Panchayati Raj Day ಎಪ್ರಿಲ್ 24 ರಂದು ಕರ್ನಾಟಕದ ಗ್ರಾಮ ಪಂಚಾಯ್ತಿಗೆ ಪ್ರಧಾನಿ ಮೋದಿ ಭೇಟಿ!

Published : Feb 20, 2022, 04:04 AM IST
Panchayati Raj Day ಎಪ್ರಿಲ್ 24 ರಂದು ಕರ್ನಾಟಕದ ಗ್ರಾಮ ಪಂಚಾಯ್ತಿಗೆ ಪ್ರಧಾನಿ ಮೋದಿ ಭೇಟಿ!

ಸಾರಾಂಶ

ಪಂಚಾಯತ್‌ರಾಜ್‌ ದಿವಸ್‌ ಕಾರ್ಯಕ್ರಮಕ್ಕೆ ಮೋದಿ ಆಗಮನ ಶಿವಮೊಗ್ಗ, ವಿಜಯನಗರ, ಕಲಬುರಗಿ ಗ್ರಾ.ಪಂ ಪೈಕಿ 1ಕ್ಕೆ ಭೇಟಿ  2.5 ಲಕ್ಷ ಗ್ರಾಪಂಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ  

ಬೆಂಗಳೂರು(ಫೆ.20): ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿವಸ್‌(National Panchayati Raj Day) ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ(PM Narendra Modi) ಅವರು ಏ.24ರಂದು ರಾಜ್ಯದ ಗ್ರಾಮಪಂಚಾಯ್ತಿಯೊಂದಕ್ಕೆ ಭೇಟಿ ನೀಡಲಿದ್ದಾರೆ. ಈ ಸಂಬಂಧ ಈಗಾಗಲೇ ಶಿವಮೊಗ್ಗದ ಹೊಳಲೂರು, ವಿಜಯನಗರ ಜಿಲ್ಲೆಯ ಮಲಪನಗುಡಿ ಮತ್ತು ಕಲಬುರಗಿ ಜಿಲ್ಲೆಯ ಭೀಮಳ್ಳಿ ಗ್ರಾಪಂಗಳನ್ನು ಅಂತಿಮಗೊಳಿಸಲಾಗಿದ್ದು, ಇವುಗಳಲ್ಲಿ ಒಂದು ಗ್ರಾಪಂಗೆ ಪ್ರಧಾನಿ ಭೇಟಿಯ ಅವಕಾಶ ಸಿಗಲಿದೆ. 

ಪ್ರಧಾನಿ ಮೋದಿ ಅವರು 2010ರಿಂದ ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿವಸ್‌ ಕಾರ‍್ಯಕ್ರಮದ ಭಾಗವಾಗಿ ದೇಶದ ಯಾವುದಾದರೂ ಒಂದು ಗ್ರಾಪಂನ ಕಾರ‍್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಈ ಬಾರಿ ಅವರು ಕರ್ನಾಟಕದ(Karnataka) ಗ್ರಾಪಂವೊಂದಕ್ಕೆ ಭೇಟಿ ನೀಡಲಿದ್ದಾರೆ. ಅಂದು ಅವರು ಗ್ರಾಮಸಭೆಯಲ್ಲಿ ಭಾಗವಹಿಸಿ ದೇಶದ 2.5 ಲಕ್ಷ ಗ್ರಾಪಂಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂಬಂಧ ಈಗಾಗಲೇ ಮೂರೂ ಗ್ರಾಪಂಗಳಿಂದ ಅಗತ್ಯ ಮಾಹಿತಿ ಸಂಗ್ರಹಿಸುವ ಕೆಲಸ ಆರಂಭವಾಗಿದೆ.

UP Election : ಸಂಕೇತ ಭಾಷೆಯನ್ನು ಬಳಸಿ ಅಭಿಯಾನ ನಡೆಸಿದ ಮೊದಲ ಪಕ್ಷ ಬಿಜೆಪಿ!

ಈ ವಿಚಾರವನ್ನು ಸ್ವತಃ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಅವರೇ ಖಚಿತಪಡಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಹೊಳಲೂರು, ವಿಜಯನಗರ ಜಿಲ್ಲೆಯ ಮಲಪನಗುಡಿ ಮತ್ತು ಕಲಬುರಗಿ ಜಿಲ್ಲೆಯ ಭೀಮಳ್ಳಿ ಗ್ರಾಪಂಗಳನ್ನು ಪ್ರಧಾನಿ ವೆ.ೂೕದಿ ಭೇಟಿಗೆ ಈಗಾಗಲೇ ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ ಬಹುತೇಕ ಶಿವಮೊಗ್ಗದ ಹೊಳಲೂರು ಗ್ರಾಪಂ ಪ್ರಧಾನಿ ಭೇಟಿಗಾಗಿ ಅಂತಿಮಗೊಳ್ಳುವ ನಿರೀಕ್ಷೆ ಇದೆ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಂದು ಅವರು ಗ್ರಾಮಸಭೆಯಲ್ಲಿ ಭಾಗವಹಿಸಿ ದೇಶದ 2.5 ಲಕ್ಷ ಗ್ರಾಪಂಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂಬಂಧ ಈಗಾಗಲೇ ಮೂರೂ ಗ್ರಾಪಂಗಳಿಂದ ಅಗತ್ಯ ಮಾಹಿತಿ ಸಂಗ್ರಹಿಸುವ ಕೆಲಸ ಆರಂಭವಾಗಿದೆ. ಗ್ರಾಪಂಗಳಲ್ಲಿ ಮೂಲ ಸೌಕರ್ಯಗಳ ಒದಗಿಸುವಿಕೆ ಪರಿಗಣಿಸಿ ಅದರಲ್ಲಿ ತೃಪ್ತಿದಾಯಕವಾಗಿರುವ ಗ್ರಾಂಪಂಗಳನ್ನು ಮೋದಿ ಭೇಟಿಗಾಗಿ ಆಯ್ಕೆ ಮಾಡಲಾಗಿದೆ. ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಮಾಚ್‌ರ್‍ ಮತ್ತು ಏಪ್ರಿಲ್‌ ತಿಂಗಳಲ್ಲಿ ಒಟ್ಟು 3 ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

Kisan Drones: ಕೃಷಿ ಕೆಲಸಕ್ಕೂ ಡ್ರೋನ್, 100 ಕಿಸಾನ್‌ ಡ್ರೋನ್‌ಗೆ ಪ್ರಧಾನಿ ಮೋದಿ ಚಾಲನೆ

ಪಂಚಾಯತ್‌ರಾಜ್‌ ಸಂಕಲ್ಪ:
ಈ ಬಾರಿಯ ಪಂಚಾಯತ್‌ರಾಜ್‌ ದಿವಸ್‌ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದ ಗ್ರಾಪಂನಲ್ಲಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ಮೋದಿ ಅವರು ಗ್ರಾಮಸಭೆಯಲ್ಲಿ ಭಾಗವಹಿಸಿ ದೇಶದ 2.5 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಿ ಪ್ರವಾಸಕ್ಕಾಗಿ ಈಗಾಗಲೇ ಪಂಚಾಯತ್‌ರಾಜ್‌ ಆಯುಕ್ತಾಲಯದಿಂದ ಜಿಲ್ಲಾಡಳಿತಕ್ಕೆ ಪತ್ರ ಬಂದಿದ್ದು, ಜಿಲ್ಲೆಯ ಒಂದು ಗ್ರಾಪಂ ಆಯ್ಕೆ ಮಾಡಿ ಅಗತ್ಯ ಮಾಹಿತಿ ಒದಗಿಸುವಂತೆ ಸೂಚಿಸಲಾಗಿದೆ.

ರಾಜ್ಯದಲ್ಲಿ ಪ್ರಧಾನಿ ಪ್ರವಾಸಕ್ಕಾಗಿ ಉತ್ತಮ ವ್ಯವಸ್ಥೆಗಳಿರುವ ಒಟ್ಟು ಮೂರು ಗ್ರಾಪಂಗಳನ್ನು ಆಯ್ಕೆ ಮಾಡಿಕೊಂಡು ಅವುಗಳ ವರದಿಗಳನ್ನು ಪಂಚಾಯತ್‌ರಾಜ್‌ ಆಯುಕ್ತಾಲಯ ಪಡೆದುಕೊಳ್ಳುತ್ತಿದೆ. ಈಗಾಗಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೇಂದ್ರದ ಅಧಿಕಾರಿಗಳು ಈ ಮೂರು ಗ್ರಾಪಂಗಳ ಮಾಹಿತಿಗಳನ್ನು ತರಿಸಿಕೊಂಡಿದ್ದಾರೆ.

ಆಯ್ಕೆ ಮಾನದಂಡ:
ಗ್ರಾಪಂಗಳಲ್ಲಿ ಮೂಲಭೂತ ಸೌಕರ್ಯಗಳ ಒದಗಿಸುವಿಕೆ ಪರಿಗಣಿಸಿ ಅದರಲ್ಲಿ ತೃಪ್ತಿದಾಯಕವಾಗಿರುವ ಗ್ರಾಂಪಂಗಳಲ್ಲಿ ಆಯ್ಕೆ ಮಾಡಲಾಗಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಕೂಡ ವಿಡಿಯೋ ಕಾನ್ಫರೆನ್ಸ್‌ಗಳನ್ನು ನಡೆಸಿ ರಾಜ್ಯದ ಪಂಚಾಯಿತಿಯೊಂದರಲ್ಲಿ ಪ್ರಧಾನಿ ಪಂಚಾಯತ್‌ ರಾಜ್‌ ದಿವಸ್‌ ಆಚರಿಸುವುದನ್ನು ಖಚಿತಪಡಿಸಿದ್ದಾರೆ. ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಮಾಚ್‌ರ್‍ ಮತ್ತು ಏಪ್ರಿಲ್‌ ತಿಂಗಳಲ್ಲಿ ಒಟ್ಟು ಮೂರು ಬಾರಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ವಿಜಯನಗರ ಜಿಲ್ಲೆಯ ಮಲಪನಗುಡಿ ಗ್ರಾಪಂನಲ್ಲಿ ಘನ ತ್ಯಾಜ್ಯ ನಿರ್ವಹಣೆ ಮಾಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಮೂಲಭೂತ ಸೌಕರ್ಯಗಳು ಉತ್ತಮವಾಗಿವೆ. ಪ್ರಧಾನಿ ಕಾರ್ಯಾಲಯ ಮಲಪನಗುಡಿ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಈಗಾಗಲೇ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮತ್ತು ಜಿಪಂ ಸಿಇಒ ನೇತೃತ್ವದಲ್ಲಿ ಸಭೆಗಳನ್ನು ನಡೆಸಲಾಗಿದೆ.

ಮಲಪನಗುಡಿ ಗ್ರಾಪಂ ವ್ಯಾಪ್ತಿಯ ವಿವಿಧ ಇಲಾಖೆಗಳ ಕೆಲಸಗಳು, ಕೃಷಿ, ತೋಟಗಾರಿಕೆ ಇಲಾಖೆಗಳ ಕೆಲಸದ ಮಾಹಿತಿ, ಜನಸಂಖ್ಯೆ, ವಸತಿ ಯೋಜನೆಗಳಲ್ಲಿ ಫಲಾನುಭವಿಗಳು ಲಾಭ ಪಡೆದಿರುವ ಮಾಹಿತಿ, ಸ್ತ್ರೀಶಕ್ತಿ ಸಂಘಗಳ ಬೆಳವಣಿಗೆ ಕುರಿತು ಪಂಚಾಯತ್‌ರಾಜ್‌ ಇಲಾಖೆಗೆ ಮಾಹಿತಿ ನೀಡಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..