ಪೊಲೀಸರ ಹದ್ದಿನ ಕಣ್ಣು: ದೇಶ ಸಂಪೂರ್ಣ ಶಾಂತ

By Web DeskFirst Published Nov 10, 2019, 9:17 AM IST
Highlights

ಅಯೋಧ್ಯೆ ತೀರ್ಪಿನ ಬಳಿಕ ಎಲ್ಲೂ ಅಹಿತಕರ ಘಟನೆ ಇಲ್ಲ| ವದಂತಿ ಹಬ್ಬಿಸಿದ್ದಕ್ಕೆ, ಆಕ್ಷೇಪಾರ್ಹ ಹೇಳಿಕೆಗೆ ಇಬ್ಬರ ಬಂಧನ|ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಎಲ್ಲ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರ ಜತೆ ಸತತ ಸಂಪರ್ಕದಲ್ಲಿದ್ದರು|

ನವದೆಹಲಿ[ನ.10]: ಖಾಕಿ ಪಡೆಗಳ ಭಾರೀ ಬಿಗಿ ಭದ್ರತೆ, ಗಸ್ತು, ಸರ್ಕಾರಗಳ ಮುನ್ನೆಚ್ಚರಿಕೆ ಕ್ರಮಗಳು, ಮನಬಂದಂತೆ ಹೇಳಿಕೆಗಳು ಪ್ರಕಟಗೊಳ್ಳುತ್ತಿದ್ದ ಸಾಮಾಜಿಕ ಮಾಧ್ಯಮಗಳ ಮೇಲೆ ನಿಗಾ ಇರಿಸುವಿಕೆ ಹಾಗೂ ಜನರ ತಾಳ್ಮೆ- ಈ ಎಲ್ಲ ಸಂಗತಿಗಳ ಕಾರಣ, ವಿವಾದಾತ್ಮಕ ಅಯೋಧ್ಯೆ ಪ್ರಕರಣದ ತೀರ್ಪು ಹೊರಬಿದ್ದ ಬಳಿಕವೂ ದೇಶದಲ್ಲಿ ಶಾಂತ ಪರಿಸ್ಥಿತಿ ನೆಲೆಸಿದೆ.

ಅಯೋಧ್ಯೆ ಮಹಾತೀರ್ಪು: ಸಮನ್ವಯದ ಹೊಣೆ ಹೊತ್ತಿದ್ದ ರವಿಶಂಕರ ಗುರೂಜಿ ಪ್ರತಿಕ್ರಿಯೆ

ಕೇಂದ್ರ ಗೃಹ ಸಚಿವಾಲಯವು ನವೆಂಬರ್‌ 17 ರೊಳಗೆ ತೀರ್ಪು ಹೊರ ಬರುವ ಸೂಚನೆ ಸಿಕ್ಕ ಬಳಿಕ ವಿವಾದದ ಕೇಂದ್ರ ಬಿಂದುವಾದ ಉತ್ತರ ಪ್ರದೇಶಕ್ಕೆ 400 ಅರೆಸೇನಾಪಡೆ ಸಿಬ್ಬಂದಿಗಳನ್ನು ರವಾನಿಸಿತ್ತು. ಗುಪ್ತಚರ ಪಡೆಗಳು ಹಾಗೂ ರಾಜ್ಯ ಪೊಲೀಸರನ್ನು ಕೂಡ ಸತತ ಎಚ್ಚರಿಕೆ ಸಂದೇಶಗಳ ಮೂಲಕ ಗೃಹ ಸಚಿವಾಲಯ ತುದಿಗಾಲಲ್ಲಿ ನಿಲ್ಲಿಸಿತ್ತು. ಹೀಗಾಗಿ ಯಾವುದೇ ಅಹಿತಕರ ಘಟನೆಗಳು ತೀರ್ಪು ಹೊರಬಂದ ಬಳಿಕ ನಡೆಯದಂತೆ ಭದ್ರತಾ ಪಡೆಗಳು ಹಗಲಿರುಳು ಹದ್ದಿನ ಕಣ್ಣುಇರಿಸಿದ್ದವು.

ಅಯೋಧ್ಯೆ ತೀರ್ಪು : ರಾಮನ ಹುಟ್ಟು ಸ್ಥಳಕ್ಕಾಗಿ ಹೋರಾಡಿದ ಸಂತರಿವರು

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್, ಗೃಹ ಕಾರ್ಯದರ್ಶಿ ಅಜಿತ್‌ ಭಲ್ಲಾ, ಗುಪ್ತಚರ ದಳದ ಮುಖ್ಯಸ್ಥ ಅರವಿಂದ ಕುಮಾರ್ ಅವರ ಜತೆ ಸರಣಿ ಸಭೆ ನಡೆಸಿ, ಸೂಕ್ಷ್ಮ ರಾಜ್ಯಗಳು ಎಂದೇ ಪರಿಗಣಿತವಾಗಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್ ಅವರ ಜತೆ ಮಾತನಾಡಿದ್ದರು. ಅಗತ್ಯಬಿದ್ದರೆ ಹೆಚ್ಚಿನ ಕೇಂದ್ರೀಯ ಪಡೆಗಳನ್ನು ಕೇಳಿ ಎಂದೂ ಸೂಚಿಸಿದ್ದರು.ಇದಲ್ಲದೆ, ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಎಲ್ಲ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರ ಜತೆ ಸತತ ಸಂಪರ್ಕಸಲ್ಲಿದ್ದರು.

ಮೈಸೂರು: ಅಯೋಧ್ಯೆ ತೀರ್ಪು ಸ್ವಾಗತಿಸಿ ಸಂಭ್ರಮಿಸಿದ ಹಿಂದೂ ಮುಸ್ಲಿಂ ಬಾಂಧವರು

ಇನ್ನು ಅಯೋಧ್ಯೆ ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ಮುಂಜಾಗೃತಾ ಕ್ರಮವಾಗಿ 144 ನೇ ವಿಧಿಯನ್ವಯ ನಿಷೇಧಾಜ್ಞೆ ಹೇರಲಾಗಿತ್ತು. ಸಂಭ್ರಮ ಅಥವಾ ಕರಾಳ ದಿನಾಚರಣೆಗಳನ್ನು ನಿಷೇಧಿಸಲಾಗಿತ್ತು. ಇದರಿಂದ ಸಮಾಜಘಾತಕ ಶಕ್ತಿಗಳಿಗೆ ಮೊದಲೇ ನಡುಕ ಶುರುವಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಉತ್ತರಪ್ರದೇಶ ಡಿಜಿಪಿ ಒ.ಪಿ.ಸಿಂಗ್, ‘ರಾಜ್ಯದಲ್ಲಿ ಸಂಜೆಯವರೆಗೂ ಯಾವುದೇ ಅಹಿತಕರ ಘಟನೆಗಳು ನಡೆದ ವರದಿಯಾಗಿರಲಿಲ್ಲ. ರಾಜ್ಯದಲ್ಲಿ ಸ್ಥಿತಿ ಸಹಜವಾಗಿದೆ’ ಎಂದಿದ್ದಾರೆ. 

ಇಬ್ಬರ ಬಂಧನ: 

ವದಂತಿಗಳನ್ನು ಹಬ್ಬಿಸಿದ್ದಕ್ಕಾಗಿ ಉತ್ತರಪ್ರದೇಶದ ನೋಯ್ಡಾದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ರಾಜಸ್ಥಾನದ ಬಿಕಾನೇರ್‌ನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ಪ್ರಕಟಿಸಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
 

click me!