ಅಯೋಧ್ಯೆಯೇ ರಾಮನ ಜನ್ಮಸ್ಥಳ ಎಂದು ಹಿಂದುಗಳು ನಂಬಿರುವುದು ‘ವಾಲ್ಮೀಕಿ ರಾಮಾಯಣ’ ಹಾಗೂ ‘ಸ್ಕಂದ ಪುರಾಣ’ ಧರ್ಮಗ್ರಂಥಗಳಿಂದ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 1528ರಲ್ಲಿ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಮೊದಲೇ ಇದ್ದ ವಿವಿಧ ಧಾರ್ಮಿಕ ಗ್ರಂಥಗಳ ಶ್ಲೋಕಗಳನ್ನು ಸುಪ್ರೀಂಕೋರ್ಟ್ ಮುಂದೆ ಸಾಕ್ಷಿಗಳು ಇಟ್ಟಿದ್ದರು. ಇವುಗಳನ್ನು ಪರಿಗಣಿಸಿದ ಪಂಚಸದಸ್ಯ ಪೀಠ, ‘ಇವು ನಿರಾಧಾರದಿಂದ ಕೂಡಿವೆ’ ಎಂದು ಹೇಳಲಾಗದು ಎಂದಿತು.
ನವದೆಹಲಿ(ನ.10): ಅಯೋಧ್ಯೆಯೇ ರಾಮನ ಜನ್ಮಸ್ಥಳ ಎಂದು ಹಿಂದುಗಳು ನಂಬಿರುವುದು ‘ವಾಲ್ಮೀಕಿ ರಾಮಾಯಣ’ ಹಾಗೂ ‘ಸ್ಕಂದ ಪುರಾಣ’ ಧರ್ಮಗ್ರಂಥಗಳಿಂದ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
1528ರಲ್ಲಿ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಮೊದಲೇ ಇದ್ದ ವಿವಿಧ ಧಾರ್ಮಿಕ ಗ್ರಂಥಗಳ ಶ್ಲೋಕಗಳನ್ನು ಸುಪ್ರೀಂಕೋರ್ಟ್ ಮುಂದೆ ಸಾಕ್ಷಿಗಳು ಇಟ್ಟಿದ್ದರು. ಇವುಗಳನ್ನು ಪರಿಗಣಿಸಿದ ಪಂಚಸದಸ್ಯ ಪೀಠ, ‘ಇವು ನಿರಾಧಾರದಿಂದ ಕೂಡಿವೆ’ ಎಂದು ಹೇಳಲಾಗದು ಎಂದಿತು.
undefined
ಅಯೋಧ್ಯೆ ತೀರ್ಪು: ಹಕ್ಕು ಮಂಡಿಸಿದವರಿಗೆ ಸುಪ್ರೀಂಕೋರ್ಟ್ ತೀರ್ಪಿನಿಂದ ಸಿಕ್ಕಿದ್ದೇನು?
‘ಧರ್ಮಗ್ರಂಥಗಳೇ ಹಿಂದೂ ಧರ್ಮದ ಮೂಲ ತಳಹದಿಗಳು. ವಾಲ್ಮೀಕಿ ರಾಮಾಯಣವೇ ರಾಮ ಹಾಗೂ ಆತನ ಕಾರ್ಯಗಳ ಮುಖ್ಯ ಮೂಲಗಳು. ಕ್ರಿಸ್ತ ಪೂರ್ವದಲ್ಲೇ ವಾಲ್ಮೀಕಿ ರಾಮಾಯಣ ರಚನೆಯಾಗಿತ್ತು. ವಾಲ್ಮೀಕಿ ರಾಮಾಯಣದ ೧೦ನೇ ಶ್ಲೋಕದಲ್ಲಿ ಕೌಶಲ್ಯೆಯು ಮಗನೊಬ್ಬನಿಗೆ ಜನ್ಮ ನೀಡಿ ದಳು. ಆತ ವಿಶ್ವಕ್ಕೇ ದೇವರಾದ. ಅಯೋಧ್ಯೆ ಯು ಆತನ ಆಗಮನದಿಂದ ಪಾವನ ವಾಯಿತು’ ಎಂದು ಬರೆಯಲಾಗಿದೆ ಎಂದು ನ್ಯಾಯಪೀಠ ತಿಳಿಸಿತು.
ಮಂದಿರ ನಿರ್ಮಾಣಕ್ಕೆ ನಮ್ಮ ಬೆಂಬಲ: ಕಾಂಗ್ರೆಸ್
7 ದಶಕಗಳ ಅಯೋಧ್ಯೆ ರಾಮ ಜನ್ಮ ಭೂಮಿ ವಿವಾದಕ್ಕೆ ಶನಿವಾರ ತೆರೆ ಬಿದ್ದಿದ್ದು, ಸುಪ್ರೀಂ ಇಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ವಿವಾದಿತ 2.77 ಎಕರೆ ಜಾಗವನ್ನು ರಾಮಲಲ್ಲಾಗೆ ವಹಿಸಿ ಸುಪ್ರೀಂ ತೀರ್ಪು ನೀಡಿದೆ. ಯಾರ ಭಾವನೆಗೂ ಧಕ್ಕೆಯಾಗದಂತೆ ಬಾಬರಿ ಮಸೀದಿಗೂ ಅಯೋಧ್ಯೆಯಲ್ಲೇ ಪ್ರತ್ಯೇಕ ಜಾಗವನ್ನು ಕಲ್ಪಿಸುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಅಯೋಧ್ಯೆ ತೀರ್ಪಿಗೆ ಎಎಸ್ಐ ಉತ್ಖನನವೇ ಪ್ರಮುಖ ಆಧಾರ