ಪ್ರಧಾನಿ ಮೋದಿ ಕಾಪಿ ಮಾಡಲು ಹೋಗಿ ಪೇಚಿಗೆ ಸಿಲುಕಿದ ಪಾಕ್ ಪಿಎಂ ಶೆಹಬಾಜ್ ಶರೀಫ್

Published : May 15, 2025, 03:34 PM ISTUpdated : May 15, 2025, 03:52 PM IST
ಪ್ರಧಾನಿ ಮೋದಿ ಕಾಪಿ ಮಾಡಲು ಹೋಗಿ ಪೇಚಿಗೆ ಸಿಲುಕಿದ ಪಾಕ್ ಪಿಎಂ ಶೆಹಬಾಜ್ ಶರೀಫ್

ಸಾರಾಂಶ

ಪಾಕಿಸ್ತಾನ ಪ್ರಧಾನಿ ಶೆಹ್ಬಾಜ್‌ ಶರೀಫ್ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ನಕಲು ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾರೆ.

ಪಾಕಿಸ್ತಾನ ಪ್ರಧಾನಿ ಶೆಹ್ಬಾಜ್‌ ಶರೀಫ್ ಅವರು, ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ನಕಲು ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾರೆ. ಆಪರೇಷನ್ ಸಿಂದೂರ್ ಕಾರ್ಯಾಚರಣೆಯ ನಂತರ ಭಾರತದ ಪ್ರಧಾನಿ ಭಾರತ ಪಾಕಿಸ್ತಾನ ಗಡಿಗೆ ಸಮೀಪವಿರುವ ಪಂಜಾಬ್‌ನ ಅದಂಪುರ ವಾಯುನೆಲೆಗೆ (Adampur Air base) ಭೇಟಿ ನೀಡಿ ಅಲ್ಲಿ ಭಾರತೀಯ ವಾಯುಪಡೆ ಸೇರಿದಂತೆ ಭದ್ರತಾ ಪಡೆಯ ಎಲ್ಲಾ ಯೋಧರನ್ನು ಹುರಿದುಂಬಿಸಿದ್ದರು. ಆಪರೇಷನ್‌ ಸಿಂದೂರ್‌ನಲ್ಲಿ ಭಾರತದ ಭದ್ರತಾಪಡೆಗಳು ತೋರಿದ ಸಾಹಸ ಹಾಗೂ ಕಾರ್ಯಕ್ಷಮತೆಗಾಗಿ ಅವರು ಯೋಧರನ್ನು ಶ್ಲಾಘಿಸಿದ್ದರು. ಪ್ರಧಾನಿ ಮೋದಿಯವರ ಈ ಪವರ್ ಪ್ಯಾಕ್ ಭೇಟಿ ದೇಶ ಮಾತ್ರವಲ್ಲ ಜಗತ್ತಿನ ಗಮನ ಸೆಳೆದಿತ್ತು. ಆದರೆ ಪ್ರಧಾನಿ ಮೋದಿಯವರಂತೆ ತಾನು ಮಾಡುವುದಕ್ಕೆ ಹೋಗಿ ಪಾಕಿಸ್ತಾನದ ಪ್ರಧಾನಿ ಶೆಹ್ಬಾಜ್ ಶರೀಫ್ ಪೇಚಿಗೆ ಸಿಲುಕಿದ್ದಾರೆ. 

ಭಾರತದ ಪ್ರಧಾನಿ ಭಾರತದ ವಾಯುನೆಲೆಗೆ ಭೇಟಿ ನೀಡಿದಂತೆ ಪಾಖ್ ಪ್ರಧಾನಿ ಶೆಹಬಾಜ್ ಶರೀಫ್‌ ಸಿಯಾಲ್‌ಕೋಟ್‌ನ ಪಸ್ರೂರ್‌ನಲ್ಲಿರುವ ಸೇನಾ ಕಂಟೋನ್ಮೆಂಟ್‌ಗೆ ಭೇಟಿ ನೀಡಿದ್ದಾರೆ. ಆದರೆ ಈ ಭೇಟಿ ಅಲ್ಲಿ ಭಾರತ ವಾಯುದಾಳಿಯಿಂದ ಪಾಕಿಸ್ತಾನದ ಮಿಲಿಟರಿ ಸೌಕರ್ಯಗಳಲ್ಲಿ ಉಂಟಾದ ವಿಧ್ವಂಸವನ್ನು ಜಗತ್ತಿನ ಮುಂದೆ ತೆರೆದಿಟ್ಟಿತ್ತು.  

ಪ್ರಧಾನಿ ಮೋದಿ ಅವರು ಮೇ 13 ರಂದು ಹರ್ಕ್ಯುಲಸ್ ವಿಮಾನದಲ್ಲಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವ ಆದಂಪುರ ನೆಲೆಗೆ ಆತ್ಮವಿಶ್ವಾಸದಿಂದ ಆಗಮಿಸಿ, ಅಸಾಧಾರಣ ಎಸ್ -400 ಮತ್ತು ಮಿಗ್ -29 ಯುದ್ಧ ವಿಮಾನಗಳು ತಮ್ಮನ್ನು ಸುತ್ತುವರೆದಿರುವಾಗಲೇ ಉತ್ಕಟ ಭಾಷಣ ಮಾಡಿ ಯೋಧರ ಹುರಿದುಂಬಿಸಿದರೆ ಷರೀಫ್ ಅವರ ಪಸ್ರೂರ್ ಭೇಟಿ ಹತಾಶೆ, ಹಾನಿ ಮತ್ತು ಭ್ರಮೆಯಿಂದ ಕೂಡಿತ್ತು.

ಬುಧವಾರ ಪಸ್ರೂರ್‌ಗೆ ಷರೀಫ್ ಅವರ ಭೇಟಿಯು ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯುಪಡೆಯಿಂದ ಉಂಟಾದ ಹಾನಿಯ ವ್ಯಾಪ್ತಿಯನ್ನು ಮರೆಮಾಚಲು ಎಚ್ಚರಿಕೆಯಿಂದ ಕೈಗೊಂಡ ಪ್ರಯತ್ನವಾಗಿ ಕಂಡುಬಂತು. ಹಾನಿಗೊಳಗಾದ ವಾಯು ರಕ್ಷಣಾ ರಾಡಾರ್‌ನಿಂದ ಬಹಳ ದೂರದಲ್ಲಿರುವ ಸ್ಥಳದಿಂದ ಅವರು ಪಾಕಿಸ್ತಾನಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದರು. ಹೆಲಿಕಾಪ್ಟರ್‌ಗಳು ಗಣನೀಯ ದೂರದಲ್ಲಿ ಕಂಡು ಬಂದವು. ಇದು ಆ ಸ್ಥಳದಲ್ಲಿ ಲ್ಯಾಂಡಿಂಗ್ ಕಾರ್ಯಸಾಧ್ಯವಲ್ಲ ಎಂಬುದನ್ನು ಸೂಚಿಸಿತ್ತು. ಜೊತೆಗೆ ಷರೀಫ್‌ ವಿಮಾನವೂ ಪಾಕಿಸ್ತಾನದ ವಾಯುನೆಲೆಯಲ್ಲಿ ಇಳಿಯುವುದನ್ನು ತೋರಿಸುವ ಯಾವುದೇ ದೃಶ್ಯಗಳು ಇಲ್ಲದಿರುವುದನ್ನು ವೀಕ್ಷಕರು ಗಮನಿಸಿದ್ದಾರೆ. ಇದು ಭಾರತದ ನಿಖರ ದಾಳಿಯಿಂದ ಆ ತಾಣಕ್ಕೆ ಹಾನಿಯಾಗಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನಿ ಅಧಿಕಾರಿಗಳು ಬಿಡುಗಡೆ ಮಾಡಿದ ಏಕೈಕ ವೀಡಿಯೋದಲ್ಲಿ ಪಾಕ್ ಪ್ರಧಾನಿ ಷರೀಫ್ (Pakistan Prime Minister Shehbaz Sharif) ಜೀಪಿನಲ್ಲಿ ಪ್ರಯಾಣಿಸುವುದನ್ನು  ತೋರಿಸಲಾಗಿದೆ. ಇದು ವಾಯುನೆಲೆಯ ಧ್ವಂಸಗೊಂಡಿದೆ ಎಂಬುದನ್ನು ಸೂಚಿಸುತ್ತದೆ. ಇಷ್ಟೆಲ್ಲಾ ನಡೆದರೂ ಕೆಳಗೆ ಬಿದ್ದರೂ ಮೀಸೆ ಮಣ್ಣಗಿಲ್ಲ ಎಂಬುದನ್ನು ತೋರಿಸುವ ಪ್ರಯತ್ನದಲ್ಲಿ, ಷರೀಫ್ ಪಾಕಿಸ್ತಾನಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಆ ವೀಡಿಯೋದಲ್ಲಿ ಷರೀಫ್‌, ಹಿನ್ನೆಲೆಯಲ್ಲಿ ಯುದ್ಧಭೂಮಿಯಂತೆ ಕಾಣುವ  ಪ್ರದೇಶದಲ್ಲಿ ಭಾರತ-ಪಾಕಿಸ್ತಾನ ಸಂಘರ್ಷದಲ್ಲಿಯಾವುದೇ ಪಾತ್ರವನ್ನು ವಹಿಸದ ಯುದ್ಧ ದೃಶ್ಯಗಳು ಮತ್ತು ಪರಿಕರಗಳಿರುವ  ಫ್ಲೆಕ್ಸ್ ಶೀಟ್‌ನೊಂದಿಗೆ ಟ್ಯಾಂಕ್ ಮೇಲೆ ನಿಂತು ಮಾತನಾಡಿದರು.

ಇದಕ್ಕೆ ತದ್ವಿರುದ್ಧವಾಗಿ, ಪ್ರಧಾನಿ ಮೋದಿಯವರ ಭಾಷಣವು ಭಾರತದ ರಕ್ಷಣಾ ಶಕ್ತಿಯ ನಿಜವಾದ ಅಳ ಅಗಲ ಮತ್ತು ಕಾರ್ಯಾಚರಣೆಯನ್ನು ಒಳಗೊಂಡಿತ್ತು. ಹಮ್ನೇ ಉಂಕೆ ಘರ್ ಮೇ ಘುಸ್ಕೆ ಕುಚಲ್ ದಿಯಾ (ನಾವು ಅವರ ಮನೆಯೊಳಗೆ ನುಗ್ಗಿ ಹೊಡೆದೆವು) ಎಂದು ಪ್ರಧಾನಿ ಹೇಳಿದರು. ಜೊತೆಗೆ ಪಾಕಿಸ್ತಾನ ಮತ್ತು ಜಗತ್ತಿಗೆ ಜೋರಾಗಿ ಮತ್ತು ಸ್ಪಷ್ಟವಾದ ಸಂದೇಶವನ್ನು ಕಳುಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ವಯಸ್ಸಾಗದಿದ್ರೂ ವಯಸ್ಕರು ಲಿವ್‌ ಇನ್‌ನಲ್ಲಿ ಇರಬಹುದು: ಕೋರ್ಟ್‌
ಅಸ್ವಸ್ಥ ಖಲೀದಾ ಜಿಯಾ ಹೆಚ್ಚಿನ ಚಿಕಿತ್ಸೆಗೆ ನಾಳೆ ಲಂಡನ್‌ಗೆ