
ಕೋಲ್ಕತಾ(ಫೆ.25): ಪಶ್ಚಿಮ ಬಂಗಳಾದಲ್ಲಿ ಮತ್ತೆ ಟಿಎಂಸಿ ಹಾಗೂ ಬಿಜೆಪಿ ನಡುವೆ ಘರ್ಷಣೆ ನಡೆದಿದೆ. ಕೇಂದ್ರದ ರಾಜ್ಯ ಸಚಿವ ನಿಶಿತ್ ಪ್ರಾಮಾಣಿಕ್ ಸಂಚರಿಸುತ್ತಿದ್ದ ಕಾರಿನ ಮೇಲೆ ಗೂಂಡಾಗಳು ದಾಳಿ ನಡೆಸಿದ್ದಾರೆ. ಕೊಚ್ ಬೆಹಾರದಲ್ಲಿ ಈ ಘಟನೆ ನಡೆದಿದೆ. ಈ ದಾಳಿಯಲ್ಲಿ ಕಾರಿನ ಗಾಜು ಪುಡಿ ಪುಡಿಯಾಗಿದೆ. ಈ ದಾಳಿಯನ್ನು ಪ್ರಶ್ನಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಬಡಿಗೆ ದೊಣ್ಣೆಗಳಿಂದ ಹೊಡೆದಾಟ ನಡೆದಿದೆ. ಕೊಚ್ ಬೆಹಾರದಲ್ಲಿ ಪರಿಸ್ಥಿತಿ ಉದ್ವಿಘ್ನಗೊಂಡಿದೆ. ಟಿಎಂಸಿ ಕಾರ್ಯಕರ್ತರು ನಿಲ್ಲಿಸಿದ್ದ ವಾಹನಗಳ ಮೇಲೂ ದಾಳಿ ನಡೆಸಿ ಜಖಂ ಗೊಳಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಕಾರ್ಯಕರ್ತರ ಗುಂಪುಗಳನ್ನು ಚದುರಿಸಿದ್ದಾರೆ. ಕೇಂದ್ರ ಸಚಿವರನ್ನು ಸುರಕ್ಷಿತವಾಗಿ ಕರೆತರಲು ಆಶ್ರುವಾಯು ಪ್ರಯೋಗಿಸಲಾಗಿದೆ.
ಈ ಘಟನೆ ಬಳಿಕ ಮಾತನಾಡಿದ ನಿಶಿತ್ ಪ್ರಾಮಾಣಿಕ್, ಕೇಂದ್ರ ಸಚಿವರ ಕಾರಿನ ಮೇಲೆ ಟಿಎಂಸಿ ಗೂಂಡಾಗಳು ದಾಳಿ ಮಾಡುತ್ತಿದ್ದಾರೆ. ಸಚಿವರಿಗೆ ಇಷ್ಟು ಭದ್ರತೆ ಇದ್ದರೂ ದಾಳಿ ಮಾಡಲಾಗಿದೆ. ಹೀಗಾದರೆ ಪಶ್ಟಿಮ ಬಂಗಾಳದಲ್ಲಿ ಸಾಮಾನ್ಯ ಪ್ರಜೆಯ ಪರಿಸ್ಥಿತಿ ಹೇಗಿದೆ? ಟಿಎಂಸಿ ಭ್ರಷ್ಟಾಚಾರ, ಗೂಂಡಾ ವರ್ತನೆ ಪ್ರಶ್ನಿಸಿದ ಕಾರ್ಯಕರ್ತರ ಸದ್ದಿಲ್ಲದಂತೆ ಮಾಡಲಾಗುತ್ತಿದೆ. ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಪ್ರಾಮಾಣಿಕ್ ಹೇಳಿದ್ದಾರೆ.
ಮೋದಿ ಕಾರ್ಯಕ್ರಮದಲ್ಲಿ ಹೈಡ್ರಾಮ, ಜೈಶ್ರೀರಾಮ್ ಘೋಷಣೆಯಿಂದ ವೇದಿಕೆಗೆ ಹತ್ತದೆ ದೀದಿ ಗರಂ!
ನಿಶಿತ್ ಪ್ರಮಾಣಿಕ್ ಕೂಚ್ ಬೆಹಾರದಲ್ಲಿನ ಸ್ಥಳೀಯ ಬಿಜೆಪಿ ಕಚೇರಿಗೆ ತೆರಳುವಾಗ ಈ ಘಟನೆ ನಡೆದಿದೆ. ಕೂಚ್ ಬೆಹಾರದಲ್ಲಿ ಬಿಜೆಪಿ ಸಂಘಟನೆ ಬಲಗೊಳಿಸಲು ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಇದು ತೃಣಮೂಲ ಕಾಂಗ್ರೆಸ್ ಪಕ್ಷದ ಕಣ್ಣು ಕೆಂಪಾಗಿಸಿದೆ. ಇದರ ಪರಿಣಾಮ ಪದೇ ಪದೇ ಹಗ್ಗಜಗ್ಗಾಟ ನಡೆಯುತ್ತಲೇ ಇದೆ. ಇದೀಗ ತಾರಕಕ್ಕೇರಿದೆ. ಬಿಎಸ್‌ಎಫ್ ಯೋಧರು ಗುಂಡಿಗೆ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಇದರ ಹಿಂದೆ ನಿಶಿತ್ ಪ್ರಮಾಣಿಕ್ ಕೈವಾಡವಿದೆ ಅನ್ನೋ ಆರೋಪವೂ ಇದೆ. ಈ ಎಲ್ಲಾ ಕಾರಣಕ್ಕೆ ನಿಶಿತ್ ಪ್ರಮಾಣಿಕ್ ಮೇಲೆ ಪದೇ ಪದೆ ದಾಳಿಗಳು ನಡೆಯುತ್ತಿದೆ.
ಪಶ್ಚಿಮ ಬಂಗಾಳ ಜನತೆಯಲ್ಲಿ ಕ್ಷಮೆ ಯಾಚಿಸಿದ ಪ್ರಧಾನಿ ಮೋದಿ, ಭಾವುಕರಾದ ಜನ!
ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಬಂಗಾಳದಲ್ಲಿ ಕಲ್ಲೆಸೆತ
ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆ, ಕಾರ್ಯಕರ್ತರ ಮೇಲಿನ ದಾಳಿಗೆ ಈಗಾಗಲೇ ಭಾರಿ ಪ್ರತಿಭಟನೆಗಳು ನಡೆದಿದೆ. ಇತ್ತೀಚೆಗೆ ದೇಶದ ಅತಿ ವೇಗದ ರೈಲಾದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಸೋಮವಾರ ಪಶ್ಚಿಮ ಬಂಗಾಳದ ಕುಮಾರ್‌ಗಂಜ್ ಸನಿಹ ಕಲ್ಲು ಎಸೆಯಲಾಗಿತ್ತು. ಇದರಿಂದ ಕಿಟಕಿ ಗಾಜು ಪುಡಿಯಾಗಿದ್ದು, ಒಬ್ಬ ಪ್ರಯಾಣಿಕನ ಮುಖಕ್ಕೆ ಗಾಯವಾಗಿದೆ. ಮಾಲ್ಡಾ ರೈಲು ನಿಲ್ದಾಣದಿಂದ 25 ಕಿ.ಮೀ. ದೂರದಲ್ಲಿ ಘಟನೆ ನಡೆದಿದ್ದು, ಕಿಡಿಗೇಡಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ