Top 10 News ಮೋದಿ ಟ್ವಿಟರ್ ಖಾತೆ ಹ್ಯಾಕ್, ಬಿಜೆಪಿಗೆ ರಾಹುಲ್ ಗಾಂಧಿ ಕ್ಲಾಸ್!

By Suvarna NewsFirst Published Dec 12, 2021, 4:30 PM IST
Highlights

ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಹಿಂದುತ್ವವಾದಿ ಪಾಠದ ಮೂಲಕ ವಾಗ್ದಾಳಿ ನಡೆಸಿದ್ದಾರೆ.  2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಪ್ರಶಾಂತ್ ಕಿಶೋರ್ ತಂತ್ರಹೂಡಿದ್ದಾರೆ. ಪ್ರಧಾನಿ ಮೋದಿ ಟ್ವಿಟರ್ ಖಾತಗೆ ಕನ್ನ, ಯುವಿಗೆ ಹುಟ್ಟು ಹಬ್ಬದ ಸಂಭ್ರಮ ಸೇರಿದಂತೆ ಡಿಸೆಂಬರ್ 12ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Hindutva Politics: ಬಿಜೆಪಿಗೆ 'ಹಿಂದುತ್ವವಾದಿ' ಪಾಠ ಮಾಡಿದ ರಾಹುಲ್ ಗಾಂಧಿ!

 ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಮಹಾರಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Awantipora Encounter: ಜಮ್ಮು ಮತ್ತು ಕಾಶ್ಮೀರದಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ

ಜಮ್ಮು ಮತ್ತು ಕಾಶ್ಮೀರದ (Jammu and Kashmir) ಅವಂತಿಪೋರಾದಲ್ಲಿ (Awantipora) ಭದ್ರತಾಪಡೆಗಳು ಎನ್ಕೌಂಟರ್ (Encounter) ನಡೆಸಿದ್ದು, ಓರ್ವ ಉಗ್ರನನ್ನು ಹತ್ಯೆ ಮಾಡಿದೆ ಎಂದು ವರದಿ ತಿಳಿಸಿದೆ. ಅವಂತಿಪೋರಾದ ಬರಗಾಮ್ ಎಂಬ ಪ್ರದೇಶದಲ್ಲಿ ಉಗ್ರರು (Terrorist) ಅಡಗಿಕುಳಿತಿರುವ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಭದ್ರತಾಪಡೆಗಳು (Security Force) ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.

Lok Sabha Polls: 2024ರ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಪಿಕೆ ಫಾರ್ಮುಲಾ ರೆಡಿ, ಕಾಂಗ್ರೆಸ್‌ಗೂ ಶಾಕ್!

ಲೋಕಸಭೆ ಚುನಾವಣೆಗೆ (Lok Sabha Election) ಇನ್ನೆರಡು ವರ್ಷ ಬಾಕಿ ಇದೆ. ಚುನಾವಣೆಗೂ ಮುನ್ನ ಪ್ರತಿಪಕ್ಷಗಳಲ್ಲಿ ಒಡಕು ಮೂಡಿದೆ. ಹೀಗಿರುವಾಗಲೇ ಅತ್ತ, ಎಲ್ಲಾ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುವಷ್ಟು ಶಕ್ತಿಯನ್ನು ಸಂಗ್ರಹಿಸಲು ಕಾಂಗ್ರೆಸ್‌ಗೆ (Congress) ಸಾಧ್ಯವಾಗುತ್ತಿಲ್ಲ.

PM Narendra Modi: ಪ್ರಧಾನಿ ಮೋದಿ ಟ್ವೀಟರ್‌ ಖಾತೆ ಹ್ಯಾಕ್: ಬಿಟ್‌ಕಾಯಿನ್ ಕುರಿತು ಪೋಸ್ಟ್!

: ಭಾನುವಾರ ಮುಂಜಾನೆ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟರ್ (PM Narendra Modi Twitter) ಹ್ಯಾಂಡಲ್ ಹ್ಯಾಕ್ವ(Hack) ಮಾಡಲಾಗಿದ್ದು ಕ್ರಿಪ್ಟೋಕರೆನ್ಸಿಯನ್ನು (Cryptocurrency) ಉತ್ತೇಜಿಸುವ ಟ್ವೀಟ್ ಪೋಸ್ಟ್‌  ಮಾಡಲಾಗಿತ್ತು. 

Yuvraj Singh Birthday : ಸಿಕ್ಸರ್ ಕಿಂಗ್ ಕುರಿತಾಗಿ ನಿಮಗೆ ಗೊತ್ತಿಲ್ಲದ ಕೆಲ ಸಂಗತಿಗಳು!

ಟೀಮ್ ಇಂಡಿಯಾ (Team India) ಮಾಜಿ ಕ್ರಿಕೆಟಿಗ, 2007ರ ಟಿ20 ವಿಶ್ವಕಪ್ (2007 T20 World Cup) ಹಾಗೂ 2011ರ ಏಕದಿನ ವಿಶ್ವಕಪ್  (2011 ODI World Cup)ಗೆಲುವಿನ ಹೀರೋ ಯುವರಾಜ್ ಸಿಂಗ್ (Yuvraj Singh) ಭಾನುವಾರ ತಮ್ಮ 40ನೇ ವರ್ಷ್ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.

Katrina Vicky Wedding: 17 ಲಕ್ಷದ ಕೆಂಪು ಲೆಹೆಂಗಾದಲ್ಲಿ ಕತ್ರಿನಾ

ಡೀ ಭಾರತೀಯ ಚಿತ್ರರಂಗವೇ ನೋಡಲು ಕಾಯುತ್ತಿದ್ದ ಕತ್ರಿನಾ ಮತ್ತು ವಿಕ್ಕಿ ವಿವಾಹ ಅದ್ಧೂರಿಯಾಗಿ ಆಪ್ತರ ಸಮ್ಮುಖದಲ್ಲಿ ನಡೆದಿದೆ. ರಾಜಸ್ಥಾನದಲ್ಲಿ ಪ್ರೈವೇಟ್ ಹೋಟೆಲ್‌ನಲ್ಲಿ ಮದುವೆ ಆದ ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾರೆ. ಕೆಂಪು ಬಣ್ಣದ ಸಬ್ಯಸಾಚಿ ಲೆಹೆಂಗಾದಲ್ಲಿ ಕಾಣಿಸಿಕೊಂಡಿರುವ ಕತ್ರಿನಾ 17 ಲಕ್ಷ ರೂ ಕೊಟ್ಟಿದ್ದಾರಂತೆ. ಬೆಲೆ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. 

Top 5 SUV cars ಟಾಟಾ ಪಂಚ್ to ಮಹೀಂದ್ರ XUV700,ಈ ವರ್ಷ ಬಿಡುಗಡೆಯಾದ ಅತ್ಯುತ್ತಮ ಕಾರು!

 ಪ್ರಸಕ್ತ ವರ್ಷಕ್ಕೆ(Year End 2021) ಗುಡ್ ಬೈ ಹೇಳಿ, ಹೊಸ ವರ್ಷ(New Year 2022) ಬರಮಾಡಿಕೊಳ್ಳಲು ಎಲ್ಲರೂ ಸಜ್ಜಾಗಿದ್ದಾರೆ. ಹೊಸ ವರ್ಷದಲ್ಲಿ ಹೊಸ ಕಾರುಗಳು ಬಿಡುಗಡೆಯಾಗುತ್ತಿದೆ. ಆದರೆ ಈ ವರ್ಷ ಅಂದರೆ 2021ರಲ್ಲಿ ಹಲವು ಕಾರುಗಳು(New cars) ಬಿಡುಗಡೆಯಾಗಿದೆ. ಕೆಲ ಕಾರುಗಳು ಭಾರತದ ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವರ್ಷ ಬಿಡುಗಡೆಯಾಗಿ ಅತ್ಯುತ್ತಮ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾದ 5 ಕಾರುಗಳ(2021 Top 5 cars)  ವಿವರ ಇಲ್ಲಿದೆ.

Karnataka Politics: ಯುಟರ್ನ್ ಹೊಡೆದ ಸಿಎಂ ಇಬ್ರಾಹಿಂ, ಸಿದ್ದರಾಮಯ್ಯ ಮುಂದೆ ಮಹತ್ವದ ಬೇಡಿಕೆ

 ಒಂದು ಕಡೆ ಕಾಂಗ್ರೆಸ್ (Congress) ಪಕ್ಷದ ಕಾರ್ಯವೈಖರಿಯನ್ನು ಟೀಕಿಸುತ್ತಾ, ಇನ್ನೊಂದು ಕಡೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರನ್ನು (HD Devegowda) ಹೊಗಳಲು ಆರಂಭಿಸಿದ್ದ ಸಿ.ಎಂ. ಇಬ್ರಾಹಿಂ(CM Ibrahim), ಬಹುತೇಕ ಜೆಡಿಎಸ್ ಸೇರಲಿದ್ದಾರೆ ಎನ್ನುವ ಸುದ್ದಿ ಜೋರಾಗಿತ್ತು. ಈ ನಡುವೆ, ಅವರು ಕಾಂಗ್ರೆಸ್ ಬಿಟ್ಟು ಹೋಗದಂತೆ ವಿದ್ಯಮಾನಗಳು ನಡೆದಿವೆ.

click me!