ಆ್ಯಂಬುಲೆನ್ಸ್‌ಗಾಗಿ ದಾರಿ ಬಿಟ್ಟ ಪ್ರಧಾನಿ ಮೋದಿ ಹಾಗೂ ಬೆಂಗಾವಲು ಪಡೆ!

By Suvarna NewsFirst Published Apr 12, 2021, 7:11 PM IST
Highlights

ಚುನಾವಣಾ ರ‍್ಯಾಲಿಗಾಗಿ ಪಶ್ಚಿಮ ಬಂಗಾಳದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಿರುಸಿನ ಪ್ರಚಾರದ ನಡುವೆ 2 ಆ್ಯಂಬುಲೆನ್ಸ್ ವಾಹನಕ್ಕೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಕೋಲ್ಕತಾ(ಏ.12): ಪಶ್ಚಿಮ ಬಂಗಾಳ ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಆರಂಭಿಕ 4 ಹಂತದ ಮತದಾನ ವ್ಯಾಪಕ ಹಿಂಸೆಗೂ ಕಾರಣವಾಗಿದೆ. ಇದೀಗ 5ನೇ ಹಂತದ ಮತದಾನಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ಚುನಾವಣೆ ಪ್ರಚಾರಕ್ಕಾಗಿ ರಸ್ತೆ ಮೂಲಕ ತೆರಳುತ್ತಿದ್ದ ಪ್ರಧಾನಿ ಮೋದಿ, ದಿಡೀರ್ 2 ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಪುಟಾಣಿಗಳಲ್ಲಿ ಬಾಯಲ್ಲಿ ದೀದಿ..ಓ..ದೀದಿ ಟ್ರೆಂಡ್: ಬಂಗಾಳ ಚುನಾವಣೆ ಟೆನ್ಶನ್ ನಡುವೆ ಫನ್ನಿ ವಿಡಿಯೋ!

ಮೋದಿ ಹಾಗೂ ಬೆಂಗಾವಲು ಪಡೆ ತೆರಳುತಿದ್ದ ವಿರುದ್ಧ ದಿಕ್ಕಿನಿಂದ ಅದೇ ದಾರಿಯಲ್ಲಿ  ಆ್ಯಂಬುಲೆನ್ಸ್ ರೋಗಿಯನ್ನು ಆಸ್ಪತ್ರೆ ಸಾಗಿಸುವ ಧಾವಂತಲ್ಲಿತ್ತು. ಇದನ್ನು ಅರಿತ ಮೋದಿ ತಮ್ಮ ಬೆಂಗಾವಲು ಪಡೆಗೆ ಸೂಚನೆ ನೀಡಿದ್ದಾರೆ. ಈ ಮೂಲಕ 2 ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ. 

ಬರ್ಧಮಾನ್‌ನಲ್ಲಿ ಆಯೋಜಿಸಿದ ಬಿಜೆಪಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಹರಿಹಾಯ್ದಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಭದ್ರತಾ ಪಡೆಗಳ ವಿರುದ್ಧ ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ನಾಯಕರು ಜನರನ್ನು ಪ್ರಚೋದಿಸುತ್ತಿದೆ. 4 ಹಂತದ ಮತದಾನದಲ್ಲಿ ಬಿಜೆಪಿ ಈಗಾಗಲೇ 100 ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ ಎಂದು ಮೋದಿ ಹೇಳಿದ್ದಾರೆ.

click me!