ದೆಹಲಿಯ ಕನ್ನಡ ಸಂಘದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಎಲ್ಲಾದರು ಇರು; ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು ಎಂದು ಕುವೆಂಪು ಪದ್ಯದ ಸಾಲನ್ನು ಹಾಡುವ ಮೂಲಕ ಭಾಷಣ ಆರಂಭಿಸಿದರು.
ದೆಹಲಿ (ಫೆ.25): ದೆಹಲಿ ಕನ್ನಡ ಸಂಘದ 75ನೇ ವರ್ಷದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಎಲ್ಲಾದರು ಇರು; ಎಂತಾದರು ಇರು; ಎಂದೆಂದಿಗು ನೀ ಕನ್ನಡವಾಗಿರು ಎಂದು ಕುವೆಂಪು ಪದ್ಯದ ಸಾಲನ್ನು ಹಾಡುವ ಮೂಲಕ ಭಾಷಣ ಆರಂಭಿಸಿದರು.
ಭಾಷಣ ಮುಂದುವರೆಸಿದ ಮೋದಿ ಅವರು, ನಮ್ಮ ದೇಶವು 75 ವರ್ಷದ ಅಮೃತ ಮಹೊತ್ಸವದಲ್ಲಿದೆ. ಈ ಸಂಘದ ಭವಿಷ್ಯಕಂಡ ಎಲ್ಲಾ ಮಹನಿಯರಿಗೂ ನನ್ನ ನಮನ. 75 ವರ್ಷ ಸಂಘ ನಡೆಸೋದು ಅಷ್ಟು ಸುಲಭವಲ್ಲ. ಎಲ್ಲಾ ಸದಸ್ಯರಿಗೂ ನಾನು ಅಭಿನಂದಿಸುತ್ತೆನೆ. ಕರ್ನಾಟಕಟ ಹೊರತು ಪಡಿಸಿ ಭಾರತವನ್ನ ಊಹಿಸಲು ಸಾದ್ಯವಿಲ್ಲ. ಹುನುಮ ನಿರದೆ ರಾಮನೂ ಇಲ್ಲ- ರಾಮಾಯಣನೂ ಇಲ್ಲ. ಪುರಾಣ ಕಾಲದಿಂದಲೂ ಕರ್ನಾಟಕದ ಮಹತ್ವವಿದೆ. ಕರ್ನಾಟಕದಲ್ಲಿ ಸಮಾನತೆ ಸಾರಲು ಬಸವಣ್ಣ, ಡೊಹರ ಕಕ್ಕಯ್ಯ ಎದ್ದು ಬಂದರು ಎಂದು ಹೇಳಿದರು.
ಪಾಕ್ ಪ್ರಜೆಗಳಿಗೂ ಬೇಕಂತೆ ಮಾಸ್ಟರ್ ಪೀಸ್ ಮೋದಿ: ಹೇಗಿದೆ ಗೊತ್ತಾ ಪಾಕಿಸ್ತಾನದ ಅಂತರಂಗ?
ಕರ್ನಾಟಕಕ್ಕೆ 3 ವರ್ಷದಲ್ಲಿ 30 ಸಾವಿರ ಕೋಟಿ ರೂ. ಅನುದಾನ: ಮೊದಲು ಕರ್ನಾಟಕದಲ್ಲಿ ಸರ್ಕಾರ ಮಾಡಿದವರು ಅಲ್ಲಿಂದ ಹಣ ಹೊರಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈಗ ಇಲ್ಲಿನ ಹಣ ಜನರ ಅಭಿವೃದ್ಧಿಗೆ ಬಳಕೆಯಾಗುತ್ತಿದೆ. ರಾಜ್ಯದ ಅಭಿವೃದ್ಧಿಗೆ ಮೂರು ವರ್ಷದಲ್ಲಿ 30 ಸಾವಿರ ಕೋಟಿ ಬಿಜೆಪಿ ನೀಡಿದೆ. ಕಾಂಗ್ರೆಸ್ 10 ವರ್ಷದ ಅವಧಿಯಲ್ಲಿ ಕೇವಲ 11 ಸಾವಿರ ಕೋಟಿ ನೀಡಿತ್ತು. ಪ್ರತಿ ವರ್ಷ ನಮ್ಮ ಸರ್ಕಾರ ರಸ್ತೆಗೆ 5 ಸಾವಿರ ಕೋಟಿ ನೀಡುತ್ತಿದೆ. ಕಾಂಗ್ರೆಸ್ ಐದು ವರ್ಷಕ್ಕೆ 6 ಸಾವಿರ ಕೋಟಿ ನೀಡುತ್ತಿತ್ತು. ಭದ್ರಾ ಮೇಲ್ದಂಡೆ ಮೂಲಕ ಮಧ್ಯ ಕರ್ನಾಟಕದ ಅಭಿವೃದ್ಧಿ ಮಾಡುತ್ತಿದೆ. ಇದರಿಂದ ಕರ್ನಾಟಕದ ವಿಕಾಸ ಬದಲಾಗಲಿದೆ. ಮುಂದಿನ 25 ವರ್ಷ ಮಹತ್ವದಾಗಿದೆ. ಮತ್ತಷ್ಟು ಮಹತ್ವದ ಕೆಲಸಗಳನ್ನು ಮಾಡಬಹುದು. ಕಲಿಕೆ ಮತ್ತು ಕಲೆ ಎರಡನ್ನು ಅಭಿವೃದ್ಧಿ ಮಾಡಬೇಕು. ಕನ್ನಡ ಭಾಷೆ ಓದುವವರಿಂದ ರಿಡೀಂಗ್ ಹ್ಯಾಬಿಟ್ ಚೆನ್ನಾಗಿರುತ್ತದೆ. ಈ ಕೌಶಲ್ಯ ಬೇರೆ ಭಾಷೆಗಳಲ್ಲಿ ಇಲ್ಲ ಎಂದು ಹೇಳಿದರು.
100 ವರ್ಷದ ಸಂಭ್ರಮಕ್ಕೆ ಹೆಚ್ಚಿನ ಜವಾಬ್ದಾರಿ: ನ್ಯಾಷನಲ್ ವಾರ್ ಮೆಮೊರಿಯಲ್, ಕರ್ತವ್ಯ ಪಥ್, ಪ್ರಧಾನಮಂತ್ರಿ ಮ್ಯೂಸಿಯಂ ಎಲ್ಲವೂ ನೋಡಿಕೊಂಡು ಹೋಗಬೇಕು. ನೋಡಿದ ಮೇಲೆ ನೀವೂ ಗರ್ವ ಪಡಲಿದ್ದಿರಿ. ಈ ಕೆಲಸ ಮೊದಲೆ ಆಗಬೇಕಿತ್ತು ಎನ್ನಲಿದ್ದಿರಿ. 2047ಕ್ಕೆ ಭಾರತ ವಿಕಸಿತ ರಾಷ್ಟ್ರ ಆಗಲಿದೆ. ಆಗ ಕರ್ನಾಟಕ ಸಂಘ ಕೂಡ ತನ್ನ 100ನೇ ವರ್ಷಾಚರಣೆ ಮಾಡಲಿದೆ. ಹೀಗಾಗಿ ನಿಮ್ಮ ಜವಾಬ್ದಾರಿ ಹೆಚ್ಚಿದೆ ಎಂದು ಹೇಳಿದರು.
Belagavi: ಫೆ.27ರಂದು ಕುಂದಾನಗರಿಗೆ ಪ್ರಧಾನಿ ಮೋದಿ ಭೇಟಿ: ರೋಡ್ ಶೋಗೆ ಭರ್ಜರಿ ಸಿದ್ಧತೆ
ಕರ್ನಾಟಕದ ಸಿರಿಧಾನ್ಯಕ್ಕೆ ಜಾಗತಿಕ ಬೇಡಿಕೆ ಬಂದಿದೆ: ಸಿರಿಧಾನ್ಯದ ಪ್ರಮುಖ ಕೇಂದ್ರ ಕರ್ನಾಟಕವಾಗಿದೆ. ರಾಗಿ ಕರ್ನಾಟಕ ಸಂಸ್ಕೃತಿಯ ಭಾಗವಾಗಿದೆ. ಬಿ.ಎಸ್. ಯಡಿಯೂರಪ್ಪ ಅವರ ಕಾಲದಿಂದಲೂ ಕರ್ನಾಟಕದಲ್ಲಿ ಸಿರಿಧಾನ್ಯ ಪ್ರಚಾರ ಮಾಡಲು ಆರಂಭಿಸಿತ್ತು. ಈಗ ಇಡಿ ವಿಶ್ವದಲ್ಲಿ ಇದರ ಬೇಡಿಕೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಸಣ್ಣ ಸಣ್ಣ ರೈತರಿಗೆ ಲಾಭ ಸಿಗಲಿದೆ. ಕರ್ನಾಟಕದ ವಿಚಾರ ಪರಂಪರೆ ಮತ್ತು ಪ್ರಭಾವ ಎಂದೆಂದಿಗೂ ಅಮರವಾಗಿದೆ. ಬೆಳಗ್ಗೆ ಜರ್ಮನ್ ಕೌನ್ಸೆಲರ್ ಭೇಟಿ ಮಾಡಿದ್ದೆನು. ಅವರು ನಮ್ಮ ದೇಶದಲ್ಲಿ ಕರ್ನಾಟಕದ ಬೆಂಗಳೂರಿಗೆ ಹೋಗುತ್ತಿರುವುದಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಜಗತ್ತಿನ ಬಹುತೇಕರ ಆಯ್ಕೆ ಕರ್ನಾಟಕ ಆಗಿದೆ ಎಂದು ತಿಳಿಸಿದರು.
Addressing ‘Barisu Kannada Dimdimava’ cultural festival in Delhi. It celebrates the vivid culture of Karnataka. https://t.co/8PipVHg2U1
— Narendra Modi (@narendramodi)