ಬಾಟ್ಲಾ ಹೌಸ್ ಎನ್‌ಕೌಂಟರ್: ಉಗ್ರ ಆರಿಝ್ ಖಾನ್ ದೋಷಿ, ಏನಿದು ಪ್ರಕರಣ!

By Suvarna NewsFirst Published Mar 8, 2021, 5:31 PM IST
Highlights

ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರ ಆರಿಝ್ ಖಾನ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. 2008ರ ಬಾಟ್ಲಾ ಹೌಸ್ ಪ್ರಕರಣ ಹಾಗೂ ಕೋರ್ಟ್ ತೀರ್ಪಿನ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ನವದೆಹಲಿ(ಮಾ.07):  ಬಾಟ್ಲಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಹತ್ಯೆ ಹಿಂದೆ ಇಂಡಿಯನ್ ಮುಜಾಹಿದ್ದೀನ್ ಉಗ್ರ ಆರಿಝ್ ಖಾನ್ ಹಾಗೂ ಆತನ ಸಹಚರರು ಇದ್ದಾರೆ ಅನ್ನೋದು ಸಾಬೀತಾಗಿದೆ. 2008ರಿಂದ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಇದೀಗ ಇಂಡಿಯನ್ ಮುಜಾಹಿದ್ದೀನ್ ಉಗ್ರ ಆರಿಝ್ ಖಾನ್ ತಪ್ಪಿತಸ್ಥ ಎಂದು ದೆಹಲಿ ಕೋರ್ಟ್ ತೀರ್ಪು ನೀಡಿದೆ.

ಸತತ 18 ಗಂಟೆಗಳ ಗನ್‌ಫೈಟ್; ಮೂವರ ಉಗ್ರರ ಹೆಡೆಮುರಿ ಕಟ್ಟಿದ ಭಾರತೀಯ ಸೇನೆ!

ಸಾಕ್ಷಾಧ್ಯಾರಗಳನ್ನು ಪರಿಗಣಿಸಿ ಬಾಲ್ಟಾ ಹೌಸ್ ಎನ್‌ಕೌಂಟರ್ ಪ್ರಕರಣದಲ್ಲಿ ಆರಿಝ್ ಖಾನ್ ದೋಷಿ ಎಂದು ಕೋರ್ಟ್ ತೀರ್ಪು ನೀಡುತ್ತಿದೆ. ಶಿಕ್ಷೆಯ ಪ್ರಮಾಣವನ್ನು ಮಾರ್ಚ್ 15 ರಂದು ಪ್ರಕಟಿಸುವುದಾಗಿ ಕೋರ್ಟ್ ಹೇಳಿದೆ. 

ಬಾಟ್ಲಾ ಹೌಸ್ ಪ್ರಕರಣ:
ಇದು 2008ರ ಪ್ರಕರಣ. ಶಾಂತವಾಗಿದ್ದ ದೆಹಲಿಯ ಇಂಡಿಯಾ ಗೇಟ್, ಕರೋಲ್ ಬಾಗ್ ಹಾಗೂ ಕನೌಟ್ ಬಳಿ ಸರಣಿ ಬಾಂಬ್ ಸ್ಫೋಟ ಸಂಭವಿಸಿತ್ತು. ಸೆಪ್ಟೆಂಬರ್ 13, 2008ರಂದು ನಡೆದ ಈ ಬಾಂಬ್ ಸ್ಫೋಟದಲ್ಲಿ 26 ಮಂದಿ ಸಾವನ್ನಪ್ಪಿದ್ದು 133ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. 

26/11 ದಾಳಿ ಯತ್ನಕ್ಕೆ ಮೌಲಾನಾ ಅಜರ್‌ ಸೋದರನೇ ರೂವಾರಿ?.

ಬಾಂಬ್ ಸ್ಫೋಟದಿಂದ ದೆಹಲಿ ಸೇರಿದಂತೆ ದೇಶದ ಎಲ್ಲಾ ನಗರಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಗಡಿ ರಸ್ತೆಗಳು ಸೇರಿದಂತೆ ದೇಶದ ಹಲೆವೆಡೆ ಪೊಲೀಸರು ನಾಕಾಬಂಧಿ ಹಾಕಿ ತಪಾಸಣೆ ಆರಂಭಿಸಿದ್ದರು. ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿತ್ತು. ಬಾಂಬ್ ಸ್ಫೋಟ ನಡದೆ ಒಂದು ವಾರದ ಬಳಿಕ ಅಂದರೆ, ಸೆಪ್ಟೆಂಬರ್ 19, 2008ರಲ್ಲಿ ಜಾಮಿಯಾನಗರದ ಬಾಟ್ಲಾ ಹೌಸ್ ಅಪಾರ್ಟಮೆಂಟ್ ಮನೆಯೊಂದರಲ್ಲಿ ಸರಣಿ ಬಾಂಬ್ ಸ್ಫೋಟದ ಆರೋಪಿಗಳು ಅಡಗಿದ್ದಾರೆ ಅನ್ನೋ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.

ಬಾಟ್ಲಾ ಹೌಸ್‌ಗೆ ಮುತ್ತಿಗೆ ಹಾಕಿದ ದೆಹಲಿ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಪ್ರತಿಯಾಗಿ ಉಗ್ರರು ಕೂಡ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಬ್ಬರು ಉಗ್ರರು ಹತರಾದರು. ಆದರೆ ಎನ್‌ಕೌಂಟರ್ ನಡೆಸಿದ ಇನ್ಸ್‌ಪೆಕ್ಟರ್ ಮೋಹನ್ ಚಂದ್ ಶರ್ಮಾ ಉಗ್ರರ ದಾಳಿಗೆ ಹುತಾತ್ಮರಾದರು. ಇನ್ನಿಬ್ಬರು ಪೊಲೀಸ್ ಪೇದೆಗಳು ತೀವ್ರವಾಗಿ ಗಾಯಗೊಂಡರು.ಇನ್ನುಳಿದ ಮೂವರು ಉಗ್ರರು ತಪ್ಪಿಸಿಕೊಂಡಿದ್ದರು. 

ಜಮ್ಮು ಹೆದ್ದಾರಿಯಲ್ಲಿ ಉಗ್ರರ ಮೇಲೆ ಗುಂಡಿನ ಸುರಿಮಳೆ; ಮೈ ಜುಮ್ಮೆನಿಸುವ ವಿಡಿಯೋ!

ಎನ್‌ಕೌಂಟರ್ ನಕಲಿ ಎಂದಿದ್ದ ಕಾಂಗ್ರೆಸ್:
ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದ ಸಂದರ್ಭದಲ್ಲೇ ಈ ದಾಳಿ ನಡೆದಿತ್ತು. ಇನ್ನು ಎನ್‌ಕೌಂಟರ್ ಬಳಿಕ ಕಾಂಗ್ರೆಸ್ ನಾಯಕ ದಿಗ್ವಿಯ ಸಿಂಗ್ ಇದು ನಕಲಿ ಎನ್‌ಕೌಂಟರ್ ಎಂದಿದ್ದರು. ಇವರ ಜೊತೆಕೆ ಕೆಲ ನಾಯಕರು, ಸಮಾಜವಾದಿ ಪಕ್ಷ ಕೂಡ ಎನ್‌ಕೌಂಟರ್ ಕುರಿತು ತನಿಖೆಯಾಗಬೇಕು ಎಂದು ಆಗ್ರಹಿಸಿದ್ದರು.

ರಾಷ್ಟ್ರೀಯ ಮಾನವ ಹಕ್ಕು ಆಯೋಗ ತನಿಖೆ ನಡೆಸಿ ಇದು ಅಸಲಿ ಎನ್‌ಕೌಂಟರ್. ಉಗ್ರರ ಹೆಡೆಮುರಿ ಕಟ್ಟಲು ದೆಹಲಿ ಪೊಲೀಸರು ನಡೆಸಿದ ಎನ್‌ಕೌಂಟರ್ ಎಂದು ವರದಿ ನೀಡಿತ್ತು. 2009ರಲ್ಲಿ ಕೋರ್ಟ್ ದೆಹಲಿ ಪೊಲೀಸರಿಗೆ ಕ್ಲೀನ್ ಚಿಟ್ ನೀಡಿತ್ತು.

click me!