
ನವದೆಹಲಿ: ಏಪ್ರಿಲ್ 22ರಂಂದು ನಡೆದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯನ್ನು ನಾಲ್ವರು ಉಗ್ರರು ದಾಳಿ ನಡೆಸಿದ್ದು, ಇದರಲ್ಲಿ ಓರ್ವನನ್ನು ಸೇನೆ ಹೊಡೆದುರಳಿಸಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ. ಸೇನೆ ಹೊಡೆದುರಳಿಸಿರುವ ಉಗ್ರನ ಹೆಸರು ತಿಳಿದು ಬಂದಿಲ್ಲ. ಎರಡು ದಿನಗಳ ಹಿಂದೆಯಷ್ಟೇ ಗಡಿಯಲ್ಲಿ ಮೂವರು ಉಗ್ರರನ್ನು ಸದೆಬಡಿಯಲಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಭಾಗವಾಗಿರುವ ಶಂಕಿತ ಟ್ರಾಲ್ ನಿವಾಸಿ ಆಸಿಫ್ ಶೇಖ್ ಸಿಕ್ಕಿಬಿದ್ದಿದ್ದಾನೆ ಎಂದು ವರದಿಯಾಗಿದೆ. Kashmir Zone Police ಎಕ್ಸ್ ಖಾತೆಯಲ್ಲಿ ಅವಂತಿಪೋರಾದ ಟ್ರಾಲ್ ಪ್ರದೇಶದ ನಾಡರ್‌ನಲ್ಲಿ ಎನ್‌ಕೌಂಟರ್ ಆರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆಯಲ್ಲಿದೆ ಎಂದು ಮಾಹಿತಿ ನೀಡಿದೆ.
ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಮಟಾಷ್!
ಇಂದು ಪುಲ್ವಾಮಾ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ಅಪರಿಚಿತ ಶಸ್ತ್ರಧಾರಿ ಮೂವರು ಭಯೋತ್ಪಾದಕರು ಸತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ ಭದ್ರತಾ ಪಡೆಗಳೊಂದಿಗೆ ಗುಂಡಿನ ಚಕಮಕಿ ನಡೆದಿತ್ತು. ದಕ್ಷಿಣ ಕಾಶ್ಮೀರ ಜಿಲ್ಲೆಯ ಅವಂತಿಪೋರಾದ ನಾಡರ್ ಟ್ರಾಲ್ ಪ್ರದೇಶದಲ್ಲಿ ಭಯೋತ್ಪಾದಕರಿರುವ ನಿಖರ ಮಾಹಿತಿ ಆಧಾರದ ಮೇಲೆ ಭದ್ರತಾ ಪಡೆಗಳು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಯೋತ್ಪಾದಕರು ಪಡೆಗಳ ಮೇಲೆ ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆಯು ಎನ್‌ಕೌಂಟರ್ ಆಗಿ ಬದಲಾಯಿತು. ಈ ಗುಂಡಿನ ಚಕಮಕಿಯಲ್ಲಿ ಮೂವರು ಭಯೋತ್ಪಾದಕರು ಸತ್ತಿದ್ದಾರೆ. ಸತ್ತಿರುವ ಭಯೋತ್ಪಾದಕರ ಗುರುತಿನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಜಮ್ಮು ಕಾಶ್ಮೀರದ ಪೊಲೀಸರ ಪ್ರಕಾರ, ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ವರದಿಯಾಗಿದೆ.
ಮಂಗಳವಾರ ಉಗ್ರ ಶಾಹಿದ್ ಮಟಾಷ್
ಮಂಗಳವಾರ ಸೇನೆಯ ಎನ್‌ಕೌಂಟರ್‌ಗೆ ಬಲಿಯಾದ ಉಗ್ರನನ್ನು ಶಾಹಿದ್ ಕುಟೈ ಎಂದು ಗುರುತಿಸಲಾಗಿದೆ. ಚೋತಿಪುರ ಹೀರಾಪುರದ ನಿವಾಸಿಯಾಗಿದ್ದ ಶಾಹಿದ್, 2023ರಲ್ಲಿ ಲಷ್ಕರ್-ಇ-ತೈಬಾ ಸೇರ್ಪಡೆಯಾಗಿದ್ದನು. 2024 ಏಪ್ರಿಲ್ 8ರಂದು ದಾನಿಶ್ ರೆಸಾರ್ಟ್ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಇಬ್ಬರು ಜರ್ಮನಿ ಪ್ರಜೆಗಳು ಮತ್ತು ಓರ್ವ ಚಾಲಕ ಗಾಯಗೊಂಡಿದ್ದರು. ಈ ದಾಳಿಯಲ್ಲಿ ಹತನಾಗಿರುವ ಶಾಹಿದ್ ಭಾಗಿಯಾಗಿದ್ದನು ಎಂದು ಎಎನ್‌ಐ ವರದಿ ಮಾಡಿದೆ.
18ನೇ ಮೇ 2024ರಲ್ಲಿ ಶೋಪಿಯಾನ್‌ನ ಹೀರಾಪೋರದಲ್ಲಿ ಬಿಜೆಪಿಯ ಪಂಚಾಯ್ತಿ ಮುಖಂಡನನ್ನು ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿಯೂ ಶಾಹಿದ್ ಹೆಸರು ಕೇಳಿ ಬಂದಿತ್ತು. ಕೊಲೆಯಾದ ಪಂಚಾಯ್ತಿ ಸದಸ್ಯ ಐಜಾಜ್ ಅಹಮದ್ ಶೇಖ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಉಗ್ರರು ಗುಂಡಿನ ದಾಳಿ ನಡೆಸಿ ಐಜಾಜ್ ಅವರನ್ನು ಕೊಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ