದ್ಯ ಪ್ರತಿಭಟನೆಯ ನೇತೃತ್ವ ವಹಿಸಿರುವ ಶಿರೋಮಣಿ ಅಕಾಲಿ ದಳದ ಮುಖ್ಯಸ್ಥ ಸುಖ್ಬೀರ್ ಬಾದಲ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಕಾಲಿ ದಳದ ಜೊತೆ ಇತ್ತೀಚೆಗಷ್ಟೇ ಮೈತ್ರಿ ಮಾಡಿಕೊಂಡಿರುವ ಬಹುಜನ ಸಮಾಜ ಪಕ್ಷದ ಮುಖ್ಯಸ್ಥ ಜಸ್ಬೀರ್ ಸಿಂಗ್ ಗಾಂಧಿ ಕೂಡ ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ಇನ್ನು ದೀರ್ಘ ಕಾಲದಿಂದ ಅಕಾಲಿ ದಳದೊಂದಿಗಿದ್ದ ಬಿಜೆಪಿ ಮೈತ್ರಿ ಮುರಿದು ಬಿದ್ದಿದೆಡ ಎಂಬುವುದು ವಿಶೇಷ. ಅಲ್ಲದೇ ಅಕಾಲಿ ದಳ, ಈಗ ಎನ್‌ಡಿಎ ಅಂದರೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದಿಂದಲೂ ಹೊರಗಿದೆ. ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಕಾಲಿ ದಳ ಬಿಎಸ್ಪಿ ಜೊತೆಗೆ ಕಣಕ್ಕೆ ಇಳಿಯಲಿದೆ.

https://t.co/pqBVRjqwA7

— Sukhbir Singh Badal (@officeofssbadal)

ಇನ್ನು ವಿಪಕ್ಷಗಳ ಆರೋಪಗಳ ಮಧ್ಯೆ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ನಿಡುವ ನಿರ್ಧಾರವನ್ನು ಹಿಂಡಪೆದಿದ್ದರು. ಪಂಜಾಬ್ ರಾಜ್ಯ ಕೋಟಾದಡಿ ಖರೀದಿಸಲಾದ ಲಸಿಕೆಗಳನ್ನು ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡಿದ ವಿಚಾರವಾಗಿ ರಾಜ್ಯ ಸರ್ಕಾರದ ಮೇಲೆ ಹಲವಾರು ಸಬವಾಲುಗಳೆದಿದ್ದವು. ಪಂಜಾಬ್ ಸರ್ಕಾರ ಪ್ರತೀ ಡೋಸ್‌ ಲಸಿಕೆಯನ್ನು 400 ರೂಪಾಯಿ ಕೊಟ್ಟು ಖರೀದಿಸಿತ್ತಾದರೂ, ಖಾಸಗಿ ಆಸ್ಪತ್ರೆಗಳಿಗೆ 1060 ರೂಪಾಯಿಗೆ ಮಾರಾಟ ಮಾಡುತ್ತಿತ್ತು. ಲಸಿಕಾ ಅಭಿಯಾನದ ರಾಜ್ಯ ಉಸ್ತುವಾರಿ ವಿಕಾಸ್ ಗರ್ಗ್ ಬಿಡುಗಡೆ ಮಾಡಿದ ಪತ್ರದಲ್ಲೂ ಈ ವಿಚಾರ ಉಲ್ಲೇಖಿಸಲಾಗಿದೆ. 

click me!