ಕೊರೋನಾ ಬಳಿಕ ಮೋದಿ ಮೊದಲ ವಿದೇಶ ಪ್ರವಾಸ: ಮಾ.26ಕ್ಕೆ ಬಾಂಗ್ಲಾಗೆ ಭೇಟಿ!

By Suvarna NewsFirst Published Mar 8, 2021, 6:04 PM IST
Highlights

ಕೊರೋನಾ ವಕ್ಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಯಾವುದೇ ವಿದೇಶ ಪ್ರವಾಸ ಕೈಗೊಂಡಿಲ್ಲ. ನಿರ್ಬಂಧ, ಲಾಕ್‌ಡೌನ್ ಸೇರಿದಂತೆ ಹಲವು ಕಾರಣಗಳಿಂದ ವಿದೇಶ ಪ್ರವಾಸ ಸ್ಥಗಿತಗೊಂಡಿತ್ತು. ಇದೀಗ 15 ತಿಂಗಳ ಬಳಿಕ ಮೋದಿ, ಮೊದಲ ವಿದೇಶ ಪ್ರವಾಸಕ್ಕೆ ಸಜ್ಜಾಗಿದ್ದಾರೆ. 

ನವದೆಹಲಿ(ಮಾ.8): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಯಾವುದೇ ದೇಶಕ್ಕೆ ಪ್ರಯಾಣ ಮಾಡಿಲ್ಲ. ಇದೀಗ 15 ತಿಂಗಳ ಬಳಿಕ ಮೋದಿ ನೆರೆಯ ಬಾಂಗ್ಲಾದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಮಾರ್ಚ್ 26 ರಂದು ಮೋದಿ, 50ನೇ ಸ್ವಾತಂತ್ರ್ಯದ ಸಂಭ್ರಮಾಚರಣೆಗೆ ಮೋದಿ ಭೇಟಿ ನೀಡುತ್ತಿದ್ದಾರೆ. 

ಮೋದಿಗೆ CERAWeek ಪ್ರಶಸ್ತಿ: ಇದು ಸಮಸ್ತ ಭಾರತೀಯರಿಗೆ ಸಂದ ಅವಾರ್ಡ್ ಎಂದ ಪ್ರಧಾನಿ!

ಮಾರ್ಚ್ 26, 1971ರಲ್ಲಿ ಬಾಂಗ್ಲಾದೇಶ ಪಾಕಿಸ್ತಾನದಿಂದ ವಿಮೋಚನೆಗೊಂಡಿತ್ತು. ಈ ವಿಮೋಚನೆಯಲ್ಲಿ ಬಾಂಗ್ಲಾದೇಶಕ್ಕೆ ಭಾರತ ನೆರವು ನೀಡಿತ್ತು. ಭಾರತದ ನೆರವಿನಿಂದ ಬಾಂಗ್ಲಾದೇಶ ಸೇನೆಮುಂದೆ ಪಾಕಿಸ್ತಾನ ಶರಣಾಗಿತ್ತು. ಡಿಸೆಂಬರ್ 16, 1971ರಲ್ಲಿ ಪಾಕಿಸ್ತಾನ ಶರಣಾಗಿತ್ತು. 

ಮಾರ್ಚ್ 26 ರಿಂದ ಬಾಂಗ್ಲಾದೇಶ ಸ್ವತಂತ್ರ ದೇಶವಾಯಿತು. ಇದೀಗ ಮಾರ್ಚ್ 26, 2021ಕ್ಕೆ 50ನೇ ವರ್ಷಾಚರಣೆಗೆ ಬಾಂಗ್ಲಾದೇಶ ಪ್ರದಾನಿ ಶೇಕ್ ಹಸಿನಾ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯ ಅತಿಥಿಯಾಗಿ ಆಹ್ವಾನ ನೀಡಿದ್ದಾರೆ. ಹೀಗಾಗಿ ಮೋದಿ 2 ದಿನದ ಢಾಕಾ ಪ್ರವಾಸ ಕೈಗೊಳ್ಳಲಿದ್ದಾರೆ.

ಮೋದಿ 9 ನಿರ್ಧಾರದಿಂದ ಸೋಂಕು ನಿಯಂತ್ರಣ: ಜಾಗತಿಕ ಕುತೂಹಲಕ್ಕೆ ಅಮೆರಿಕದ ವಿಜ್ಞಾನಿಯ ಉತ್ತರ!

2020ರ ನವೆಂಬರ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಯಾವುದೇ ದೇಶಕ್ಕೆ ಪ್ರಯಾಣ ಮಾಡಿಲ್ಲ. ಡಿಸೆಂಬರ್ ತಿಂಗಳಲ್ಲೇ ಚೀನಾದಲ್ಲಿ ಕೊರೋನಾ ಅಬ್ಬರ ಆರಂಭಗೊಂಡರೆ, 2020ರ ಆರಂಭದಿಂದ ಭಾರತ ಸೇರಿದಂತೆ ಇತರ ದೇಶಗಳಲ್ಲಿ ಕೊರೋನಾ ಭೀತಿ ಆವರಿಸಿಕೊಂಡಿತ್ತು. ಹೀಗಾಗಿ ಮೋದಿ ಪ್ರವಾಸ ಸ್ಥಗಿತಗೊಂಡಿತ್ತು. ಇನ್ನು ಅಂತಾರಾಷ್ಟ್ರೀಯ ಸಮ್ಮೇಳನಗಳು ವಿಡಿಯೋ ಕಾನ್ಫೆರನ್ಸ್ ಮೂಲಕ ನಡೆಯುತ್ತಿದೆ.

click me!