ಕೇರಳ(ಫೆ.19): ವಿವಾಹ ವಿಚ್ಚೇದನ(divorce) ಕುರಿತು ಹಲವು ತೀರ್ಪುಗಳು ಆದೇಶಗಳು ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ವಿಫಲವಾದ ದಾಂಪತ್ಯದಲ್ಲಿ(Failed Marriage) ವಿಚ್ಚೇದನ ನಿರಾಕರಿಸುವುದು ಕೌರ್ಯಕ್ಕೆ(cruelty) ಸಮಾನ ಎಂದು ಕೇರಳ ಹೈಕೋರ್ಟ್(Kerala High Court) ವಿವಾಹ ವಿಚ್ಚೇದನ ಕುರಿತು ಮಹತ್ವದ ತೀರ್ಪು ನೀಡಿದೆ. ಇಷ್ಟೇ ಅಲ್ಲ ಸಂಬಂಧ ಮುರಿದು ಬಿದ್ದ ಮೇಲೆ ಜೊತೆಯಾಗಿ ಹೋಗಲು ಒತ್ತಾಯಿಸಬಾರದು ಎಂದು ಹೈಕೋರ್ಟ್ ಹೇಳಿದೆ.
ಕೇರಳ ಹೈಕೋರ್ಟ್ ವಿಭಾಗೀಯ ಪೀಠದ ಜಸ್ಟೀಸ್ ಎ ಮುಹಮ್ಮದ್ ಮುಸ್ತಾಖ್ ಈ ಮಹತ್ವದ ತೀರ್ಪು ನೀಡಿದ್ದಾರೆ. ದಂಪತಿಗಳು ವಿಚ್ಚೇದ ಕುರಿತು ನೆಡುಮಂಗಾಡ್ ಕೌಟುಂಬಿಕ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಪತ್ನಿಯ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.
Married Life: ಗಂಡ-ಹೆಂಡ್ತಿ ಮಧ್ಯೆ ಯಾವಾಗ್ಲೂ ಜಗಳಾನ ? ಖುಷಿಯಾಗಿರಲು ಹೀಗೆ ಮಾಡಿ
ದಾಂಪತ್ಯ ಸಂಪೂರ್ಣವಾಗಿ ಮುರಿದು ಬಿದ್ದು, ಇನ್ನು ಜೊತೆಯಾಗಿ ಹೋಗಲು ಸಾಧ್ಯವಿಲ್ಲ ಎನ್ನು ಪರಿಸ್ಥಿತಿ ಇದ್ದರೆ, ದಂಪತಿಗಳಲ್ಲಿ ಯಾರಾದರೊಬ್ಬರು ವಿಚ್ಚೇದನ ನಿರಾಕರಿಸಿದರೆ ಅದು ಕ್ರೌರ್ಯಕ್ಕೆ ಸಮಾನ ಎಂದು ಹೈಕೋರ್ಟ್ ಹೇಳಿದೆ. ಸಂಬಂಧವನ್ನು ಮತ್ತೆ ಸರಿಪಡಿಸಲಾಗದಷ್ಟು ಹಳಸಿದ್ದರೆ ದಂಪತಿಗಳನ್ನು ಸಂಬಂಧ ಮುಂದುವರಿಸಲು ಕಾನೂನಾತ್ಮಕವಾಗಿ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ.
ಏನಿದು ಪ್ರಕರಣ:
2015ರಲ್ಲಿ ಕೇರಳದ ಎಂಜಿನಿಯರ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್, ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಯನ್ನು ಮದುವೆಯಾಗಿದ್ದರು. ಆದರೆ ಮದುವೆಯಾದ ಕಳೆ ತಿಂಗಳಲ್ಲಿ ಇವರ ಸಂಬಂಧ ಹಳಸಿತ್ತು. ಹೀಗಾಗಿ ಇಬ್ಬರು ಬೇರೆ ಬೇರೆಯಾಗಿ ಜೀವನ ಸಾಗಿಸಲು ಆರಂಭಿಸಿದ್ದಾರೆ. ಪತ್ನಿಯಿಂದ ವಿಚ್ಚೇದನ ಕೋರಿ ಪತಿ ನೆಡುಂಗಾಡ್ ಕೌಟುಂಬಿ ನ್ಯಾಯಾಲಕ್ಕೆ ಮನವಿ ಮಾಡಿದ್ದರು.
ಈ ಅಜ್ಜಿ ಭಾರಿ ಹುಷಾರು ಮರೆ... 70ಕ್ಕೆ ಡಿವೋರ್ಸ್ 73ಕ್ಕೆ ಹೊಸ ಲವ್
ಅರ್ಜಿಯಲ್ಲಿ ಪತ್ನಿ ತನ್ನ ಕುಟುಂಬದ ಜೊತೆ ಹೊಂದಿಕೊಳ್ಳುತ್ತಿಲ್ಲ. ತಾಯಿ, ತಂಗಿ ಹಾಗೂ ತನ್ನ ಜೊತೆ ನಿರಂತರ ಜಗಳ, ಮನಸ್ತಾಪ ನಡೆಯುತ್ತಿದೆ. ಹೀಗಾಗಿ ವಿಚ್ಚೇದನ ನೀಡಬೇಕು ಎಂದು ಅರ್ಜಿಯಲ್ಲಿ ಪತಿ ಮನವಿ ಮಾಡಿದ್ದರು. ಇದಕ್ಕೆ ಪ್ರತಿ ವಾದ ಮಂಡಿಸಿದ್ದ ಪತ್ನಿ ತನಗೆ ಪತಿ ಯಾವುದೇ ಪ್ರೀತಿ, ಸಹಕಾರ ನೀಡಿಲ್ಲ. ಗರ್ಭಿಯಾಗಿದ್ದ ಸಂದರ್ಭದಲ್ಲಿ ನನಗೆ ಸಿಗಬೇಕಾದ ಪ್ರೀತಿ, ಬೆಂಬಲ ಸಿಗಲಿಲ್ಲ ಎಂದು ವಾದಿಸಿದ್ದರು.
ಮದುವೆಯಾದ ಆರಂಭಿಕ ದಿನಗಳಲ್ಲೇ ಬೇರೆ ಬೇರೆಯಾದ ಕಾರಣ ಮಗುವಿನ ಶಾಶ್ವತ ಪಾಲನೆಗೆ ಸಲ್ಲಿಸಿದ್ದ ಅರ್ಜಿಯನ್ನು ನೆಡುಮಂಗಾಡ್ ಕೌಟುಂಬಿಕ ನ್ಯಾಯಾಲಯ ತಳ್ಳಿ ಹಾಕಿತ್ತು. ಇದರ ವಿರುದ್ದ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದ ಪತ್ನಿ ಅರ್ಜಿಯನ್ನು ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್ ಮಹತ್ವದ ಆದೇಶ ನೀಡಿದೆ.
Chanakya Niti: ವೈವಾಹಿಕ ಜೀವನ ಹಾಳು ಮಾಡುವ ಆರು ಅಭ್ಯಾಸಗಳು
ಗರ್ಭಿಯಾಗಿರುವಾಗಲೇ ಸಂಬಂಧ ಹಳಸಿ ದಂಪತಿಗಳು ಬೇರೆ ಬೇರೆಯಾಗಿದ್ದಾರೆ. ಪತಿ ಇದುವರೆಗೆ ಮಗುವಿನ ಪಾಲನೆಯಲ್ಲಿ, ಆರೈಕೆಯಾಗಲಿ ಮಾಡಿಲ್ಲ. ಮಗು ತಾಯಿ ಜೊತಗೆ ಇದೆ. ಮಗುವಿನ ಎಲ್ಲಾಪೋಷಣೆಯನ್ನು ತಾಯಿ ಮಾಡಿದ್ದಾರೆ. ಹೀಗಾಗಿ ಮಗುವಿನ ಭೇಟಿ ಹಾಗೂ ಮಗುವಿನ ಜೊತೆ ಕಾಲಕಳೆಯಲು ಅವಕಾಶ ಕೋರಿ ತಂದೆ ಕೌಟುಂಬಿಕ ನ್ಯಾಯಾಲಯಕ್ಕೆ ಮನವಿ ಮಾಡುವ ಹಕ್ಕಿಲ್ಲ ಎಂದು ಕೋರ್ಟ್ ಹೇಳಿದೆ.