ತೆಲಂಗಾಣ: ಅರಣ್ಯನಾಶ ಬೆನ್ನಲ್ಲೇ ಮತ್ತೊಂದು ಕಡೆ 30 ಎಕರೆ ಉದ್ಯಾನವನಕ್ಕೆ ಬೆಂಕಿ, ಬೆಲೆಬಾಳುವ ಮರಗಳು ಭಸ್ಮ!

ತೆಲಂಗಾಣದಲ್ಲಿ ಮೂಲಸೌಕರ್ಯ ಯೋಜನೆಗಳಿಗಾಗಿ 400 ಎಕರೆ ಅರಣ್ಯ ಭೂಮಿ ನಾಶವಾಗಿದ್ದು, ಪರಿಸರಕ್ಕೆ ಹಾನಿಯಾಗಿದೆ. ಖಮ್ಮಂನ ಅರ್ಬನ್ ಪಾರ್ಕ್‌ನಲ್ಲಿ ಬೆಂಕಿ ಅವಘಡದಿಂದ 30 ಎಕರೆ ಮರಗಳು ಸುಟ್ಟು ಕರಕಲಾಗಿವೆ.

Trees Across 30 Acres Burnt in Veld Fire at Velugumatla Urban Park in telangana gow

ತೆಲಂಗಾಣ ಸರ್ಕಾರವು ಬಹು-ಮೂಲಸೌಕರ್ಯ ಮತ್ತು ಐಟಿ ಪಾರ್ಕ್‌ಗಳ ಅಭಿವೃದ್ಧಿಗಾಗಿ 400 ಎಕರೆ ಕಾಂಚ ಗಚಿಬೌಲಿ ಪ್ರದೇಶದ ಅರಣ್ಯ ಭೂಮಿ ನಾಶಕ್ಕೆ  ಗುರುವಾರ ತೆಲಂಗಾಣ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಠಿಣ ಎಚ್ಚರಿಕೆ ನೀಡಿತ್ತು. ಅರಣ್ಯ ನಾಶ ಮಾಡುತ್ತಿರುವ ವೇಳೆ ಪ್ರಾಣಿ ಪಕ್ಷಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. 

ಇದೀಗ  ತೆಲಂಗಾಣದ ಮತ್ತೊಂದು ಕಡೆ ಬೆಂಕಿ ಬಿದ್ದು, ಅಉಮಾರು 30 ಎಕರೆ ಪ್ರದೇಶದಲ್ಲಿದ್ದ ಮರಗಳು ಸುಟ್ಟು ಕರಕಲಾಗಿದೆ. ಖಮ್ಮಂನ ವೆಲುಗುಮಟ್ಲಾ ಅರ್ಬನ್ ಪಾರ್ಕ್‌ನಲ್ಲಿ ಗುರುವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡು 30 ಎಕರೆ ಪ್ರದೇಶದಲ್ಲಿದ್ದ ಮರಗಳು ಸುಟ್ಟು ಕರಕಲಾಗಿವೆ.

Latest Videos

ಕಾಂಚ ಗಚ್ಚಿಬೌಲಿ ಮರಗಳ ಮಾರಣಹೋಮ; 'ಮುಖ್ಯ ಕಾರ್ಯದರ್ಶಿ ಜೈಲಿಗೆ ಹೋಗ್ತಾನೆ' ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್‌!

ಉದ್ಯಾನವನದಲ್ಲಿ ಬೆಳೆದ ವಿವಿಧ ಜಾತಿಯ ಮರಗಳು ಕೂಡ ಬೆಂಕಿಯಲ್ಲಿ ಸುಟ್ಟು ಭಸ್ಮವಾದವು. ಕೃಷಿ ಜಮೀನಿನಲ್ಲಿ ವ್ಯಕ್ತಿಯೊಬ್ಬರು ಹೊತ್ತಿಸಿದ ಪೊದೆಯಿಂದ ಹುಟ್ಟಿದ ಬೆಂಕಿಯ ಕಿಡಿ 135 ಎಕರೆಗಳಷ್ಟು ವಿಸ್ತೀರ್ಣದ ನಗರ ಉದ್ಯಾನವನಕ್ಕೆ ಬಹು ಬೇಗನೆ ಹರಡಿಕೊಂಡು ಈ ದುರಂತ ನಡೆದಿದೆ.

Telangana: 400 ಎಕರೆ ವಿವಿ ಭೂಮಿಯನ್ನು 10 ಸಾವಿರ ಕೋಟಿಗೆ ಹರಾಜು ಹಾಕಲು ಮುಂದಾದ ಕಾಂಗ್ರೆಸ್‌ ಸರ್ಕಾರ!

ವಿಷ್ಯ ತಿಳಿದ ತಕ್ಷಣ ಮೂರು ಅಗ್ನಿಶಾಮಕ ವಾಹನಗಳು  ಉದ್ಯಾನವನಕ್ಕೆ ಧಾವಿಸಿ ಸತತ ಮೂರು ಗಂಟೆಗಳ ಪ್ರಯತ್ನದ ನಂತರ ಬೆಂಕಿಯನ್ನು ನಂದಿಸಲಾಯ್ತು. ಜೊತೆಗೆ ಸ್ಥಳೀಯ ನಿವಾಸಿಗಳು ಕೂಡ ಬೆಂಕಿ ಆರಿಸುವ ಕಾರ್ಯದಲ್ಲಿ ತೊಡಗಿದರು.

vuukle one pixel image
click me!