ಸಂಜೆ 5 ಗಂಟೆಗೆ ಜನರನ್ನುದ್ದೇಶಿಸಿ ಮೋದಿ ಭಾಷಣ, ಮತ್ತೊಂದು ಮಹತ್ವದ ಘೋಷಣೆ ಇದೆಯಾ?

Published : Sep 21, 2025, 03:24 PM IST
Narendra Modi

ಸಾರಾಂಶ

ಸಂಜೆ 5 ಗಂಟೆಗೆ ಜನರನ್ನುದ್ದೇಶಿಸಿ ಮೋದಿ ಭಾಷಣ, ಮತ್ತೊಂದು ಮಹತ್ವದ ಘೋಷಣೆ ಇದೆಯಾ? ಆತಂಕ ಕುತೂಹಲ ಮನೆ ಮಾಡಿದೆ. ನೋಟ್ ಬ್ಯಾನ್ ಸೇರಿದಂತೆ ಹಲವು ಘೋಷಣೆಗಳು ಇದೇ ರೀತಿಯ ಜನರನ್ನುದ್ದೇಶಿ ನಡೆಸಿದ ಭಾಷಣದಲ್ಲೇ ಘೋಷಣೆಯಾಗಿತ್ತು. ಆದರೆ ಈ ಬಾರಿಯ ಮೋದಿ ಭಾಷಣದ ಪ್ರಮುಖ ಅಂಶವೇನು?

ನವದೆಹಲಿ (ಸೆ.21) ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನುದ್ದೇಶಿ ಭಾಷಣ ಮಾಡುವುದು ಹೊಸದಲ್ಲ. ಪ್ರಮುಖ ಕಾರ್ಯಕ್ರಮ, ಹಲವು ಸಂದರ್ಭದಲ್ಲಿ ಮೋದಿ ಜನರನ್ನುದ್ದೇಶಿ ಭಾಷಣ ಮಾಡಿದ್ದಾರೆ. ಇದರ ನಡುವೆ ಕೆಲವು ಸಂದರ್ಭಗಲ್ಲಿ ದಿಢೀರ್ ಸೋಶಿಯಲ್ ಮೀಡಿಯಾ ಮೂಲಕ ದೇಶವನ್ನುದ್ದೇಶಿ ಭಾಷಣ ಘೋಷಣೆ ಮಾಡಿದಾಗ ಹಲವರಿಗೆ ಆತಂಕ, ಕುತೂಹಲ ಹೆಚ್ಚಾಗುತ್ತದೆ. ಕಾರಣ ಇದೇ ರೀತಿ ನೋಟ್ ಬ್ಯಾನ್ ಸೇರಿದಂತೆ ಹಲವು ನಿರ್ಧಾರಗಳನ್ನು ಮೋದಿ ಈ ಮೂಲಕ ಘೋಷಿಸಿದ್ದಾರೆ. ಇದೀಗ ದಿಢೀರ್ ಮೋದಿ, ಸಂಜೆ 5 ಗಂಟೆಗೆ ಜನತೆಯನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ಹೀಗಾಗಿ ಇಂದು ಮೋದಿ ಮಹತ್ವದ ಘೋಷಣೆ ಮಾಡುತ್ತಾರಾ ಅನ್ನೋ ಕುತೂಹಲ ಹೆಚ್ಚಾಗಿದೆ. ಇದೇ ವೇಳೆ ಕೆಲವರು ಮೋದಿಯ ಇಂದಿನ ಭಾಷಣದ ಪ್ರಮುಖ ಅಂಶವನ್ನು ಊಹಿಸಿದ್ದಾರೆ.

ಪ್ರಧಾನಿ ಮೋದಿ ಕಚೇರಿಯಿಂದ ಅಧಿಕೃತ ಟ್ವೀಟ್

ಇಂದು (ಸೆ.21) ಸಂಜೆ 5 ಗಂಟೆಗೆ ಪ್ರಧಾನಿ ಮೋದಿ ದೇಶವನ್ನುದ್ದೇಶಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಮೋದಿ ಕಾರ್ಯಾಲಯ ಅಧಿಕೃತ ಟ್ವೀಟ್ ಮಾಡಿದೆ. ಆದರೆ ಯಾವ ವಿಚಾರದ ಕುರಿತು, ಮೋದಿ ಭಾಷಣದ ಪ್ರಮುಖಾಂಶಗಳ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಈ ಕುರಿತು ಪ್ರಧಾನಿ ಮೋದಿ ಎಕ್ಸ್ ಖಾತೆಯಲ್ಲಿ ಯಾವುದೇ ಮಾಹಿತಿ ನೀಡಿಲ್ಲ.

 

 

ಮೋದಿ ಭಾಷಣದ ಪ್ರಮುಖಾಂಶವೇನು?

ಪ್ರಧಾನಿ ಮೋದಿ ಇಂದು ಸಂಜೆ ಜನತೆಯನ್ನುದ್ದೇಶಿ ಮಾಡುವ ಭಾಷಣದ ಪ್ರಮುಖ ಅಂಶ ಎನು ಎಂದು ಹಲವರು ಊಹಿಸಿದ್ದಾರೆ.ನಾಳೆಯಿಂದ (ಸೆ.22) ನವರಾತ್ರಿ ಹಬ್ಬದ ಆಚರಣೆ ಆರಂಭಗೊಳ್ಳುತ್ತಿದೆ. ಇಷ್ಟೇ ಅಲ್ಲ ಮೋದಿ ಸರ್ಕಾರದ ತೆಗೆದುಕೊಂಡು ಕ್ರಾಂತಿಕಾರಕ ನಿರ್ಧಾರವಾಗಿರುವ ಜಿಎಸ್‌ಟಿ ಕಡಿತ ನಾಳೆಯಿಂದ ಜಾರಿಯಾಗುತ್ತಿದೆ. ಹೀಗಾಗಿ ನವರಾತ್ರಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ ಜಿಎಸ್‌ಟಿ ಕಡಿತ ಜಾರಿ ಕುರಿತು ಮಹತ್ವದ ಅಪ್‌ಡೇಟ್ ನೀಡುವ ಸಾಧ್ಯತೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ನವರಾತ್ರಿ, ದೀಪಾವಳಿ ಹಬ್ಬದ ಪ್ರಯಾಣ ರದ್ದು, ಅಮೆರಿಕದಲ್ಲಿ H-1B ವೀಸಾ ಭಾರತೀಯರು ಕಂಗಾಲು

ಕಾರು, ವಾಹನ, ಅಗತ್ಯ ವಸ್ತು, ಔಷಧಿ ಸೇರಿದಂತೆ 370ಕ್ಕೂ ಹೆಚ್ಚು ವಸ್ತುಗಳ ಬೆಲೆ ನಾಳೆಯಿಂದ ಕಡಿಮೆಯಾಗುತ್ತಿದೆ. ಜಿಎಸ್‌‌ಟಿ ಕಡಿತ ಜಾರಿ, ಜನರಿಗೆ ಅಗುವ ಪ್ರಯೋಜನ, ಹೊಸ ಜಿಎಸ್‌ಟಿ ದರದಿಂದ ಸಾರ್ವಜನಿಕರಿಗೆ ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಮಾಹಿತಿ ನೀಡುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನವರಾತ್ರಿಯ ಮೊದಲ ದಿನದಿಂದಲೇ ಜಿಎಸ್‌ಟಿ 2.0 ಜಾರಿಯಾಗುತ್ತಿದೆ. ದೇಶಾದ್ಯಂತ ನವರಾತ್ರಿ ಹಬ್ಬದ ಸಂಭ್ರಮವೂ ಕಳೆಗಟ್ಟಿದೆ. ಹೀಗಾಗಿ ಈ ವಿಶೇಷ ಸಂದರ್ಭದಲ್ಲಿ ಮೋದಿ ಈ ಎಲ್ಲಾ ವಿಚಾರಗಳ ಕುರಿತು ಜನತೆಯೊಂದಿಗೆ ಹಂಚಿಕೊಳ್ಳುವ ಸಾಧ್ಯತೆ ಇದೆ.

ಇದೇ ವೇಳೆ ನಿನ್ನೆಯಷ್ಟೇ ಡೋನಾಲ್ಡ್ ಟ್ರಂಪ್ ಘೋಷಿಸಿದ ಹೊಸ ಹೆಚ್1ಬಿ ವೀಸಾ ನೀತಿ ಕುರಿತು ಮಾತನಾಡುವ ಸಾಧ್ಯತೆಯನ್ನು ಹಲವರು ಊಹಿಸಿದ್ದಾರೆ. ಆದರೆ ಈ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.

ಹೊಸ ಜಿಎಸ್‌ಟಿ ದರ

ಸದ್ಯ ಜಿಎಸ್‌ಟಿ ನಾಲ್ಕು ಸ್ಲ್ಯಾಬ್ ಮೂಲಕ ವಿಧಿಸಲಾಗಿತ್ತು. ಶೇಕಡಾ 5, ಶೇಕಡಾ 12, ಶೇಕಡಾ 18 ಹಾಗೂ ಶೇಕಡಾ 28 ರಷ್ಟು ಜಿಎಸ್‌ಟಿ ತೆರಿಗೆ ಹಾಕಲಾಗುತ್ತಿದೆ. ಆದರೆ ಜಿಎಸ್‌ಟಿ 2.0 ಮೂಲಕ ಹೊಸ ಜಿಎಸ್‌ಟಿ ಸ್ಲ್ಯಾಬ್ ಜಾರಿಯಾಗುತ್ತಿದೆ. ಶೇಕಡಾ 5, ಶೇಕಡಾ 18 ಹಾಗೂ ಶೇಕಡಾ 40 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಪ್ರಮುಖವಾಗಿ ಶೇಕಡಾ 28ರಷ್ಟಿದ್ದ ಹಲವು ಉತ್ಪನ್ನಗಳ ಜಿಎಸ್‌ಟಿ ಶೇಕಡಾ 18 ಹಾಗೂ ಶೇಕಡಾ 5ಕ್ಕೆ ಇಳಿಕೆಯಾಗುತ್ತಿದೆ. ಈ ಪೈಕಿ ಔಷಧಿ ಸೇರಿದಂತೆ ಕೆಲ ಅಗತ್ಯ ವಸ್ತುಗಳ ಜಿಎಸ್‌ಟಿ ಶೂನ್ಯವಾಗುತ್ತಿದೆ. ಇನ್ನು ಐಷಾರಾಮಿ ವಸ್ತುಗಳು, ತಂಬಾಕು ಸೇರಿದಂತೆ ಇತರ ವಸ್ತುಗಳ ಜಿಎಸ್‌ಟಿ ತೆರಿಗೆ ಶೇಕಡಾ 40ಕ್ಕೆ ಏರಿಕೆಯಾಗುತ್ತಿದೆ.

5 ದಶಕದಿಂದಲೂ ನವರಾತ್ರಿ ಸಮಯದಂದು ಉಪವಾಸ ಮಾಡ್ತಾರೆ ಪ್ರಧಾನಿ ಮೋದಿ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ