
ನವದೆಹಲಿ(ಏ.12): ಎದೆನೋವು ಕಾಣಿಸಿಕೊಂಡು ಆಸ್ಪತ್ರೆ ದಾಖಲಾಗಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಮಾರ್ಚ್ 26 ರಂದು ಆಸ್ಪತ್ರೆ ದಾಖಲಾಗಿದ್ದ ರಾಮನಾಥ್ ಕೋವಿಂದ್, ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಗುಣಮುಖರಾಗಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸೇನಾಪಡೆ ಆಸ್ಪತ್ರೆಗೆ 20 ಲಕ್ಷ ರೂ. ದೇಣಿಗೆ ಕೊಟ್ಟ ರಾಷ್ಟ್ರಪತಿ!
ಚಿಕಿತ್ಸೆ ನೀಡಿದ ಆಸ್ಪತ್ರೆ ವೈದ್ಯರು, ಸಿಬ್ಬಂಧಿ ವರ್ಗ ಹಾಗೂ ಚೇತರಿಕೆಗೆ ಹಾರೈಸಿದ ಎಲ್ಲರಿಗೂ ರಾಮನಾಥ್ ಕೋವಿಂದ್ ಧನ್ಯವಾದ ಹೇಳಿದ್ದಾರೆ. ಶಸ್ತ್ರಚಿಕಿತ್ಸೆ ಹಾಗೂ ಚಿಕಿತ್ಸೆಯಿಂದ ಗುಣಮುಖರಾಗಿ ರಾಷ್ಟ್ರಪತಿ ಭವನಕ್ಕೆ ಮರಳಿದ್ದೇನೆ. ನನ್ನ ಚೇತರಿಕೆಗೆ ಹಾರೈಸಿದ, ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು. ಏಮ್ಸ್ ಆಸ್ಪತ್ರೆ ಹಾಗೂ ಸೇನಾ ಆರ್‌ಆರ್ ಆಸ್ಪತ್ರೆ ವೈದ್ಯರು, ಶುಶ್ರೂಷಾ ಸಿಬ್ಬಂದಿ ನೀಡಿದ ಆರೈಕೆ ಆಸಾಧಾರಣ. ಎಲ್ಲರಿಗೂ ಕೃತಕ್ಷನಾಗಿದ್ದೇನೆ. ಸಂತೋಷದಿಂದ ಮನೆಗೆ ತೆರಳುತ್ತಿದ್ದೇನೆ ಎಂದು ರಾಮನಾಥ್ ಕೋವಿಂದ್ ತಮ್ಮ ಅಧೀಕೃತ ರಾಷ್ಟ್ರಪತಿ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್‌ಗೆ ಶೀಘ್ರದಲ್ಲೇ ಬೈಪಾಸ್ ಸರ್ಜರಿ!
ಎದೆನೋವು ಕಾಣಿಸಿಕೊಂಡ ಕಾರಣ ಮಾರ್ಚ್ 26 ರಂದು ರಾಮನಾಥ್ ಕೋವಿಂದ್ ಅವರನ್ನು ದೆಹಲಿಯ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಂದ್ ಅವರಿಗೆ ಬೈ ಪಾಸ್ ಸರ್ಜರಿ ಅವಶ್ಯಕತೆ ಇದ್ದ ಕಾರಣ ಸೇನಾ ಆಸ್ಪತ್ರೆಯಿಂದ ದೆಹಲಿಯ ಏಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಕಳೆದ 20 ದಿನಗಳಿಂದ ಚಿಕಿತ್ಸೆ ಪಡೆದ ರಾಮನಾಥ್ ಕೋವಿಂದ್ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ