
ನವದೆಹಲಿ(ಏ.12): ದೇಶದಲ್ಲಿ ಪ್ರತಿ ದಿನ 1.5 ಲಕ್ಷಕ್ಕೂ ಹೆಚ್ಚಿನ ಕೊರೋನಾ ಪ್ರಕರಣಗಳು ದಾಖಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ, ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮಕ್ಕೆ ಸೂಚಿಸಿದ್ದಾರೆ. ಇತ್ತ ಆಯಾ ರಾಜ್ಯಗಳು ನೈಟ್ ಕರ್ಫ್ಯೂ ಸೇರಿದಂತೆ ಹಲವು ನಿಯಮ ಜಾರಿಗೆ ತಂದಿದೆ. ಇದೀಗ ವಿಮಾನಯಾನ ಸಚಿವಾಲಯ ವಿಮಾನ ಪ್ರಯಾಣದಲ್ಲಿ ನೀಡುವ ಆಹಾರವನ್ನು ಸ್ಥಗಿತಗೊಳಿಸಿದೆ.
ಮಾಸ್ಕ್ ಧರಿಸದಿದ್ದರೆ ವಿಮಾನದಿಂದ ಹೊರಕ್ಕೆ, ಮಾತು ಕೇಳದವರಿಗೆ ಆಜೀವ ನಿಷೇಧ!
ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಯಾಣಿಕರ ಸುರಕ್ಷತೆ ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಮಾಯಾನ ಸಚಿವಲಾಯ ಹೇಳಿದೆ. ದೇಶೀಯ ಹಾರಟ (ಡೊಮೆಸ್ಟಿಕ್)ದ ವಿಮಾನಗಳಲ್ಲಿ ಆಹಾರ ನೀಡುವಿಕೆ ರದ್ದು ಮಾಡಲಾಗಿದೆ.ಊಟ, ತಿಂಡಿ ಸೇರಿದಂತೆ ಆಹಾರ ನೀಡುವಿಕೆ ನಿಷೇಧಿಸಲಾಗಿದೆ. ಎರಡು ಗಂಟೆಗೂ ಕಡಿಮೆ ಅವಧಿ ಪ್ರಯಾಣವಿರುವ ವಿಮಾನಗಳಲ್ಲಿ ಈ ನಿಯಮ ಜಾರಿಯಾಗಲಿದೆ ಎಂದು ವಿಮಾಯಾನ ಸಚಿವಾಲಯ ಹೇಳಿದೆ.
ಖತಾರ್ ಏರ್ವೇಸ್ ವಿಶ್ವದ ಮೊದಲ ಸಂಪೂರ್ಣ ಕೋವಿಡ್ ವ್ಯಾಕ್ಸಿನೇಟೆಡ್ ವಿಮಾನ ಸೇವೆ!
ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 1,68,912 ಜನರಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿದೆ. ಕೊರೋನಾ ಹರಡದಂತೆ ತಡೆಯಲು ವಿಮಾಯಾನ ಸಚಿವಾಲ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ. ಈ ಮೂಲಕ ಸುರಕ್ಷಿತ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ. ಪ್ರಯಾಣಿಕರು ಕೊರೋನಾ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಜೊತೆಗೆ ಹೊಸ ಕ್ರಮಗಳಿಗೆ ಸಹಕರಿಸಬೇಕು ಎಂದು ಸಚಿವಾಲಯ ಕೋರಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ